ಬೇಲೂರನ್ನು ತಾಲೂಕನ್ನು ರಾಜ್ಯಕ್ಕೆ ಮಾದರಿಯಾಗಿಸಿ

KannadaprabhaNewsNetwork |  
Published : Jul 10, 2025, 01:46 AM IST
9ಎಚ್ಎಸ್ಎನ್13 : ಬೇಲೂರು  ತಾಲೂಕಿನ  ಅರೇಹಳ್ಳಿ ನಾಡಕಚೇರಿಯಲ್ಲಿ  ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಮೊಬೈಲ್ ಫೋನ್ ಆ್ಯಪ್ ಮತ್ತು ಲ್ಯಾಪ್‌ಟಾಪ್ ಆಫ್ ಮೂಲಕ ಇ ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು. ನಾಲ್ಕೈದು ತಲೆಮಾರುಗಳಿಂದ ಖಾತೆಗಳಾಗದೆ ಬಾಕಿ ಉಳಿದಿರುವ ಜಮೀನಿನ ಖಾತೆಗಳನ್ನು ಸಂಬಂಧಪಟ್ಟ ವಾರಸುದಾರರ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಆಂದೋಲನದ ಮುಖೇನ ಬದಲಾವಣೆಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಿ ನಮ್ಮ ತಾಲೂಕನ್ನು ಈ ಆಂದೋಲನದ ಮುಖೇನ ರಾಜ್ಯಕ್ಕೆ ಮಾದರಿಯಾಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಲೆನಾಡು ಭಾಗದಲ್ಲಿ ಇತರೆ ಹೋಬಳಿಗಳನ್ನು ಹೋಲಿಸಿಕೊಂಡರೆ ಕೇಂದ್ರ ಕಚೇರಿಗೆ ಬರಲು ಬಹಳಷ್ಟು ದೂರವಿದ್ದ ಸರ್ಕಾರದ ಮಾಹಿತಿ ರವಾನಿಸಲು ಹಾಗು ಸೌಲಭ್ಯ ಒದಗಿಸಲು ಕಷ್ಟವಾಗಿರುವುದರಿಂದ ಈ ಭಾಗದಿಂದಲೇ ಇ- ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ತಾಲೂಕಿನ ಅರೇಹಳ್ಳಿ ಹೋಬಳಿಯ ನಾಡಕಚೇರಿಯಲ್ಲಿ ಇಂದು ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಮೊಬೈಲ್ ಫೋನ್ ಆ್ಯಪ್ ಮತ್ತು ಲ್ಯಾಪ್‌ಟಾಪ್ ಆಫ್ ಮೂಲಕ ಇ ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು. ನಾಲ್ಕೈದು ತಲೆಮಾರುಗಳಿಂದ ಖಾತೆಗಳಾಗದೆ ಬಾಕಿ ಉಳಿದಿರುವ ಜಮೀನಿನ ಖಾತೆಗಳನ್ನು ಸಂಬಂಧಪಟ್ಟ ವಾರಸುದಾರರ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಆಂದೋಲನದ ಮುಖೇನ ಬದಲಾವಣೆಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಿ ನಮ್ಮ ತಾಲೂಕನ್ನು ಈ ಆಂದೋಲನದ ಮುಖೇನ ರಾಜ್ಯಕ್ಕೆ ಮಾದರಿಯಾಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನೂರಾರು ವರ್ಷಗಳಿಂದ ಪೌತಿ (ಮರಣ). ಹೊಂದಿದವರ ಜಮೀನಿನ ಖಾತೆ ಬದಲಾಗದೆ ಸರ್ಕಾರದ ಹಲವಾರು ಯೋಜನೆಗಳನ್ನು ಪಡೆಯುವಲ್ಲಿ ರೈತಾಪಿ ಕುಟುಂಬಸ್ಥರು ವಂಚಿತರಾಗಿದ್ದಾರೆ, ಅಂತವುಗಳನ್ನು ಪರಿಶೀಲನೆ ನಡೆಸಿ ಪೂರಕ ದಾಖಲೆ ನಿಮ್ಮ ಇಲಾಖೆಯಿಂದಲೇ ಒದಗಿಸಿ ಸಂಬಂಧಪಟ್ಟ ಜಮೀನಿನ ವಾರಸುದಾರರಿಗೆ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆಯನ್ನು ನೋಂದಣಿ ಮಾಡಿ ಕೊಡಿಕೊಡಲು ನಿಮಗೆಲ್ಲರಿಗೂ ಒಂದೊಳ್ಳೆ ಪುಣ್ಯದ ಸಮಯಾವಕಾಶ ಈ ಅಭಿಯಾನದ ಮೂಲಕ ದೊರೆತಿದೆ. ಆದ್ದರಿಂದ ಫಲಾನುಭವಿಗಳ ಸಹಕಾರ ಪಡೆದು ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದರು. ಅಲ್ಲದೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯಿಂದ ಬಹಳಷ್ಟು ಕೃಷಿಕರಿಗೆ ಅನುಕೂಲವಾಗಲಿದೆ ಅದಕ್ಕಾಗಿ ನಾನು ಅಭಿನಂದಿಸುತ್ತೇನೆ ಎಂದರು. ಈ ವೇಳೆ ತಾಲೂಕಿನ ನೂತನ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 7000 ಪೌತಿಯಾದವರ ಜಮೀನಿನ ಖಾತೆಗಳು ಬದಲಾವಣೆಯಾಗದೆ ಮರಣ ಹೊಂದಿದವರ ಹೆಸರಿನಲ್ಲಿಯೇ ಇದೆ. ವಾರಸುದಾರರು ಸರ್ಕಾರದ ಹಲವು ಸವಲತ್ತುಗಳಿಂದ ವಂಚಿತರಾಗಿದ್ದಾರೆ, ಅಲ್ಲದೆ ಪಿಎಂ ಕಿಸಾನ್ ಸೇರಿದಂತೆ ಇನ್ನಿತರ ಅನೇಕ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗದೇ ವಂಚಿತರಾಗಿದ್ದಾರೆ, ಅವುಗಳನೆಲ್ಲ ಸರಿಪಡಿಸುವ ಉದ್ದೇಶದಿಂದ ನಮ್ಮ ಅಧಿಕಾರಿ ವರ್ಗದವರು ಮರಣ ಹೊಂದಿದವರ ಮನೆ ಬಾಗಿಲಿಗೆ ಬರಲಿದ್ದು, ಪೂರಕ ದಾಖಲೆಗಳನ್ನು ಪಡೆದು ಪೌತಿ ಖಾತೆಯನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿ ಕೊಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಲು ಶ್ರಮ ವಹಿಸಲಿದ್ದಾರೆ ಎಂದರು.ಈ ವೇಳೆ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಸಂತ್ ಕುಮಾರ್‌, ಉಪ ತಹಸೀಲ್ದಾರ್ ಪ್ರದೀಪ್ ಕೆ.ಜೆ, ಕಂದಾಯ ನಿರೀಕ್ಷಕ ಪ್ರಕಾಶ್, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV