ಆಧ್ಯಾತ್ಮಿಕ ಜೀವನಶೈಲಿ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ

KannadaprabhaNewsNetwork |  
Published : Oct 11, 2025, 12:02 AM IST
49 | Kannada Prabha

ಸಾರಾಂಶ

ಮನಸ್ಸು ಪ್ರಜ್ಞೆ ಮತ್ತು ಆಲೋಚನೆಗಳಿಂದ ವ್ಯಕ್ತವಾಗುವುದರಿಂದ ಅದರಲ್ಲಿ ಉಗಮಿಸುವ ವಿಭಿನ್ನ ಬಗೆಯ ಆಲೋಚನೆಗಳಿಂದ ಅದು ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳನ್ನು ತಂದುಕೊಳ್ಳುವುದರಿಂದ ಮನಸ್ಸನ್ನು ಸಕಾರಾತ್ಮಕಭಾವಗಳುಂಟಾಗುವ ದಿಕ್ಕಿನಲ್ಲಿ ಬಾಲ್ಯದಲ್ಲಿಯೇ ತರಬೇತಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸುಯೋಗ್ ನರ್ಸಿಂಗ್ ಕಾಲೇಜು ಮತ್ತು ಸುಯೋಗ್ ಆಸ್ಪತ್ರೆ ಸಂಯುಕ್ರಾಶ್ರಯದಲ್ಲಿ ಶುಕ್ರವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ವಿದ್ಯಾರ್ಥಿಗಳು ಮತ್ತು ರೋಗಿಗಳಿಂದ ಮಾನಸಿಕ ಆರೋಗ್ಯದ ಬಗ್ಗೆ ಅವರ ಚಿಂತನೆಗಳ ಅಭಿವ್ಯಕ್ತಿ ಎಂಬ ಕಾರ್ಯಕ್ರಮ ಉದ್ಘಾಟಿಸಿದ ಸುಯೋಗ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರು ಮತ್ತು ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಸೃಷ್ಟಿಯಲ್ಲಿ ಮನುಷ್ಯನ ಮನಸ್ಸು ಮತ್ತು ಮೆದುಳು ಅತ್ಯಂತ ಅದ್ಭುತವಾದ ಸೃಷ್ಟಿಗಳೆಂದು ವರ್ಣಿಸಿ ಅದರಲ್ಲೂ ಮನುಷ್ಯನ ಮನಸ್ಸಿಗೆ ಇಡೀ ಸೃಷ್ಟಿಯನ್ನೇ ಆಳುವ ಅಥವಾ ವಿನಾಶ ಮಾಡುವ ಸಾಮರ್ಥ್ಯ ಇರುವುದರಿಂದ ಅದನ್ನು ಸರಿದಾರಿಯಲ್ಲಿ ತರಬೇತುಗೊಳಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಮನಸ್ಸು ಪ್ರಜ್ಞೆ ಮತ್ತು ಆಲೋಚನೆಗಳಿಂದ ವ್ಯಕ್ತವಾಗುವುದರಿಂದ ಅದರಲ್ಲಿ ಉಗಮಿಸುವ ವಿಭಿನ್ನ ಬಗೆಯ ಆಲೋಚನೆಗಳಿಂದ ಅದು ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳನ್ನು ತಂದುಕೊಳ್ಳುವುದರಿಂದ ಮನಸ್ಸನ್ನು ಸಕಾರಾತ್ಮಕಭಾವಗಳುಂಟಾಗುವ ದಿಕ್ಕಿನಲ್ಲಿ ಬಾಲ್ಯದಲ್ಲಿಯೇ ತರಬೇತಿಗೊಳಿಸಬೇಕು ಎಂದರು.

ಇದರಲ್ಲಿ ಪೋಷಕರು ಮತ್ತು ಪರಿಸರದ ಪಾತ್ರ ಅತ್ಯವಶ್ಯಕ ಎಂದು ತಿಳಿಸಿ ಆಧುನಿಕ ಮಾನವನ ಮನಸ್ಸು ವೈಜ್ಞಾನಿಕವಾಗಿ ಬೆಳೆಯುತ್ತಿದ್ದರೂ ಆಧ್ಯಾತ್ಮಿಕ ಚಿಂತನೆಗಳಿಲ್ಲದೇ ಅಶಾಂತಿಯಿಂದ ನರಳುತ್ತಿದೆ. ಆಧ್ಯಾತ್ಮಿಕ ಜೀವನಶೈಲಿಯಿಂದ ಮಾತ್ರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದು, ಯೋಗ ಇದಕ್ಕೆ ಪೂರಕವಾಗಿದ್ದು, ವಿಜ್ಞಾನದಿಂದ ಇದು ಸಾಧ್ಯವಿಲ್ಲ ಎಂದರು.

ಈ ವೇಳೆ ನರ್ಸಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆಯ ಬಗ್ಗೆ ಅಣುಕು ಪ್ರದರ್ಶನ ನೀಡಿ ಆತ್ಮಹತ್ಯೆ ತಡೆಗಟ್ಟುವ ದಿಕ್ಕಿನಲ್ಲಿ ಅರಿವು ಮೂಡಿಸಿದರು. ಸ್ಮಾರ್ಟ್ ಫೋನುಗಳು ಮತ್ತು ಸಾಮಾಜಿಕ ಜಾಲತಾಣಗಳಿಂದ ಮಾನಸಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ವಿಚಾರಸಂಕಿರಣದಲ್ಲಿ ಭಾಗವಹಿಸಿ ಇವುಗಳನ್ನು ಮಿತಿಯಾಗಿ ಜ್ಞಾನಸಂಪಾದನೆಗಾಗಿ ನಿಗದಿತ ಬೆಳಗಿನ ಅವಧಿಯಲ್ಲಿ ಮಾತ್ರ ಬಳಸಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸುಯೋಗ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಸೀಮಾ ಯೋಗಣ್ಣ, ಸುಯೋಗ್ ಅಲೈಡ್ ಪ್ರಾಂಶುಪಾಲೆ ಡಾ. ಸಂಗೀತಾ, ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಾಗಮಣಿ, ಮಾನಸಿಕ ಆರೋಗ್ಯ ತಜ್ಞೆ ಹಾಗೂ ಉಪನ್ಯಾಸಕಿ ಸಂಗೀತಾ ಇದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ