ಕೌಟುಂಬಿಕ, ಸಾಮಾಜಿಕ ಸಾಮರಸ್ಯ ಕಾಪಾಡಿ: ಭುವನೇಶ್ವರಿ ಪಾಟೀಲ

KannadaprabhaNewsNetwork |  
Published : Apr 28, 2025, 11:47 PM IST
ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ಕೌಟುಂಬಿಕ ಸಾಮರಸ್ಯವೂ ಸೇರಿದಂತೆ ಸಮಾಜದಲ್ಲಿ ಒಂದಾಗಿ ಬದುಕುವ ಅಗತ್ಯವಿದೆ.

ಹಾನವಲ್ಲ: ಭಾರತದ ಸಂವಿಧಾನ ಜಾತಿ, ಮತ, ಗಂಡು, ಹೆಣ್ಣೆಂಬ ಭೇದವಿಲ್ಲದಂತೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಎಲ್ಲರೂ ಅರ್ಹರು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಭುವನೇಶ್ವರಿ ಪಾಟೀಲ ತಿಳಿಸಿದರು.ತಾಲೂಕಿನ ಸಮ್ಮಸಗಿಯಲ್ಲಿ ಲೋಯಲಾ ವಿಕಾಸ ಕೇಂದ್ರ ಹಾಗೂ ಲೋಯಲಾ ಪ್ರಗತಿ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ದಿನಗಳಲ್ಲಿ ಕೌಟುಂಬಿಕ ಸಾಮರಸ್ಯವೂ ಸೇರಿದಂತೆ ಸಮಾಜದಲ್ಲಿ ಒಂದಾಗಿ ಬದುಕುವ ಅಗತ್ಯವಿದೆ. ನಮ್ಮಲ್ಲಿ ಯಾವುದೇ ಭೇದಗಳಿಗೆ ಎಡೆ ಮಾಡಿಕೊಡದೇ ಆರ್ಥಿಕ ಸಾಮಾಜಿಕ ಹಿತವನ್ನು ಸಾಧಿಸಬೇಕಾಗಿದೆ ಎಂದರು.ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತಿ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ಹೇಮಾವತಿ ದೊಡ್ಡಮನಿ, ಗೀತಾ ಗೊಲ್ಲರ, ಚನ್ನಮ್ಮ ಮಡಿವಾಳರ, ಶಾಂತಾ ಗೊಲ್ಲರ, ಜೆರಾಲ್ಡ್ ಡಿಸೋಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಶ್ರದ್ಧಾಂಜಲಿ: ಇದೇ ಸಂದರ್ಭದಲ್ಲಿ ಪಹಲ್ಗಾಂ ಉಗ್ರರ ದಾಳಿಗೆ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲದೆ ಈ ದಾಳಿಯನ್ನು ಖಂಡಿಸಲಾಯಿತು. ಗುದ್ದಲೀಶಿವಯೋಗಿಗಳ ಗದ್ದುಗೆ ಪ್ರಾಣ ಪ್ರತಿಷ್ಠಾಪನೆ

ಹಾವೇರಿ: ಗುದ್ದಲೀಶಿವಯೋಗಿಗಳ ಗದ್ದುಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಷಷ್ಟಬ್ಧಿ ಸಮಾರಂಭ ಮೇ 2ರಂದು ಬೆಳಗ್ಗೆ 11 ಗಂಟೆಗೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆಯಲಿದೆ.

ಏ. 30ರಂದು ಬೆಳಗ್ಗೆ 7.30ಕ್ಕೆ ಹೊಸರಿತ್ತಿ ಗುದ್ದಲೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುದ್ದಲೀಶ್ವರ ನಿವಾಸ ಗೃಹ ಪ್ರವೇಶ ಹಾಗೂ ಗುದ್ದಲೀಶಿವಯೋಗಿಗಳ ಗದ್ದುಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.ಮೇ 2ರಂದು ಬೆಳಗ್ಗೆ 11 ಗಂಟೆಗೆ ವೇ.ಮೂ ವೀರಯ್ಯನವರು ಚರಂತಿಮಠ ಹಾಗೂ ಮೇ.ಮೂ. ಗದಿಗಯ್ಯನವರು ಚರಂತಿಮಠ ಅವರ ಷಷ್ಟಬ್ದಿ ಸಮಾರಂಭ ಹಾಗೂ ತುಲಾಭಾರ ಕಾರ್ಯಕ್ರಮ ಜರುಗಲಿದೆ. ಹೊಸರಿತ್ತಿ ಗುದ್ದಲೀಶ್ವರ ಮಠದ ಗುದ್ದಲೀಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಹತ್ತಿಮತ್ತೂರಿನ ನಿಜಗುಣ ಸ್ವಾಮೀಜಿ, ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಹಾವೇರಿಯ ಸದಾಶಿವ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಹೊಳಲಿನ ಚನ್ನಬಸವ ದೇವರು, ಚರಂತೇಶ್ವರಮಠದ ಶಿವಾನಂದ ದೇವರು, ಯರನಾಳದ ಶಿವಪ್ರವಾಸ ದೇವರು ಸಾನ್ನಿಧ್ಯ ವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಮೇ.ಮೂ. ಗದಿಗಯ್ಯನವರು ಚರಂತಿಮಠ ಅವರ ತುಲಾಭಾರ ಜರುಗಲಿದ್ದು, ಹಿರೇಕೊಳಚಿ ವೇ. ಸಿದ್ದಲಿಂಗಸ್ವಾಮಿ ಹಿರೇಮಠ ಅವರಿಂದ ಸಂಗೀತ ಸೇವೆ ನಡೆಯಲಿದೆ.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ