ಮುಧೋಳ: ತಾವು ಕೆಳಜಾತಿಯಲ್ಲಿ ಜನಿಸಿದ ಕಾರಣಕ್ಕಾಗಿಯೇ ಮಾಡಿದ ಹಲವು ಪ್ರಮುಖ ಸಾಧನೆಗಳು ಮುನ್ನೆಲೆಗೆ ಬರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು, ಆದಾಗ್ಯೂ, ಇಂದಲ್ಲ ನಾಳೆ ಬಸವಣ್ಣ ಮತ್ತು ಸರ್ವಜ್ಞರ ಕನಸಿನ ಸಮಾನತೆಯ ಸಮಾಜ ನಿರ್ಮಾಣವಾಗಲಿದೆ ಭರವಸೆ ವ್ಯಕ್ತಪಡಿಸಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಬಸವಣ್ಣನವರು ಬಯಸಿದ್ದು ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿಗಳಿರುವ ವರ್ಗರಹಿತ ಸಮುದಾಯವನ್ನು. ಆದರೆ, ತಾವು ಕೆಳಜಾತಿಯಲ್ಲಿ ಜನಿಸಿದ ಕಾರಣಕ್ಕಾಗಿಯೇ ಮಾಡಿದ ಹಲವು ಪ್ರಮುಖ ಸಾಧನೆಗಳು ಮುನ್ನೆಲೆಗೆ ಬರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು, ಆದಾಗ್ಯೂ, ಇಂದಲ್ಲ ನಾಳೆ ಬಸವಣ್ಣ ಮತ್ತು ಸರ್ವಜ್ಞರ ಕನಸಿನ ಸಮಾನತೆಯ ಸಮಾಜ ನಿರ್ಮಾಣವಾಗಲಿದೆ ಭರವಸೆ ವ್ಯಕ್ತಪಡಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ಮಡಿವಾಳರ ಬೃಹತ್ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, 900 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ಖಂಡಿಸಿ ಸಮಾನತೆಯ ಸಂದೇಶ ನೀಡಿದ ವಿಶ್ವಗುರು ಬಸವಣ್ಣನವರ ತತ್ತ್ವಗಳನ್ನು ಪ್ರತಿಯೊಬ್ಬರೂ ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾಗ ಕಾಯಕ ಶರಣರ ಜಯಂತಿಗಳನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಲು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಆದೇಶ ಹೊರಡಿಸಿದ್ದನ್ನು ನೆನಪಿಸಿಕೊಂಡರು. ಸರ್ಕಾರದಿಂದ 23 ಸಾವಿರ ಶರಣರ ವಚನ ಪ್ರಕಟಿಸಲಾಗಿದೆ ಹಾಗೂ ಬಸವಣ್ಣನವರ 2,500 ವಚನಗಳನ್ನು 23 ಭಾಷೆಗಳಿಗೆ ಭಾಷಾಂತರಿಸಿ ವಿಶ್ವಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ಈ ಕಾರ್ಯದಲ್ಲಿ ಇಳಕಲ್ ಮತ್ತು ಗದಗಿನ ಸ್ವಾಮೀಜಿಗಳ ಕೊಡುಗೆ ಅಪಾರವಾದದು.
ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠದ ಶ್ರೀಗುರುಮಹಾಂತ ಸ್ವಾಮೀಜಿ, ಶಿರೂರಿನ ಬಸವಲಿಂಗ ಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಡಾ.ಬಸವಮಾಚಿದೇವ ಸ್ವಾಮೀಜಿ, ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಹಾಗೂ ತೆಲಸಂಗದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಸೇರಿದಂತೆ ವಿವಿಧ ಶ್ರೀಗಳು ಉಪಸ್ಥಿತರಿದ್ದರು.
ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಅರ್ಜುನ ಮಡಿವಾಳರ, ಜಿಲ್ಲಾಧ್ಯಕ್ಷ ಗೋಪಿ ಮಡಿವಾಳರ, ಉಪಾಧ್ಯಕ್ಷರಾದ ರಮೇಶ ಮಡಿವಾಳರ, ಸಂಗಪ್ಪ ಮಡಿವಾಳರ, ಪ್ರಧಾನ ಕಾರ್ಯದರ್ಶಿ ಬನಪ್ಪ ಮಡಿವಾಳರ, ಸಹ ಕಾರ್ಯದರ್ಶಿ ಪುಂಡಲೀಕ ಮಡಿವಾಳರ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸಂಗೀತಾ ಮಡಿವಾಳರ, ಜಿಲ್ಲಾಧ್ಯಕ್ಷೆ ಸುಲೋಚನಾ ಮಡಿವಾಳರ, ಉಪಾಧ್ಯಕ್ಷೆ ಮಲ್ಲಮ್ಮ ಪರೀಟ, ಪ್ರಧಾನ ಕಾರ್ಯದರ್ಶಿ ಪೂಜಾ ಮಡಿವಾಳರ, ತಾಲೂಕು ಅಧ್ಯಕ್ಷ ಮಲ್ಲಪ್ಪ ಮಡಿವಾಳರ, ಗೌರವ ಅಧ್ಯಕ್ಷ ಬಸವರಾಜ ಪರೀಟ, ಉಪಾಧ್ಯಕ್ಷ ಲಕ್ಷ್ಮಣ ಪರೀಟ, ಕವಿತಾ ಪರೀಟ, ಮಹೇಶ ಪರೀಟ, ವೀರೇಶ ಮಡಿವಾಳರ, ಪ್ರಭು ಪರೀಟ, ಸಂದೀಪ ಪರೀಟ, ಬಸವರಾಜ ಹ.ಪರೀಟ, ಸಂತೋಷ ಪರೀಟ, ವೆಂಕಟೇಶ ಅಗಸರ, ಸಾಗರ ಪರೀಟ, ಶ್ರೀಶೈಲ ಮಡಿವಾಳರ, ವಿಠ್ಠಲ ಮಡಿವಾಳರ ಸೇರಿದಂತೆ ಹಲವರು ಇದ್ದರು.ಬಸವಣ್ಣನವರ ಕಾಲದಲ್ಲಿ ಜಾತೀಯತೆ ಅತ್ಯಂತ ಕ್ರೂರವಾಗಿದ್ದು, ಕೆಳವರ್ಗದ ಜನರನ್ನು ಸ್ಪರ್ಶಿಸದ ವಾತಾವರಣವಿತ್ತು. ಅಂತಹ ಸನ್ನಿವೇಶದಲ್ಲೂ ಬಸವಣ್ಣನವರು ಶಿವಲಿಂಗ ಬಿಡಿದವನ ಕುಲವನರಸುವೆ?. ಶರಣ ಕುಲವನರಸಿದಡೆ ಕೂಡಲಸಂಗಮದೇವನೆಂತು ಒಲಿವನಯ್ಯ? ಎಂಬ ವಚನದ ಮೂಲಕ ಜಾತಿ ಪದ್ಧತಿಯನ್ನು ಅತ್ಯಂತ ಬಲಿಷ್ಠವಾಗಿ ಖಂಡಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.