ಸಕಲೇಶಪುರದಲ್ಲಿ ಸಚಿವ ಕೃಷ್ಣ ಬೈರೇಗೌಡ ಜನಸ್ಪಂದನ ಕಾರ್ಯಕ್ರಮ

KannadaprabhaNewsNetwork |  
Published : Jan 17, 2026, 02:45 AM IST
16ಎಚ್ಎಸ್ಎನ್3 :  | Kannada Prabha

ಸಾರಾಂಶ

ಸಾರ್ವಜನಿಕರ ಸಮಸ್ಯೆಗಳನ್ನು ಪ್ರಮಾಣಿಕವಾಗಿ ಪರಿಹರಿಸಲು ಪ್ರಯತ್ನ ನಡೆಸಲಿದ್ದು ಒಂದೆ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ೯೪ ಸಿ ಅರ್ಜಿಗೆ ಹುಲ್ಲಬನ್ನಿ ಖಾರಬು ಎಂಬ ಕಾರಣಕ್ಕೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹುಲ್ಲಬನ್ನಿ ಖರಾಬಿಗೂ ಹಕ್ಕುಪತ್ರ ನೀಡ್ರಿ ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಾರ್ವಜನಿಕರ ಸಮಸ್ಯೆಗಳನ್ನು ಪ್ರಮಾಣಿಕವಾಗಿ ಪರಿಹರಿಸಲು ಪ್ರಯತ್ನ ನಡೆಸಲಿದ್ದು ಒಂದೆ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ಶುಕ್ರವಾರ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದೇ ಮಾದರಿಯ ಸಮಸ್ಯೆಗಳು ಹಲವರದ್ದಾಗಿದ್ದರೆ ಮೊದಲ ಆದ್ಯತೆಯಲ್ಲಿ ಪರಿಹಾರ ಕಂಡುಹಿಡಿಯಲಾಗುವುದು. ಸ್ಥಳದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಶೀಘ್ರವೇ ಬಗೆಹರಿಸುವಂತೆ ಸೂಚಿಸಲಾಗುವುದು. ವೈಯಕ್ತಿಕ ಪ್ರತಿಷ್ಠೆಗೆ ಇಲ್ಲಿ ಅವಕಾಶವಿಲ್ಲ. ೧೯೯೧ ಕ್ಕಿಂತ ಮುನ್ನ ಭೂಮಿ ಮಂಜೂರಾಗಿದ್ದರೆ ಭಯ ಬೇಡ, ೧೯೯೧ಕ್ಕಿಂತ ಮುನ್ನ ಜಮೀನು ಮಂಜೂರಾಗಿದೆ. ಆದರೆ, ಅಧಿಕಾರಿಗಳು ಡೀಮ್ಡ್‌ ಅರಣ್ಯ ಎಂಬ ಕಾರಣಕ್ಕೆಖಾತೆ ಮಾಡುತ್ತಿಲ್ಲ ಎಂಬ ಮನವಿ ಆಲಿಸಿದ ಸಚಿವರು ೧೯೯೧ ಕ್ಕೂ ಮುನ್ನ ಭೂಮಿ ಮಂಜೂರಾಗಿದ್ದರೆ ಭೂಮಿ ತೆರವುಗೊಳಿಸುತ್ತಾರೆಂಬ ಅಥಾವ ಖಾತೆ ಮಾಡುವುದಿಲ್ಲ ಎಂಬ ಭಯ ಬೇಡ. ೧೯೯೧ ಕ್ಕಿಂತ ಮುನ್ನ ಡೀಮ್ಡ್‌ ಕಲ್ಪನೆ ಇರಲಿಲ್ಲ. ಈ ಬಗ್ಗೆ ಎಲ್ಲಾ ತಹಸೀಲ್ದಾರ್‌ಗೆ ಸೂಚನೆ ನೀಡಿರುತ್ತೇನೆ ಎಂದರು. ಹೋಂ ಸ್ಟೇಗೆ ಅವಕಾಶ ಕೊಡಿ:

ಏಕ್ರೀ ಪರವನಾಗಿ ನೀಡುತ್ತಿಲ್ಲ. ನಿಯಮಬದ್ಧವಾಗಿ ನಡೆಯುವ ಹೋಂಸ್ಟೇಗಳಿಗೆ ಪರವನಾಗಿ ನೀಡಿ. ನಿವೇ ಕಾನೂನು ಬಾಹಿರವಾಗಿ ನಡೆಸಲು ಅವಕಾಶ ಮಾಡುತ್ತಿರಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಸೂಚಿಸಿದರು. ಆರ್‌ಆರ್‌ಟಿ ಕಡತ:

ಏನ್ರೀ ಇಷ್ಟೊಂದು ಆರ್‌ಆರ್‌ಟಿ ಕಡತ ಬಾಕಿ ಇಟ್ಟುಕೊಂಡಿದ್ದೀರ. ಮೊನ್ನೆ ಚನ್ನರಾಯಪಟ್ಟಣದಲ್ಲಿ ನಡೆದ ಸಭೆಯಲ್ಲೆ ಕಡತ ವಿಲೇವಾರಿಗೆ ಸೂಚಿಸಿದ್ದೇನೆ, ಆದರೂ ಎಚ್ಚೆತ್ತುಕೊಂಡಿಲ್ಲ ಎಂದರೆ ಏನರ್ಥ, ನಾನು ಬೇರೆ ತರಹದಲ್ಲೆ ಹೇಳಬೇಕಾಗುತ್ತದೆ. ಇಲ್ಲಿ ಸಾರ್ವಜನಿಕರಿದ್ದಾರೆಂದು ಸುಮ್ಮನಿದ್ದೇನೆ. ಕಡತಗಳ ಬೇಗ ವಿಲೇವಾರಿ ಮಾಡಿ ಇಲ್ಲವೆಂದರೆ ಗಾಳಿ ಬಿಡಿಸಬೇಕಾಗುತ್ತದೆ ಎಂದು ತಾಲೂಕು ಶಿರಸ್ತೇದಾರ್‌ ರವಿಕುಮಾರ್‌ ಅವರಿಗೆ ಸೂಚಿಸಿದರು. ೯೪ಸಿ ಹುಲ್ಲಬನ್ನಿ ಇದ್ದರೂ ಕೊಡಿ

೯೪ ಸಿ ಅರ್ಜಿಗೆ ಹುಲ್ಲಬನ್ನಿ ಖಾರಬು ಎಂಬ ಕಾರಣಕ್ಕೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹುಲ್ಲಬನ್ನಿ ಖರಾಬಿಗೂ ಹಕ್ಕುಪತ್ರ ನೀಡ್ರಿ ಎಂದು ತಹಸೀಲ್ದಾರ್‌ಗೆ ಸೂಚಿಸಿದರು.ಸಭೆಯಲ್ಲಿ ೧೧೧೦ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು ಬಹುತೇಕ ಕಂದಾಯ ಇಲಾಖೆ ಸೇರಿದ್ದ ಅರ್ಜಿಗಳಾಗಿದ್ದು ವಿಶೇಷ. ಮಧ್ಯಾಹ್ನ ೧೨ ಗಂಟೆಗೆ ಆರಂಭವಾದ ಸಭೆ ಊಟಕ್ಕೂ ಬಿಡುವು ನೀಡದಂತೆ ಸಂಜೆ ಏಳರವರೆಗೆ ಸಭೆ ನಡೆಯಿತು. ವೇದಿಕೆಯಲ್ಲೇ ತಹಸೀಲ್ದಾರ್‌ ಸೇರಿದಂತೆ ಹಲವರು ಲಘು ಉಪಹಾರ ಸೇವಿಸಿದರು.ವೇದಿಕೆಯಲ್ಲಿ ಸಂಸದ ಶ್ರೇಯಸ್‌ಪಟೇಲ್. ಶಾಸಕರಾದ ಸೀಮೆಂಟ್ ಮಂಜು,ಶಿವಲಿಂಗೇಗೌಡ,ಮಾಜಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ.ಜಿಲ್ಲಾಧಿಕಾರಿ ಲತಾಕುಮಾರಿ. ಕಾಂಗ್ರೆಸ್ ಮುಖಂಡ ಮುರುಳಿಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

------------------------------------------------- ಸಭೆ ಸ್ವಾರಸ್ಯ ನಲ್ಲುಲ್ಲಿ ಸಮಸ್ಯೆ

ಜಮೀನು ಹಂಚಿಕೆಗೆ ಸಹೋದರರ ಅಸಹಕರ ತೊರುತ್ತಿದ್ದಾರೆಂದು ನಲ್ಲುಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಸಭೆಯಲ್ಲಿ ಹೇಳಿದರು ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಣ್ತಮ್ಮಂದಿರ ಸಮಸ್ಯೆ ಬಗೆಹರಿಸುವುದು ನಮ್ಮ ಕೆಲಸವಲ್ಲ. ಸಾರ್ವಜನಿಕರ ಕೆಲಸ ಮಾಡಲೇ ನಮಗೆ ಸಮಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಿವೇನು ಸೂಪರ್ ಮ್ಯಾನಾ

ಜಿ.ಪಂ ಮಾಜಿ ಸದಸ್ಯ ಪರ್ವತಯ್ಯ ಸಮಸ್ಯೆ ನಿವೇದಿಸಲು ಸರತಿ ಬಿಟ್ಟು ವೇದಿಕೆಯ ಮೇಲೆ ಹತ್ತಿದರು. ಇದರಿಂದ ಸಿಟ್ಟಾದ ಸಚಿವರು ನಿವೇನು ಸೂಪರ್ ಮ್ಯಾನ್ ಲೈನಲ್ಲಿ ಬನ್ನಿ ಅಷ್ಟೊಂದು ಮಹಿಳೆಯರಿದ್ದಾರೆ ಎಂದರು. ಟೊಕನ್ ಪಡೆಯಿರಿ

ಅರ್ಜಿ ಸಲ್ಲಿಸಿ ಟೋಕನ್ ಪಡೆಯದೆ ವೇದಿಕೆ ಹತ್ತಿದ ವ್ಯಕ್ತಿ ಸಮಸ್ಯೆ ನಿವೇದೆನೆಗೆ ಮುಂದಾದರುಇದಕ್ಕೆ ಸಿಡಿಮಿಡಿಕೊಂಡ ಸಚಿವರು ಮೊದಲುಟೋಕನ್‌ತೆಗೆದುಕೊಂಡು ಬನ್ನಿ ಎಂದು ವೇದಿಕೆಯಿಂದ ಕೇಳಗಿಳಿಸಿದರು. ನಾವು ತಲೆತಗ್ಗಿಸಬೇಕು

ನಕಾಶೆಯಲ್ಲಿದಾರಿ ಇದೆ ರಸ್ತೆ ಬಿಡಿಸಿಕೊಂಡಿ ಎಂದರೆ ಕೆಲಸ ಮಾಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಏನಮ್ಮ ಕಾನೂನಿಲ್ಲಿರುವ ಕೆಲಸವನ್ನು ಮಾಡದಿದ್ದರೆ ಹೇಗೆ ಸುಮ್ಮನೇ ನಿಮ್ಮಿಂದ ನಾವು ತಲೆತಗ್ಗಿಸ ಬೇಕು ಎಂದು ತಹಸೀಲ್ದಾರ್ ಸುಪ್ರೀತಾ ವಿರುದ್ದ ಅಸಮಾಧನ ಹೊರಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಮಕ್ಕಳ ಸಮಯ, ಮನಸ್ಸನ್ನು ಹಾಳು ಮಾಡುತ್ತಿದೆ: ಪಿ.ಬಿ.ಶ್ರೀಕಾಂತ್ ಬೇಸರ
ಸಮಗ್ರ ಅಭಿವೃದ್ಧಿ ಸಂಕಲ್ಪದಲ್ಲಿ ಬಹುಪಾಲು ಯಶಸ್ವಿ: ಸಂಸದ ಬಿ.ವೈ ರಾಘವೇಂದ್ರ