ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಕನ್ನಡ ಸಂಭ್ರಮ ಕಾರ್ಯಕ್ರಮ ಕನ್ನಡ ಸಂಘ ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಕನಾ೯ಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಿಗರಾದ ನಮಗೆ ಕನ್ನಡ ಕಲಿಕೆ ಅತ್ಯವಶ್ಯ. ಆಡಳಿತ ಭಾಷೆ, ಅನ್ನದ ಭಾಷೆ, ವ್ಯವಹಾರದ ಭಾಷೆ, ಮಾತೃಭಾಷೆ ಕನ್ನಡವೇ ಆಗಿರುವುದರಿಂದ ಕನ್ನಡ ಕಡ್ಡಾಯವಾಗಿ ಅಧ್ಯಯನ ಮಾಡಬೇಕು. ಕೃಷಿಕರೊಂದಿಗೆ ತಾವು ಜೀವನದ ಉದ್ದಕ್ಕೂ ಸಂಪರ್ಕಿಸಬೇಕಾದರೆ ಕನ್ನಡ ಕಡ್ಡಾಯ ಎಂದು ಹೇಳಿದರು.ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡ.ಭೀಮಪ್ಪ ಮಾತನಾಡಿ, ಕನ್ನಡ ನಮ್ಮೆಲ್ಲರ ಉಸಿರು. ಕನ್ನಡ ಸಾಹಿತ್ಯ ವಿದ್ಯಾವಂತ ಹಾಗು ಜನಸಾಮಾನ್ಯರು ಬೆಳೆಸಿದ್ದರಿಂದ ಕನ್ನಡವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ವಿಜಯಪುರದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ ಮಾತನಾಡಿ, ಡಾ.ಸಿಂಪಿ ಲಿಂಗಣ್ಣ, ಶ್ರೀರಂಗ, ಡಾ.ಫ.ಗು.ಹಳಕಟ್ಟಿ, ಬಂಥನಾಳ ಶ್ರೀ ಮುಂತಾದವರು ಕನ್ನಡ ಸಾಹಿತ್ಯವನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಕೃಷಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಷಯ ಬೋಧಿಸಲಾಗುತ್ತಿದೆ. ಅನ್ಯ ರಾಜ್ಯದ ಅನೇಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರೆಲ್ಲರೂ ಕನ್ನಡ ಮಾತನಾಡುವದನ್ನು ಕಲಿತುಕೊಂಡಿದ್ದಾರೆ. ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಾಡುವುದಾಗಿ ತಿಳಿಸಿದರು.
ವಿದ್ಯಾರ್ಥಿ ಕನ್ನಡ ಸಂಘ ಕೃಷಿ ಮಹಾವಿದ್ಯಾಲಯದ ಪದಾಧಿಕಾರಿಗಳಾದ ಡಾ.ಸಾವಿತ್ರಿ ಪಾಟೀಲ, ಡಾ.ಸಂಗೀತಾ ಜಾಧವ, ಮಂಗಳಾ ಮಜ್ಜಗಿ. ಡಾ.ಎಸ್ ಎಚ್.ಗೋಟ್ಯಾಳ, ಡಾ.ಕೆ.ಎಸ್.ಖ್ಯಾಡಗಿ. ಡಾ.ಜಿ.ಶ್ರೀನಿವಾಸುಲು, ಡಾ.ಕಿರಣಕುಮಾರ.ಜಿ, ಡಾ.ಕುಶಾಲ.ಎನ್, ಡಾ.ರಮೇಶ ಬೀರಗೆ, ಡಾ.ಸುದೀಪ ಕುಮಾರ ಈ, ಸಿದ್ರಾಮಪ್ಪ ಇಂಗಳೇಶ್ವರ, ಖಾಜಾಮೀಯಾ ನದಾಫ, ಲೋಹಿತ ಹವೇಲಿ, ವಿಜಯಲಕ್ಷ್ಮಿ ಮುಂದಿನಮನಿ ಮುಂತಾದವರು ಉಪಸ್ಥಿತರಿದ್ದರು.ಡಾ.ಸುನೀತಾ.ಎನ್.ಡಿ ಮಾತನಾಡಿದರು. ಕವಿತಾ ಹಾಗು ಸಂಗಡಿಗರು ಪ್ರಾರ್ಥಿಸಿದರು. ಡಾ ಅಶ್ವತ್ಥಾಮ.ವಿ.ಎಚ್ ಸ್ವಾಗತಿಸಿ, ಗೌರವಿಸಿದರು. ಆಭಿಷೇಕ, ಶರಣು, ಪವಿತ್ರಾ ಹಾಗು ಚೈತ್ರಾ ನಾಡಗೀತೆ ಹಾಡಿದರು. ಸುಮಿತ.ಎಸ್.ಕೆ ಹಾಗು ಸ್ಪೂರ್ತಿ ಹೊಂಬಾಳಮಠ ನಿರೂಪಿಸಿದರು. ರಿಹಾನಮಲಿಕ ಹಳ್ಳೂರ ವಂದಿಸಿದರು.