ಪರಿಸರ ದಿನಾಚರಣೆ ಹಬ್ಬವಾಗಲಿ: ಚಂದ್ರಶೇಖರ್

KannadaprabhaNewsNetwork |  
Published : Jun 11, 2024, 01:34 AM IST
32 | Kannada Prabha

ಸಾರಾಂಶ

ಪರಿಸರ ಕಾಳಜಿ ಕೇವಲ ಸಮಾರಂಭದಲ್ಲಿ ವ್ಯಕ್ತಪಡಿಸಿದರೆ ಸಾಲದು, ಕುಟುಂಬ ನಿರ್ವಹಿಸುವ ಪ್ರತಿಯೊಬ್ಬರೂ ಮಕ್ಕಳಿಗೆ ಸಸಿ ನೆಡಲು ಪ್ರೇರಣೆ ನೀಡಿ ತ್ಯಾಜ್ಯ ಕಡಿತಗೊಳಿಸಬೇಕು. ಪರಿಸರ ದಿನವನ್ನು ಭಾವನಾತ್ಮಕ ಹಬ್ಬವಾಗಿ ಆಚರಣೆಗೆ ಸರ್ವರು ನಿತ್ಯ ಸಿದ್ಧರಾಗಬೇಕಾಗಿರುವುದು ಅವಶ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಸರ ದಿನವನ್ನು ಭಾವನಾತ್ಮಕ ಹಬ್ಬವಾಗಿ ಆಚರಣೆಗೆ ಸರ್ವರು ನಿತ್ಯ ಸಿದ್ಧರಾಗಬೇಕಾಗಿರುವುದು ಅವಶ್ಯವಾಗಿದೆ ಎಂದು ನಿವೃತ್ತ ಅರಣ್ಯಾಧಿಕಾರಿ ಚಂದ್ರಶೇಖರ್ ತಿಳಿಸಿದರು.

ರೂಪಾ ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೋಗಾದಿಯ ರೂಪನಗರದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಗಿಡ ನೆಟ್ಟು ಹಾಗೂ ಹಣ್ಣು ಮತ್ತು ಹೂವಿನ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿ ಮಾತನಾಡಿದ ಅವರು, ಸಂಘಟನೆಯ ಪ್ರತಿ ಸದಸ್ಯರು ವರ್ಷಕ್ಕೆ ಒಂದರಂತೆ ಸಸಿ ನೆಡಲು ಮುಂದಾಗಬೇಕು. ರೈತರು ಹೊಲದಲ್ಲಿ ಸಸಿ ನೆಡಲು ಪ್ರೇರಣೆ ನೀಡಿ ಸಹಕಾರ, ಸಹಯೋಗ ನೀಡಿದಲ್ಲಿ ಮಾತ್ರ ಮುಂದಿನ ದಿನಮಾನದಲ್ಲಿ ಉತ್ತಮ ಪರಿಸರ ಹೊಂದಲು ಸಾಧ್ಯವಾಗಲಿದೆ ಎಂದರು.

ಪರಿಸರ ಕಾಳಜಿ ಕೇವಲ ಸಮಾರಂಭದಲ್ಲಿ ವ್ಯಕ್ತಪಡಿಸಿದರೆ ಸಾಲದು, ಕುಟುಂಬ ನಿರ್ವಹಿಸುವ ಪ್ರತಿಯೊಬ್ಬರೂ ಮಕ್ಕಳಿಗೆ ಸಸಿ ನೆಡಲು ಪ್ರೇರಣೆ ನೀಡಿ ತ್ಯಾಜ್ಯ ಕಡಿತಗೊಳಿಸಬೇಕು ಎಂದರು.

ಸಂಘದ ಅಧ್ಯಕ್ಷ ಉದಯಶಂಕರ್, ಉಪಾಧ್ಯಕ್ಷೆ ಉಮಾ ಪೇಶಾವರ್, ಖಜಾಂಚಿ ಶ್ರೀಧರ್ ತಂತ್ರಿ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ಡಿ. ರಾಘವೇಂದ್ರ, ಮಲ್ಲಮ್ಮ ಗಾಣಿಗೆ ಪ್ರಿಯ, ಸೋಮಯಾಜಿ, ಎಂ.ಸಿ. ಮಂಜುನಾಥ್, ಸುಬ್ರಹ್ಮಣ್ಯ, ಪ್ರಿಯಾ, ಶಶಿಧರ್, ಬಾಲಕೃಷ್ಣ, ಮಾಲತಿ, ಸೂರ್ಯನಾರಾಯಣ, ಮಾಯ, ಮಲ್ಲೇಶ್, ರವಿಕುಮಾರ್, ಅಚ್ಚುತರಾವ್ ಮೊದಲಾದವರು ಇದ್ದರು.ಆರೋಗ್ಯಕರ ಜೀವನಕ್ಕಾಗಿ ಪ್ರಕೃತಿ ಉಳಿಸಿ ಬೆಳೆಸಿಕನ್ನಡಪ್ರಭ ವಾರ್ತೆ ಮೈಸೂರು

ಆರೋಗ್ಯಕರ ಜೀವನಕ್ಕಾಗಿ ಪ್ರಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್ ತಿಳಿಸಿದರು.ಕುವೆಂಪುನಗರದ ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ವತಿಯಿಂದ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಲ್ಲಾ ಸದಸ್ಯರಿಗೂ ವಿವಿಧ ಜಾತಿಯ ಗಿಡ ವಿತರಿಸಿ ಮಾತನಾಡಿದ ಅವರು, ಮನುಷ್ಯ ಉತ್ತಮ ಪರಿಸರ ಇಲ್ಲದೇ ಬದುಕಲು ಸಾಧ್ಯವಿಲ್ಲ. ಅರಣ್ಯ ನಾಶದ ಪರಿಣಾಮವಾಗಿ ಪ್ರಸ್ತುತ ವರ್ಷ ಉಷ್ಣಾಂಶ ಹೆಚ್ಚಿತ್ತು. ಮಳೆ ಪ್ರಮಾಣ ಹೆಚ್ಚಿ, ಆ ಮೂಲಕ ಅಂತರ್ಜಲ ಮಟ್ಟ ಹೆಚ್ಚಲು ಅರಣ್ಯವನ್ನು ಉಳಿಸಬೇಕು ಎಂದರು.

ಇದೇ ವೇಳೆ ರಂಗಭೂಮಿ ಕಲಾವಿದೆ ಸುಮಾ ಪ್ರಶಾಂತ್ ಅವರು ಪರಿಸರದ ಸಂಬಂಧಪಟ್ಟ ಜಾನಪದ ಹಾಡು ಹಾಡುವ ಮೂಲಕ ವಿಶೇಷ ಗಮನ ಸೆಳೆದರು.ಸಂಘದ ಅಧ್ಯಕ್ಷ ಸವಿತಾ ಗೌಡ, ಪದಾಧಿಕಾರಿಗಳಾದ ಸವಿತಾ ಜಗದೀಶ್, ತ್ರಿವೇಣಿ ವಿಶ್ವನಾಥ್, ಜ್ಯೋತಿ ರವಿ, ಲಕ್ಷ್ಮೀ ಜಯರಾಮ್, ಉಮಾ, ಮಮತಾ ಪುರುಷೋತ್ತಮ್, ಅನ್ವಿತಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ