ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ "ಕ್ವಾಂಟಮ್ ಭೌತಶಾಸ್ತ್ರದ 100 ವರ್ಷಗಳು-ಬೆಳವಣಿಗೆಗಳು ಮತ್ತು ನಾವಿನ್ಯ ಭೌತಿಕತೆಯಲ್ಲಿ ಬಹುಶಿಸ್ತೀಯ ಅನ್ವಯಿಕೆಗಳು " ವಿಷಯದ ಕುರಿತ ಸಂಕಿರಣ ಉದ್ಘಾಟಿಸಿದ ಅವರು, ಯುವ ಸಂಶೋಧಕರು ಕ್ವಾಂಟಮ್ ಭೌತಶಾಸ್ತ್ರ ವಿಷಯದ ಕುರಿತ ಹೊಸ ರೀತಿಯ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ ಎಂದರು.
ಪ್ರಮುಖವಾಗಿ ಲೇಸರ್ ಲೇಪ್ರೊಸ್ಕೊಪಿ, ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಹೆಚ್ಚು ಮುನ್ನಲೆಗೆ ಬರುತ್ತಿದ್ದು, ಈ ತಂತ್ರಜ್ಞಾನಗಳನ್ನು ವೈದ್ಯಕೀಯ ಚಿಕಿತ್ಸೆ ಮತ್ತು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಇಂದು ಭೌತಶಾಸ್ತ್ರದ ವ್ಯಾಪ್ತಿಯು ಹೊಸ ವಿಷಯಗಳನ್ನು ಒಳಗೊಂಡು ವಿಶಾಲವಾಗಿ ಬೆಳೆದಿದೆ ಎಂದ ಅವರು, ಪ್ರಸ್ತುತ ಕ್ವಾಂಟಮ್ ಭೌತಶಾಸ್ತ್ರ ವಿಜ್ಞಾನವು ವೈದ್ಯಕೀಯ ಮತ್ತು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.ಗುಲಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ, ಭವಿಷ್ಯದಲ್ಲಿ ವಿಜ್ಞಾನವೇ ಏಕಸ್ವಾಮ್ಯದ ಕ್ಷೇತ್ರವಾಗಲಿದ್ದು ಕ್ವಾಂಟಮ್ ಮೆಕ್ಯಾನಿಕ್ಸ್, ಕ್ವಾಂಟಮ್ ತಂತ್ರಜ್ಞಾನ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಪ್ರಸ್ತುತ ಹೊಸ ವಿಸ್ಮಯವನ್ನು ಸೃಷ್ಟಿಸುವ ತಂತ್ರಜ್ಞಾನಗಳಾಗಿವೆ. ಪ್ರತಿಯೊಬ್ಬ ಸಂಶೋಧಕನು ಭೌತಶಾಸ್ತ್ರ ಸಂಶೋಧನೆಯಲ್ಲಿ ಹೊಸ ಅನ್ವೇಷಣೆ ಕಂಡುಕೊಳ್ಳುತ್ತಾನೆ. ಭೌತಶಾಸ್ತ್ರದಲ್ಲಿ ಹೊಸತನ, ಅನ್ವೇಷಣೆ ಮಾಡುವಲ್ಲಿ ಆಸಕ್ತಿ ತೋರಬೇಕು ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎಸ್. ಉಮಾಪತಿ, ಇಂದು ಕೃತಕ ಬುದ್ಧಿಮತ್ತೆ ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಬಳಕೆ ಮಾಡಲಾಗುತ್ತಿದೆ. ಇಂದು ಜಗತ್ತಿನ ಶೇ. 20ರಷ್ಟು ಸಾವುಗಳು ನಿರ್ದಿಷ್ಟ ರೋಗ ಪತ್ತೆಮಾಡುವಲ್ಲಿ ವಿಫಲರಾಗುತ್ತಿರುವುದು ಮುಖ್ಯ ಕಾರಣ. ಪ್ರಸ್ತುತ ಎಐ ತಂತ್ರಜ್ಞಾನವನ್ನು ಮಾರಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತಿದೆ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಎಐ ಬಳಕೆ ಮಾಡುವಾಗ ಕಾನೂನಾತ್ಮಕ ಮತ್ತು ನೈತಿಕ ಮೌಲ್ಯಗಳ ಪಾಲನೆ ಅಗತ್ಯವಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ. ಎ.ಎಂ. ಖಾನ ಮಾತನಾಡಿದರು. ಪ್ರೊ. ಎಸ್.ಎಂ. ಶಿವಪ್ರಸಾದ್, ಪ್ರೊ. ಆರ್. ಪ್ರಭು, ಪ್ರೊ. ಗಿರಿಧರ್ ಕುಲಕರ್ಣಿ, ಪ್ರೊ. ಎನ್. ಎಸ್. ವಿದ್ಯಾಧಿರಾಜಾ, ಪ್ರೊ. ಉಷಾದೇವಿ, ಪ್ರೊ. ಬಿ.ಎ. ಕಾಗಲಿ, ಪ್ರೊ. ಎಂ.ಕೆ. ರಬಿನಾಳ್, ಪ್ರೊ. ವಿ.ಎಂ. ಜಾಲಿ ವಿವಿಧ ವಿಷಯಗಳನ್ನು ಹಂಚಿಕೊಂಡರು.