ಸಮಾನತೆಯ ಸಾಮಾಜಿಕ ಜೀವನ ಆದ್ಯತೆಯಾಗಲಿ: ನ್ಯಾಯಾಧೀಶ ಜನಾರ್ದನ

KannadaprabhaNewsNetwork |  
Published : Feb 22, 2024, 01:47 AM IST
ಫೋಟೋ : ೨೧ಎಚ್‌ಎನ್‌ಎಲ್೧ | Kannada Prabha

ಸಾರಾಂಶ

ಜಾತಿ ಧರ್ಮ, ಹೆಣ್ಣು ಗಂಡು ಎಂಬ ಭೇದಕ್ಕೆ ಅವಕಾಶವಿಲ್ಲದಂತೆ ಸಮಾನತೆಯ ಸಾಮಾಜಿಕ ಜೀವನ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು.

ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಜಾತಿ ಧರ್ಮ, ಹೆಣ್ಣು ಗಂಡು ಎಂಬ ಭೇದಕ್ಕೆ ಅವಕಾಶವಿಲ್ಲದಂತೆ ಸಮಾನತೆಯ ಸಾಮಾಜಿಕ ಜೀವನ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಲ್ಲದೆ, ಇದೆಲ್ಲದಕ್ಕೂ ಇರುವ ಕಾನೂನಿನ ಅರಿವು ಎಲ್ಲರಿಗೂ ಇರಲಿ ಎಂದು ಹಾನಗಲ್ಲ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ದನ ತಿಳಿಸಿದರು.

ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಮಾರಿಕಾಂಬಾ ದೇವಸ್ಥಾನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ದಯಾಶಂಕರ ಛಾತ್ರಾಲಯ, ಅಕ್ಕಮಹಾದೇವಿ ಮಹಿಳಾ ಮಂಡಳ ಬೊಮ್ಮನಹಳ್ಳಿ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ಸಾಮಾಜಿಕ ನ್ಯಾಯದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಎಲ್ಲರ ಹಕ್ಕು. ಕಾನೂನು ಎಲ್ಲರಿಗೂ ಒಂದೇ. ಇದರೊಂದಿಗೆ ಅಪರಾಧಿಗಳಿಗೂ ಶಿಕ್ಷೆ ಅದೆ ತೆರನಾಗಿರುತ್ತದೆ. ಬಾಲ್ಯ ವಿವಾಹ ಅಪರಾಧ. ಆದರೂ ನಡೆಯುತ್ತಿವೆ. ಕುಟುಂಬದವರು ಸುಮ್ಮನಿರುತ್ತಾರೆ. ಸಮಾಜದಲ್ಲಿ ಇಂತಹುಗಳನ್ನು ತಡೆಯಲು ಸಾರ್ವಜನಿಕರು ದೂರು ಕೊಡಿ ಎಂದರು.

ನ್ಯಾಯವಾದಿ ವೀಣಾ ಬ್ಯಾತನಾಳ ಉಪನ್ಯಾಸಕಿಯಾಗಿ ಮಾತನಾಡಿ, ಮಹಿಳಾ ದೌರ್ಜನ್ಯ ಒಂದು ಸಮಸ್ಯೆಯಾದರೆ, ಕಾನೂನಿನ ದುರುಪಯೋಗವೂ ಇನ್ನೊಂದು ಸಮಸ್ಯೆಯಗುತ್ತಿದೆ. ಬಾಲ್ಯ ವಿವಾಹ ಸರಿ ಅಲ್ಲ ಎಂಬುದರ ಅರಿವು ಮೂಡಿಸಬೇಕಾಗಿದೆ. ಹದಿ ಹರಯದವರು ಪಾಲಕರ ಗಮನಕ್ಕೆ ಇಲ್ಲದೆ ದೂರ ಹೋಗಿ ಮದುವೆಯಾಗುವುದು ಒಂದಾದರೆ,ಮದುವೆಯಾದ ಒಂದೆರಡು ವರುಷಗಳಲ್ಲಿಯೇ ಅನನುಭವಿಗಳು ಹಲವರು ವಿವಾಹ ವಿಚ್ಛೇದನಕ್ಕೆ ಬರುತ್ತಿರುವುದು ಕೂಡ ವಿಷಾದದ ಸಂಗತಿ. ಪೋಷಕರು ಟಿವಿ ಮನರಂಜನೆಯಲ್ಲಿ ಮುಳುಗಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ನಡುವಳಿಕೆಗಳ ಕಡೆಗೆ ಗಮನ ಕೊಡದೇ ಹೋದ ಕಾರಣ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳ ಬಗ್ಗೆ ನಿಗಾ ಇರಲಿ. ಅವರ ಭವಿಷ್ಯಕ್ಕಾಗಿ ಪಾಲಕರು ಸಮಯ ಕೊಡಿ ಎಂದು ಮನವಿ ಮಾಡಿದರು.

ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ಮಾಜಿ ಜಿಪಂ ಸದಸ್ಯ ಪದ್ಮನಾಭ ಕುಂದಾಪೂರ, ದಯಾಶಂಕರ ಛಾತ್ರಾಲಯದ ಅಧ್ಯಕ್ಷೆ ರೇಖಾ ಶೆಟ್ಟರ, ಪ್ರದೀಪ ನೆಲವಿಗಿ, ಸಿದ್ದು ಪಾಟೀಲ, ಬಸನಗೌಡ ಉಳವನಗೌಡ್ರ, ವಿಜಯಲಕ್ಷ್ಮೀ ಹಳ್ಳೀಕೇರಿ, ಉಮಾ ನಾಗರವಳ್ಳಿ, ವನಿತಾ ರೇವಡಿಗಾರ, ಶ್ರವಣಕುಮಾರ ಅತಿಥಿಯಾಗಿದ್ದರು.

ಕಾವೇರಿ, ವೀಣಾ, ನೇತ್ರ ಪ್ರಾರ್ಥನೆ ಹಾಡಿದರು. ಅನಿತಾ ಕೂಡಲಮಠ ಸ್ವಾಗತಿಸಿದರು. ಲಕ್ಷ್ಮೀ ಪಾಟೀಲ ನಿರೂಪಿಸಿದರು. ನೇತ್ರಾ ಕ್ಯಾಲಕೊಂಡ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ