- ರೈತರಿಂದ ಪ್ರತಿ ಎಕರೆಗೆ 12 ಕ್ವಿಂ.ಗಳಂತೆ ಗರಿಷ್ಠ 50 ಕ್ವಿಂ. ಮೆಕ್ಕೆಜೋಳ ಖರೀದಿ: ಜಿ.ಎಂ.ಗಂಗಾಧರ ಸ್ವಾಮಿ
ಕನ್ನಡಪ್ರಭ ವಾರ್ತೆ ದಾವಣಗೆರೆ
2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಮೆಕ್ಕೆಜೋಳವನ್ನು ಡಿಸ್ಪಲರಿಗಳಿಂದ ಹಾಗೂ ಕುಕ್ಕಟ ಆಹಾರ ಉತ್ಪದನಾ ಘಟಕಗಳಿಂದ ಬರುವ ಬೇಡಿಕೆಗಳಿಗೆ ಅನುಸಾರ ನೋಂದಾಯಿತ ರೈತರಿಂದ, ಬೆಳೆಯ ಗುಟ್ಟಮಟ್ಟವನ್ನು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪರಿಶೀಲಿಸಿದ ನಂತರ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.ಮೆಕ್ಕೆಜೋಳವನ್ನು ಜ.13 ರಿಂದ ಖರೀದಿಸಲು ಪ್ರಾರಂಭಿಸಲಾಗಿದೆ. ರೈತರು ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘ, ಅವರಗೆರೆ ಮೊ: 70900- 52888 ಇಲ್ಲಿ ನೋಂದಾಯಿಸಕೊಳ್ಳಬಹುದು. ಎಪಿಎಂಸಿ ಆವರಣ ದಾವಣಗೆರೆ ಇಲ್ಲಿ ಖರೀದಿಸಲಾಗುವುದು.
ಪ್ರಸ್ತುತ ಕುಕ್ಕಟ ಆಹಾರ ಉತ್ಪಾದನಾ ಘಟಕದ ಬೇಡಿಕೆ 335 ಮೆಟ್ರಿಕ್ ಟನ್‌ಗೆ ಸೀಮಿತಗೊಳಿಸಲಾಗಿದೆ. ಸದರಿ ಬೇಡಿಕೆ ಪೂರೈಸುವವವರೆಗೆ ಮೆಕ್ಕೆಜೋಳವನ್ನು ಖರೀದಿಸಲಾಗುತ್ತದೆ. ಮೊದಲು ಬಂದ ರೈತರಿಗೆ ಆದ್ಯತೆ ನೀಡಿ ಸದರಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು. ರೈತರಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ಗಳಂತೆ ಗರಿಷ್ಠ 50 ಕ್ವಿಂ. ಮೆಕ್ಕೆಜೋಳ ಖರೀದಿಸಲಾಗುವುದು ಎಂದಿದ್ದಾರೆ.
ಫ್ರೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆ ಮುಖಾಂತರ ನೇರವಾಗಿ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಫ್ರೂಟ್ಸ್ ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಹಾಗೂ ಎಲ್ಲ ದಾಖಲೆಗಳಲ್ಲಿಯೂ ಒಂದೇ ಹೆಸರು ನಮೂದಾಗಿರುವ ಬಗ್ಗೆ ಮತ್ತು ಎನ್.ಸಿ,ಪಿ.ಐ. ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
- - -