ಶಿವಮೊಗ್ಗ: ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯದ ವೈಜ್ಞಾನಿಕ ಹಿನ್ನೆಲೆಯ ಅರಿವನ್ನು ಮುಂದಿನ ಪೀಳಿಗೆಗೆ ಹಬ್ಬಗಳ ವಿಶೇಷತೆ, ಆಹಾರ ಕ್ರಮ ಉಡುಗೆ-ತೊಡುಗೆಗಳನ್ನು ಪರಿಚಯಿಸಿದಂತಾಗುತ್ತದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ಪರಿಸರ ಹೇಳಿದರು.
ಕನ್ನಡ ಶಿಕ್ಷಕ ಅರುಣ್ ಮಾತನಾಡಿ, ಸಂಕ್ರಾಂತಿಯಂದು ಎಳ್ಳುಬೆಲ್ಲ, ಕಡಲೆ ಮತ್ತು ಕೊಬ್ಬರಿಯನ್ನು ತಿನ್ನಬೇಕು. ಚಳಿಗಾಲದ ಅವಧಿಯಲ್ಲಿ ಚರ್ಮ ಒಡೆದಿರುತ್ತದೆ. ದೇಹದಲ್ಲಿ ಎಣ್ಣೆ ಅಂಶ ಕಡಿಮೆ ಇರುತ್ತದೆ. ಎಳ್ಳು ಬೆಲ್ಲ ಕೊಬ್ಬರಿ ಕಡಲೆಯನ್ನು ಈ ಸಂದರ್ಭದಲ್ಲಿ ಸ್ವೀಕರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಅವರು, ಸಂಕ್ರಾಂತಿ ಹಾಗೂ ಸುಗ್ಗಿ ಹಬ್ಬದ ವಿಶೇಷತೆ ಕುರಿತು ತಿಳಿಸಿಕೊಟ್ಟರು.
ಶಾಲೆ ಕಾರ್ಯದರ್ಶಿ ಪೂಜಾ ನಾಗರಾಜ್ ಪರಿಸರ ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ಪರ್ಶ ಅಮೋಘ, ಮುಖ್ಯ ಶಿಕ್ಷಕ ವಿನಯ್.ಎಸ್, ಶಿಕ್ಷಕರಾದ ಸೋನಿಕ, ವಿಂದ್ಯಾ, ಪಲ್ಲವಿ, ರವಿಕುಮಾರ್, ಭಾಗ್ಯಲಕ್ಷ್ಮಿ, ಸುನಿತ ಮತ್ತಿತರರಿದ್ದರು.