ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ

KannadaprabhaNewsNetwork |  
Published : Oct 15, 2026, 03:00 AM IST
ಇಂಡಿ | Kannada Prabha

ಸಾರಾಂಶ

ಪಕ್ಷದಲ್ಲಿ ದುಡಿದ ಬಡ ಕಾರ್ಯಕರ್ತನಿಗೂ ಪಕ್ಷದಲ್ಲಿ ನ್ಯಾಯ ಸಿಗಲಿದೆ. ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳು ಯಾರೇ ಸ್ಪರ್ಧಿಸಿದರೂ ಅವರು ಪಕ್ಷದ ಅಭ್ಯರ್ಥಿ ಎಂದು ತಿಳಿದು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪಕ್ಷದಲ್ಲಿ ದುಡಿದ ಬಡ ಕಾರ್ಯಕರ್ತನಿಗೂ ಪಕ್ಷದಲ್ಲಿ ನ್ಯಾಯ ಸಿಗಲಿದೆ. ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳು ಯಾರೇ ಸ್ಪರ್ಧಿಸಿದರೂ ಅವರು ಪಕ್ಷದ ಅಭ್ಯರ್ಥಿ ಎಂದು ತಿಳಿದು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಕರೆ ನೀಡಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಕಾಂಕ್ಷಿ ಅಭ್ಯರ್ಥಿಗಳು ಇಂದಿನಿಂದಲೇ ಕ್ಷೇತ್ರದಲ್ಲಿ ಜನರ ಬಾಗಿಲಿಗೆ ಹೋಗಿ ಜನರ ಸೇವೆ ಮಾಡಬೇಕು. ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಈ ಬಾರಿ ಜಿಪಂ ತಾಪಂ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರುತ್ತದೆ. ಪಕ್ಷದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಪರ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು.ಬಿಜೆಪಿ ಮುಖಂಡಾದ ಅನೀಲ ಜಮಾದಾರ, ಅಣ್ಣಪ್ಪಸಾಹುಕಾರ ಖೈನೂರ, ಮಲ್ಲಿಕಾರ್ಜುನ ಕಿವಡೆ, ಎಸ್.ಎ.ಪಾಟೀಲ, ಭೀಮಸಿಂಗ್‌ ರಾಠೋಡ ಮಾತನಾಡಿ, ಇದು ಕಾರ್ಯಕರ್ತರ ಚುನಾವಣೆ. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೆ ನ್ಯಾಯಕೊಡಿಸುವ ಚುನಾವಣೆ. ವಿಧಾನಸಭೆ ಗೆಲುವಿಗೆ ಮೊದಲ ಮೆಟ್ಟಿಲು ಜಿಪಂ ತಾಪಂ ಚುನಾವಣೆ. ಪ್ರಾಮಾಣಿಕತೆಯಿಂದ ಬೂತಮಟ್ಟದಿಂದ ಕೆಲಸ ನಡೆಯಬೇಕು. ಎಸ್‌ಐಆರ್ ಮುಗಿದ ಮೇಲೆ ಮೊದಲ ಮತದಾನ.ಶುದ್ಧ ಮತದಾರರ ಪಟ್ಟಿ ಹೊರಬರುತ್ತಿದ್ದು, ಶೇ.90 ರಷ್ಟು ಮತದಾನ ಆಗಲಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾಗುತ್ತದೆ. ಬೂತಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರು ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಇಳಿಯಬೇಕು. ಪಕ್ಷಕ್ಕೆ ಶಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು. ಪಕ್ಷ ಸಮರ್ಥವಾಗಿ ಕಟ್ಟಬೇಕು. ಚುನಾವಣಾ ಹಂತದ ಶೂರತನ ಕೊನೆಯವರೆಗೆ ತೊರಿಸಬೇಕು. ಪಕ್ಷ ಘೋಷಿಸಿದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಶೀಲವಂತ ಉಮರಾಣಿ, ಸಿದ್ದಲಿಂಗ ಹಂಜಗಿ, ರಾಘವೇಂದ್ರ ಕಾಪಸೆ, ರಾಜಕುಮಾರ ಸಗಾಯಿ, ದೇವೆಂದ್ರ ಕುಂಬಾರ, ಬಿ.ಎಸ್.ಪಾಟೀಲ, ರವಿ ವಗ್ಗೆ, ಬಸಮ್ಮ ಮರಡಿ, ಸಂತೋಷಗೌಡ ಪಾಟೀಲ, ಧರ್ಮರಾಯ ಮದರಖಂಡಿ, ಶಾಂತು ಕಂಬಾರ, ಅಂಬುರಾಯ ಕವಟಗಿ, ಮಲ್ಲುಗೌಡ ಬಿರಾದಾರ, ಪುಟ್ಟುಗೌಡ ಪಾಟೀಲ, ವಿಜು ಮಾನೆ, ಸಾಗರ ಬಿರಾದಾರ, ಪ್ರಶಾಂತ ಗವಳಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.ಪ್ರಬುದ್ದ ಮತದಾರರಿದ್ದು, ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳು, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜನವಿರೋಧ ನೀತಿ ಜನರಿಗೆ ತಿಳಿಸಬೇಕು. ಈ ಬಾರಿ ಪಕ್ಷದ ಅಭ್ಯರ್ಥಿ ಗೆದ್ದು ವಿಧಾನಸಭೆಗೆ ಕಳುಹಿಸುವ ಕೆಲಸ ಕಾರ್ಯಕರ್ತರು, ಮುಖಂಡರು ಮಾಡಬೇಕು. ಸ್ವಾರ್ಥ,ಸ್ವಜಾತಿ ಪ್ರೇಮ ಬಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಜಿಪಂ ತಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಲು ಶ್ರಮಿಸಬೇಕು.

-ಹಣಮಂತ್ರಾಯಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ, ಲಕ್ಷ್ಮಣ ಸೌದಿ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಹಾಗೂ ಯಡಿಯೂರಪ್ಪನವರಿಗೆ ಸಿಎಂ ಹುದ್ದೆಯಿಂದ ಇಳಿಸಿದ್ದು ಇವೆಲ್ಲವುಗಳು 2023 ರಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ಬಿದ್ದು ಸೀಟುಗಳು ಕಳೆದುಕೊಳ್ಳಬೇಕಾಯಿತು. ನನ್ನ ಚುನಾವಣೆಯಲ್ಲಿ ಕೆಲ ಬಿಜೆಪಿ ಮುಖಂಡರು ಪ್ರಯತ್ನ ಮಾಡಲಿಲ್ಲ ಮನಸ್ಸಿಗೆ ನೋವಾಗಿದೆ.

-ಕಾಸುಗೌಡ ಬಿರಾದಾರ,

ಬಿಜೆಪಿ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ