ದೇವನಹಳ್ಳಿ: ಸಹಕಾರ ಸಂಘಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸದ್ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಶ್ರೀ ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ ತಿಳಿಸಿದರು.
ಶ್ರೀ ವಾಲ್ಮೀಕಿ ಸಹಕಾರ ಸಂಘದ ಉಪಾಧ್ಯಕ್ಷ ಜಿ.ರಾಧಾಕೃಷ್ಣ ಮಾತನಾಡಿ, ಜ.೧೬ರಿಂದ ಸಂಘ ಅಧಿಕೃತವಾಗಿ ಪ್ರಾರಂಭವಾಗಲಿದೆ. ಖಾಸಗಿ ಬ್ಯಾಂಕ್‌ನಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ನಮ್ಮ ಸಹಕಾರ ಸಂಘದಲ್ಲಿ ದೊರೆಯುತ್ತಿದ್ದು ಸದಸ್ಯರು ಖಾಸಗಿ ಬ್ಯಾಂಕ್‌ಗಳಲ್ಲಿ ವ್ಯವಹರಿಸುವ ಬದಲು ಸಹಕಾರ ಸಂಘದಲ್ಲಿ ವ್ಯವಹರಿಸಿದರೆ ಸಂಘದ ಅಭಿವೃದ್ಧಿಯ ಜೊತೆಗೆ ಅನೇಕರಿಗೆ ಸಾಲ ಸೌಲಭ್ಯ ನೀಡಬಹುದು. ಮಹಿಳಾ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ಹಾಗೂ ಹೊಲಿಗೆ ಯಂತ್ರ ತರಬೇತಿ, ಸಂಘದ ಸದಸ್ಯರ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗುವುದು ಎಂದರು.
ಈ ವೇಳೆ ಶ್ರೀ ವಾಲ್ಮೀಕಿ ಸಹಕಾರ ಸಂಘದ ನಿರ್ದೇಶಕರಾದ ಮಹೇಶ್, ಲೋಕೇಶ್, ಶ್ರೀನಿವಾಸ್, ತಿಮ್ಮರಾಜು, ವೀರಬದ್ರಪ್ಪ, ನವೀನ್ ಕೋರಮಂಗಲ, ಬೊಮ್ಮನಹಳ್ಳಿ ನಾರಾಯಣಸ್ವಾಮಿ, ಚಿಕ್ಕ ತತ್ತಮಂಗಲ ಮಾಸಪ್ಪ, ಮಂಜುನಾಥ್, ನವೀನ್ ರಾಯಸಂದ್ರ, ವರಲಕ್ಷ್ಮಿ ಮುನಿಕೃಷ್ಣಪ್ಪ, ರೇಣುಕಮ್ಮ, ಗೌತಮಿ, ನೀಲಮ್ಮ, ಮಂಜುನಾಥ್, ಶಶಿಕಲಾ, ಜ್ಯೋತಿ, ಮನೋಜ್, ವಿಜಯ್ ಇತರರಿದ್ದರು.೧೩ ದೇವನಹಳ್ಳಿ ಚಿತ್ರಸುದ್ದಿ: ೦೧
ಶ್ರೀ ವಾಲ್ಮೀಕಿ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.