ಕನ್ನಡಪ್ರಭ ವಾರ್ತ ರಬಕವಿ-ಬನಹಟ್ಟಿ
ಶಾಸಕರೊಡನೆ ಸೋಮವಾರ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯ ವಾರ್ಡ್ ನಂ.೧ ಸೇರಿ ಹಲವಾರು ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ರಬಕವಿ, ಬನಹಟ್ಟಿ ನಗರಸಭೆ, ತೇರದಾಳ ಮತ್ತು ಮಹಾಲಿಂಗಪುರ ಪುರಸಭೆಗಳಲ್ಲಿ ಅಂದಾಜು ₹೩ ಕೋಟಿ ವೆಚ್ಚದಲ್ಲಿ ೨೨ ಕಾಮಗಾರಿ ಕೈಗೊಳ್ಳಲಾಗುವುದು. ಅವುಗಳಲ್ಲಿ ಸದ್ಯ ಎಂಟು ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾರ್ವಜನಿಕರ ಸಹಕಾರ ಕೂಡ ಮುಖ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ, ಅರುಣ ಬುದ್ನಿ, ಯಲ್ಲಪ್ಪ ಕಟಗಿ, ಅಭಯ ಎಂಡೊಳ್ಳಿ, ದುರ್ಗವ್ವ ಹರಿಜನ, ಶಿವಾನಂದ ದೇಸಾಯಿ, ದೀಪಾ ಕೊಣ್ಣೂರ, ಪೂರ್ಣಿಮಾ ಮುಳೆಗಾವಿ, ಪಾಂಡು ಯರಕನ್ನವರ, ಶಿವು ಬುದ್ನಿ, ಮುರಾದ ಮೋಮಿನ್ ಸೇರಿದಂತೆ ಅನೇಕರಿದ್ದರು.