ಶಾಂತಿ, ಕೋಮು ಸಾಮರಸ್ಯ ಕಾಪಾಡಿ

KannadaprabhaNewsNetwork |  
Published : Nov 03, 2025, 02:30 AM IST
ಪೋಟೊ-೨ ಎಸ್.ಎಚ್.ಟಿ. ೨ಕೆ-ಶಾಂತಿ ಸಭೆಯಲ್ಲಿ ಗದಗ ಉಪ ವಿಭಾಗದ ಡಿಎಸ್‌ಪಿ ಮುರ್ತುಜಾ ಖಾದ್ರಿ ಶ್ರೀ ಜಗದ್ಗುರು ಫಕೀರ ಸಿದ್ದರಾಮ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. | Kannada Prabha

ಸಾರಾಂಶ

ಶಿರಹಟ್ಟಿ ಫಕೀರೇಶ್ವರ ಮಠವು ಹಿಂದೂ-ಮುಸ್ಲಿಂ ಸಾಮರಸ್ಯ ಸಂದೇಶ ಸಾರುತ್ತಿದೆ. ಇಂತಹ ಸಾಮರಸ್ಯದ ಸಂದೇಶ ಎಲ್ಲರೂ ಪಾಲಿಸಬೇಕು. ಜಾತಿ, ಮತ, ಪಂಥ ಎನ್ನದೆ ಭಾವೈಕ್ಯತೆಯಿಂದ ನಡೆಯಬೇಕು.

ಶಿರಹಟ್ಟಿ:

ಶಿರಹಟ್ಟಿ ಪಟ್ಟಣವು ಭಾವೈಕ್ಯತೆಯ ನಗರವಾಗಿದ್ದು, ಸರ್ವ-ಧರ್ಮದವರನ್ನು ಸಮಾನತೆಯಿಂದ ಕಾಣುವ ಭಾವೈಕ್ಯ ಮಠವಿದೆ. ಇದು ದೇಶಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರೂ ಶಾಂತಿ ಹಾಗೂ ಕೋಮು ಸಾಮರಸ್ಯವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಗದಗ ಉಪ ವಿಭಾಗದ ಡಿಎಸ್‌ಪಿ ಮುರ್ತುಜಾ ಖಾದ್ರಿ ಹೇಳಿದರು.

ಪಟ್ಟಣದ ಶ್ರೀಜಗದ್ಗುರು ಫಕೀರೇಶ್ವರ ಮಠದಲ್ಲಿ ಫಕೀರ ಸಿದ್ದರಾಮ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ತಿಂಗಳು ಪಟ್ಟಣದಲ್ಲಿ ಹಣಕಾಸಿನ ವ್ಯವಹಾರಕ್ಕೆ ನಡೆದ ಸಂಘರ್ಷ ಸರಿಯಾದ ಬೆಳವಣಿಗೆಯಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ತಿಳಿ ಹೇಳಿದರು.

ಶಿರಹಟ್ಟಿ ಫಕೀರೇಶ್ವರ ಮಠವು ಹಿಂದೂ-ಮುಸ್ಲಿಂ ಸಾಮರಸ್ಯ ಸಂದೇಶ ಸಾರುತ್ತಿದೆ. ಇಂತಹ ಸಾಮರಸ್ಯದ ಸಂದೇಶ ಎಲ್ಲರೂ ಪಾಲಿಸಬೇಕು. ಜಾತಿ, ಮತ, ಪಂಥ ಎನ್ನದೆ ಭಾವೈಕ್ಯತೆಯಿಂದ ನಡೆಯಬೇಕು ಎಂದು ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ, ಸಮಾಜದಲ್ಲಿ ಜಾತಿ ತಾರತಮ್ಯ ಬರಬಾರದು. ದ್ವೇಷ ಬಿಡು ಪ್ರೀತಿ ಮಾಡು ಎಂಬ ಶ್ರೀಮಠದ ವಾಣಿಯಂತೆ ಎಲ್ಲರೂ ನಡೆದುಕೊಳ್ಳಬೇಕು. ಮನೆ-ಮನೆಯ ಮನಸ್ಸುಗಳನ್ನು ಒಗ್ಗೂಡಿಸಿ ಜೀವನದಲ್ಲಿ ಸಾಮರಸ್ಯದ ಸಹಬಾಳ್ವೆ ಸಾಗಿಸಬೇಕು ಎಂದರು.

ತಹಸೀಲ್ದಾರ್‌ ಕೆ. ರಾಘವೇಂದ್ರ ರಾವ್, ಸಿಪಿಐ ಬಿ.ವಿ. ನಾಮಗೌಡ, ಪಿಎಸ್‌ಐ ಐ.ಎಚ್. ರಿತ್ತಿ, ಮುಖಂಡರಾದ ಚಂದ್ರಣ್ಣ ನೂರಶೆಟ್ಟರ್, ಹುಮಾಯೂನ್ ಮಾಗಡಿ, ಫಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಮುತ್ತು ಬಾವಿಮನಿ, ಮಂಜುನಾಥ್ ಘಂಟಿ, ಕೆ.ಎ. ಬಳಿಗೇರ, ಎಂ.ಕೆ. ಲಮಾಣಿ, ಚಾಂದ್‌ಸಾಬ್ ಮುಳುಗುಂದ, ಸಂದೀಪ್ ಕಪ್ಪತ್ತನವರ, ಅಜ್ಜುಗೌಡ ಪಾಟೀಲ, ರವಿ ಗುಡಿಮನಿ, ಸೋಮನಗೌಡ ಮರಿಗೌಡರ್ ಸೇರಿ ಅನೇಕರು ಇದ್ದರು. ಮಠದ ಪರವಾಗಿ ಅಧಿಕಾರಿಗಳನ್ನು ಶ್ರೀಗಳು ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ