ಕೊಟ್ಟೂರು: ದುಡಿಯುವ ಮತ್ತು ಸರ್ಕಾರಿ ಸೇವೆಯಲ್ಲಿನ ಪ್ರತಿಯೊಬ್ಬರ ದುಡಿಮೆಯ ಮೊತ್ತದ ಪೈಕಿ ಶೇ. 15 ರಿಂದ 20 ಪ್ರಮಾಣದ ಹಣವನ್ನು ತಂದೆ-ತಾಯಿಗಳ ಅಕೌಂಟ್ ಗೆ ಪ್ರತಿ ತಿಂಗಳು ಜಮಾ ಆಗುವ ರೀತಿಯಲ್ಲಿ ಸರ್ಕಾರ ಹೊಸ ಬಗ್ಗೆಯ ಕಾನೂನು ನಿಯಮಾವಳಿಗಳನ್ನು ತುರ್ತಾಗಿ ರೂಪಿಸಬೇಕೆಂದೆ ಎಂದು ಶ್ರೀ ಶೈಲ ಪೀಠದ ಜಗದ್ಗುರು ಡಾ ಚನ್ನಸಿದ್ದರಾಮ ಪಂಡಿತರಾಧ್ಯ ಮಹಾಸ್ವಾಮಿ ಹೇಳಿದರು.
ಇಲ್ಲಿನ ಚಾನುಕೋಟಿ ಮಠದ ಸಭಾಂಗಣದಲ್ಲಿ ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಚಾನುಕೋಟಿ ಮಠಧ್ಯಾಕ್ಷರ ಷಷ್ಟಿ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರತಿಯೊಬ್ಬರ ಪಾಲಿಗೆ ಜೀವಂತ ದೇವರುಗಳಾಗಿ ಕಂಗೊಳಿಸುವ ತಂದೆ-ತಾಯಿಗಳನ್ನು ಇತ್ತಿಚೇನ ದಿನಗಳಲ್ಲಿ ಹೆಚ್ಚಾಗಿ ವಿದ್ಯಾವಂತರು ಅನಾಥಶ್ರಮ ಮತ್ತು ವೃದ್ದಾಶ್ರಮಕ್ಕೆ ಪರಿಪಾಠ ಹೆಚ್ಚಾಗುತ್ತಿರುವುದು ಕಲಿತವರ ಜ್ಞಾನ ದಿವಾಳಿತನ ತೋರುತ್ತದೆ ಇದಕ್ಕೆ ಸರ್ಕಾರ ಸಂಪೂರ್ಣ ಕಡಿವಾಣ ಹಾಕಲು ಸೂಕ್ತ ನಿಯಮಾವಳಿ ಜಾರಿಗೆ ತಂದು ಮಕ್ಕಳಲ್ಲಿ ತಂದೆ ತಾಯಿಗಳನ್ನು ಜತೆಯಲ್ಲಿದ್ದು ಕಾಪಾಡಿಕೊಂಡು ಹೋಗಲು ಈ ರೀತಿಯ ಶಿಕ್ಷೆಯ ರೀತಿಯ ಕಾನೂನನ್ನು ರೂಪಿಸುವ ಮೂಲಕ ಅನಾಥಶ್ರಮ ಮತ್ತು ವೃದ್ದಾಶ್ರಮಕ್ಕೆ ಸೇರಿಸುವ ನೀಚಾ ಪ್ರವೃತ್ತಿಗೆ ಕಡಿವಾಣ ಹಾಕಬಹುದಾಗಿದೆ ಎಂದರು.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ, ಇಂತಹ ಮಹೋನ್ನತ ಕಾರ್ಯಕ್ರಮವನ್ನು ತಮ್ಮ ಷಷ್ಟಿ ಜಯಂತಿಯೊಂದಿಗೆ ಜನಮುಖಿಯಾಗಿ ಆಚರಿಸಿಕೊಳ್ಳುತ್ತಿರುವ ಡಾ ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳ ಸಾಮಾಜಿಕ ಕೊಡುಗೆ ಅಪಾರ ಎಂದರು.ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ನಾಡಿನ ಮಠ ಮಂದಿರಗಳು ನನ್ನ ದಾಸೋಹದೊಂದಿಗೆ ಅಕ್ಷರ ಕಲಿಸುವ ವಿದ್ಯಾಸಂಸ್ಥೆಗಳನ್ನು ನಾಡಿನಡೆ ಆರಂಭಿಸಿ ಬಹು ಸಂಖ್ಯಾತರಿಗೆ ಅಕ್ಷರ ದಾರಿದ್ರ್ಯ ಹೊಡೆದೊಡಿಸಿದ್ದು ನಿಜಕ್ಕೂ ಕ್ರಾಂತಿಕಾರಕ ಕೆಲಸ ಎಂದರು.
ಮಠ ಮಂದಿರಗಳ ಸ್ವಾಮೀಜಿಗಳು ತಮ್ಮ ಸಂಪೂರ್ಣ ಬದುಕನ್ನು ಸಮಾಜದ ಎಲ್ಲರ ಅಭಿವೃದ್ಧಿಗೆ ಮೀಸಲಾಗಿರಿಸಿರುವುದು ಮಾದರಿ ಮತ್ತು ನೆಮ್ಮದಿಯ ವಿಷಯ ಎಂದರು.ಕಾರ್ಯಕ್ರಮದ ಕಾರ್ಯಾಧ್ಯಕ್ಷ ಎಂಎಂಜಿ ಹರ್ಷವರ್ಧನ್ ಪ್ರಸ್ತಾವಿಕವಾಗಿ ಮಾತನಾಡಿದರು.
ಮುಖಂಡರುಗಳಾದ ಚೂಕ ಬಸವನಗೌಡ, ಚಾಪೆ ಚಂದ್ರಣ್ಣ, ಮರಿಸ್ವಾಮಿ, ಜಿ. ಸಿದ್ದಯ್ಯ, ತಹಸೀಲ್ದಾರ್ ಅಮರೇಶ್ ಜಿಕೆ, ಬಾದಾಮಿ ಮೃತ್ಯುಂಜಯ, ದ್ವಾರಕೇಶ್, ಮಂಜುನಾಥ ಗೌಡ, ಅಡಿಕೆ ಮಂಜುನಾಥ, ಕೂಡ್ಲಿಗಿ ಪೂರ್ತಿಗೇರಿ ಬೆಣ್ಣೆಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಮಠಾಧೀಶರುಗಳು ಚಾನುಕೋಟಿ ಮಠಾಧೀಶ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವೇದಿಕೆಯಲ್ಲಿದ್ದರು. ಎಸ್.ಎಂ.ಮರಳುಸಿದ್ದಯ್ಯ ನಿರೂಪಿಸಿದರು.