ಬೂದು ನೀರು ನಿರ್ವಹಣ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

KannadaprabhaNewsNetwork |  
Published : Sep 06, 2024, 01:11 AM IST
5ಸಿಎಚ್‌ಎನ್‌52 ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಎಂಆರ್ ಮಂಜುನಾಥ್ ಬೂದು ನೀರು ನಿರ್ವಹಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಎಂಆರ್ ಮಂಜುನಾಥ್ ಬೂದು ನೀರು ನಿರ್ವಹಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕಲುಷಿತ ಚರಂಡಿ ನೀರು ಮಳೆಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗ್ರಾಮಗಳ ಕೆರೆಕಟ್ಟೆ ಜಲ ಮೂಲಗಳಿಗೆ ನೀರು ಸರಬರಾಜು ಮಾಡುವ ಮೂಲಕ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ ಬೂದು ನೀರು ನಿರ್ವಹಣ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.

ತಾಲೂಕಿನ ಕ್ಷೇತ್ರ ವ್ಯಾಪ್ತಿಯ ಹೂಗ್ಯಂ, ರಾಮಾಪುರ, ಕೌದಳ್ಳಿ ವಿವಿಧ ಗ್ರಾಮಗಳಲ್ಲಿ ಜಿಪಂ ಚಾಮರಾಜನಗರ, ತಾಪಂ ಹನೂರು ವತಿಯಿಂದ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬೂದು ನೀರು ನಿರ್ವಹಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮಗಳ ಅಭಿವೃದ್ಧಿ ಹಾಗೂ ಶುಚಿತ್ವ, ನಾಗರಿಕರ ಆರೋಗ್ಯ ಕಾಪಾಡುವುದರ ಜೊತೆಗೆ ಚರಂಡಿ ನೀರು ಮತ್ತು ಮಳೆಯ ಸಂದರ್ಭದಲ್ಲಿ ಗ್ರಾಮಗಳಿಂದ ವ್ಯರ್ಥವಾಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ಈ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಹೂಗ್ಯಂ ಜಲ್ಲಿಪಾಳ್ಯ ಮುಖ್ಯ ರಸ್ತೆಯಲ್ಲಿ ತಲೆದೂರಿದ್ದ ಸಮಸ್ಯೆ ನಿವಾರಣೆ ಜೊತೆಗೆ ವಿವಿಧಡೆ ತಲೆದೂರಿದ್ದ ಸಮಸ್ಯೆಗೆ ಬೂದು ನೀರು ನಿರ್ವಹಣೆ ಕಾರ್ಯಕ್ರಮದಡಿ 1.64 ಕೋಟಿ ರು.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದೇ ರೀತಿ ರಾಮಾಪುರ, ಕೌದಳ್ಳಿ ಗ್ರಾಮಗಳಲ್ಲಿಯೂ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಮಹಾದೇವ ಪ್ರಸಾದ್, ತಾಪಂ ಇಒ ಉಮೇಶ್, ಎಡಿ ರವೀಂದ್ರ, ಪಿಡಿಒ ಪುಷ್ಪಲತಾ, ಗ್ರಾಪಂ ಅಧ್ಯಕ್ಷೆ ಮುರುಗೇಶ್ವರಿ, ರಾಮಪುರ ಗ್ರಾಪಂ ಅಧ್ಯಕ್ಷ ರವಿ , ಉಪಾಧ್ಯಕ್ಷೆ ರಾಜಮ್ಮ, ಸದಸ್ಯರಾದ ಚಿಕ್ಕಯ್ಯ, ವೀರೇಶ್, ಪಳನಿಸ್ವಾಮಿ, ರಾಜಣ್ಣ, ರಾಜ, ರವಿಕುಮಾರ್, ಸುಬ್ಬಮ್ಮ, ಪೆರುಮಾಳ್ ಮುಖಂಡರಾದ ಮಂಜೇಶ್ ಗೌಡ, ಯರಂಬಾಡಿ ಹುಚ್ಚಯ್ಯ, ಮಾಣಿಕ್ಯ, ಮುನಿಯಪ್ಪ, ಅರುಳ್ ಸ್ವಾಮಿ, ಶ್ರೀರಂಗಂ, ವೆಂಕಟರಾಮ, ಸುಬ್ರಮಣಿ, ಹನೂರು ಮಂಜೇಶ್, ಮಹದೇವ್, ಅತಿಕ್ ಕೌದಲ್ಲಿ ನಭಿ, ರಾಚಪ್ಪ, ಕೆಂಪಲಿಂಗ, ಬಾಬು ಮತ್ತಿತರರಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ