ಸಹಕಾರಿಯ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಮಲ್ಲಿಕಾರ್ಜುನ ಐಲಿ

KannadaprabhaNewsNetwork |  
Published : Sep 27, 2026, 02:15 AM IST
ಗದಗ ನೀಲಕಂಠೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮುಂಬರುವ ದಿನಗಳಲ್ಲಿ ಸದಸ್ಯರಿಗೆ ಗ್ರೂಪ್ ಇನ್ಶೂರೆನ್ಸ್, ಯಶಸ್ವಿನಿ ಯೋಜನೆ ಜಾರಿ ಹಾಗೂ ಶೇರುದಾರರ ಮಕ್ಕಳಿಗೆ ಶೈಕ್ಷಣಿಕ ಪುರಸ್ಕಾರ ನೀಡಲಾಗುವುದು

ಗದಗ: ಸಹಕಾರಿಗಳು ಸಂಸ್ಥೆಯಲ್ಲಿ ಹೆಚ್ಚಿನ ಶೇರುಗಳನ್ನು ಪಡೆಯುವ ಜತೆಗೆ ಸಾಲ ಹಾಗೂ ಇತರ ಬ್ಯಾಂಕಿಂಗ್ ಸೌಲಭ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ನೀಲಕಂಠೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಹೇಳಿದರು.

ನೀಲಕಂಠೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ 2025-26ನೇ ಸಾಲಿನ 18ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸ್ಥೆಯ ಪ್ರಗತಿ ವಿವರಿಸಿದ ಅವರು, ಮುಂಬರುವ ದಿನಗಳಲ್ಲಿ ಸದಸ್ಯರಿಗೆ ಗ್ರೂಪ್ ಇನ್ಶೂರೆನ್ಸ್, ಯಶಸ್ವಿನಿ ಯೋಜನೆ ಜಾರಿ ಹಾಗೂ ಶೇರುದಾರರ ಮಕ್ಕಳಿಗೆ ಶೈಕ್ಷಣಿಕ ಪುರಸ್ಕಾರ ನೀಡಲಾಗುವುದು ಎಂದರು. ಶೇರುದಾರರಿಗೆ ಶೇ. 12ರಷ್ಟು ಡಿವಿಡೆಂಟ್ ಘೋಷಿಸಿದರು.

ಉಪಾಧ್ಯಕ್ಷ ಆರ್.ಎನ್. ತುಕ್ಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣಪ್ಪ ಮಾಳಗಿ ವರದಿ ಹಾಗೂ ಲಾಭ ಹಾನಿ ಲೆಕ್ಕಪತ್ರ ವಾಚಿಸಿದರು. ನಿರ್ದೇಶಕ ದೇವೇಂದ್ರಪ್ಪ ಗೋಟೂರ, ಶಂಕರ ಕಾಕಿ, ರಾಮಣ್ಣ ಕೆಂಚಗುಂಡಿ ಸಹಕಾರಿಯ ಕಾರ್ಯಚಟುವಟಿಕೆ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ವಾಸಪ್ಪ ಬುಟ್ಟಾ, ಚಂದ್ರಶೇಖರ ಶ್ಯಾವಿ, ಬಸವರಾಜ ಗಣಪಾ, ಬಸವರಾಜ ಬುಟ್ಟಾ ಉಪಸ್ಥಿತರಿದ್ದರು. ನಿರ್ದೇಶಕ ಈಶ್ವರ ಸಮಗಂಡಿ ಕಾರ್ಯಕ್ರಮ ನಿರೂಪಿಸಿದರು, ವಾಸಪ್ಪ ಜೋಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಸಂಭ್ರಮವಿರಬೇಕು: ಪ್ರೊ. ಕೃಷ್ಣಮೂರ್ತಿ
ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ