ಕಸೂತಿ ಕಲೆ ಸ್ವಯಂ ಉದ್ಯೋಗವನ್ನಾಗಿಸಿಕೊಳ್ಳಿ

KannadaprabhaNewsNetwork |  
Published : Jul 24, 2024, 12:20 AM IST

ಸಾರಾಂಶ

ನಿರುದ್ಯೋಗ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕಾದರೆ ಕಸೂತಿ ಕಲೆಯನ್ನು ಕಲಿತು ಸ್ವಯಂ ಉದ್ಯೋಗ ಮಾಡಬೇಕು. ಇದರಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ಇನ್ನರವಿಲ್ ಸಂಸ್ಥೆಯ ಖಜಾಂಚಿ ಡಾ.ಮನಿಷಾ ನಾಗವೇಕರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ನಿರುದ್ಯೋಗ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕಾದರೆ ಕಸೂತಿ ಕಲೆಯನ್ನು ಕಲಿತು ಸ್ವಯಂ ಉದ್ಯೋಗ ಮಾಡಬೇಕು. ಇದರಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ಇನ್ನರವಿಲ್‌ ಸಂಸ್ಥೆಯ ಖಜಾಂಚಿ ಡಾ.ಮನಿಷಾ ನಾಗವೇಕರ ಹೇಳಿದರು.

ಬ್ಯಾಂಕ್ ಆಫ್ ಬರೋಡಾ, ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೊ ಬಾಗಲಕೋಟೆ ಹಾಗೂ ಸಾರ್ಡ್‌ ಸಂಸ್ಥೆ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ 10 ದಿನಗಳ ಕಸೂತಿ ಸ್ವಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅದರಂತೆ ತರಬೇತಿದಾರರು ಕಸೂತಿ ಕಲೆಯನ್ನು ಕಲಿತು ಸಾಕಷ್ಟು ಹಣವನ್ನು ಗಳಿಸಬಹುದು. ಅದಕ್ಕಾಗಿ ತಾವುಗಳು ವ್ಯರ್ಥಕಾಲ ಕಳೆಯದೇ ಪರಿಪೂರ್ಣ ಜ್ಞಾನ ಪಡೆದುಕೊಂಡು ತಾವುಗಳು ಸ್ವತಂತ್ರರಾಗಿ ಬದುಕು ಸಾಗಿಸಬಹುದೆಂದು ಹೇಳಿದರು.

ಬಾಗಲಕೋಟೆಯ ಸೆಲ್ಕೊ ಮುಖ್ಯಸ್ಥ ಶಿವಕುಮಾರ, ಸಂಪನ್ಮೂಲ ವ್ಯಕ್ತಿ ಶಿವಾನಿ ಮಂಗಳೂರು ಇವರು ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು. ಪತ್ರಕರ್ತ ವಿಶ್ವನಾಥ ಮುನವಳ್ಳಿ ಅಧ್ಯಕ್ಷತೆವಹಿಸಿದ್ದರು.ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಯೋಜನಾ ನಿರ್ಧೇಶಕ ಮನೋಹರ ಕಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಧೋಳ ಸಾರ್ಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ ಎಸ್.ಕೆಳಗಡೆ ಸ್ವಾಗತಿಸಿದರು. ರಾಜೇಶ್ವರಿ ಮಠಪತಿ ನಿರೂಪಿಸಿದರು. ದ್ರಾಕ್ಷಾಯಿಣಿ ಕರಡಿಮಠ ವಂದಿಸಿದರು. ಪೂರ್ಣಿಮಾ ಗೋವಿಂದಪೂರಮಠ ಸಂಗಡಿಗರು ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌