ಧಾರವಾಡ:
ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಕ್ರಮವಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮೂಲಕ ಸರ್ಕಾರಕ್ಕೆ ಮುತಾಲಿಕ ಮನವಿ ಸಲ್ಲಿಸಿದರು. ಈ ವೇಳೆ ಸೇನೆಯ ಪದಾಧಿಕಾರಿಗಳಿದ್ದರು.
ಆರೋಪ ಸುಳ್ಳು?:ಏತನ್ಮಧ್ಯೆ, ಶ್ರೀಸಾಯಿ ಮಂದಿರದ ಆಡಳಿತ ಮಂಡಳಿಯ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಮಂಡಳಿಯ ಅಧ್ಯಕ್ಷ ಮಹದೇವ ಮಾಶ್ಯಾಳ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮುತಾಲಿಕರ ದೂರಿನ ಅನ್ವಯ ಜಿಲ್ಲಾ ಸಹಕಾರಿ ಸಂಘಗಳ ಕಚೇರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಶ್ರೀಮಂದಿರದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಇಲ್ಲಿ ಎಲ್ಲವೂ ಪಾರದರ್ಶಕವಾಗಿದ್ದು ಯಾವುದೇ ಅಧಿಕಾರಿಗಳಾಗಲಿ, ಭಕ್ತರಾಗಲಿ ಪರಿಶೀಲಿಸಬಹುದು. 2024-2025ರ ವರೆಗೆ ಲೆಕ್ಕ ಪರಿಶೋಧಕರಿಂದ ಆಡಿಟ್ ಮಾಡಿಸಿ, ಸರ್ಕಾರಕ್ಕೆ ನೀಡಿ ನೋಂದಣಿ ನವೀಕರಣ ಮಾಡಲಾಗಿದೆ. ಶ್ರೀಮಂದಿರದ ಆಡಳಿತ ಮಂಡಳಿ ಹೆಸರನ್ನು ಹಾಳು ಮಾಡಲು ಈ ಮೊದಲಿನ ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ಸಂಶಯವಿದ್ದಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸಂಶಯ ಪರಿಹರಿಸಿಕೊಳ್ಳಬಹುದು. ಉದ್ದೇಶಪೂರ್ವಕವಾಗಿ ಹಾಗೂ ವೈಯಕ್ತಿಕ ಹಿತಾಸಕ್ತಿಯನ್ನಿಟ್ಟುಕೊಂಡು ಮಂದಿರದ ಮೇಲೆ ವಿನಾಕಾರಣ ಆರೋಪ ಬೇಡ ಎಂದು ಮಾಶ್ಯಾಮ ಮನವಿ ಮಾಡಿದ್ದಾರೆ.