ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಯೋಧ್ಯೆಯಲ್ಲಿ ಫ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.19 ರಂದು ರಾಮನಾಮ ತಾರಕ ಹೋಮ ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನವಿ ಮಾಡಿದರು.ಬಸವೇಶ್ವರ ವೀರಶೈವ ವಿಧ್ಯಾವರ್ಧಕ ಸಂಘದ ಮಿನಿ ಆಡಿಟೋರಿಯಮ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ರಾಮನಾಮ ತಾರಕ ಹೋಮದ ಪೂರ್ವಭಾವಿ ವಿಶೇಷ ಸಭೆಯಲ್ಲಿ ಮಾತನಾಡಿದರು.
ಅಯೋಧ್ಯಾಪತಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.19 ರಂದು ವಿದ್ಯಾಗಿರಿಯಲ್ಲಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸಕಲ ಸಮಾಜದ 108 ದಂಪತಿಗಳಿಂದ 108 ಹೋಮ ಕುಂಡದಲ್ಲಿ ರಾಮನಾಮ ತಾರಕ ಹೋಮ ಮಾಡಲಾಗುತ್ತಿದೆ. ಅಂದು ಎಲ್ಲ ಹಿಂದು ಸಮಾಜದವರು ಭಾಗವಹಿಸಿ ಯಶಸ್ವಿಗೊಳಿಸಬೇಕು. ಅಲ್ಲದೆ. ಜ.22 ರಂದು ಗ್ರಾಮೀಣ ಹಾಗೂ ನಗರಗಳಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಕಾರ್ಯ ಜರುಗಿಸಬೇಕು. ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ಸಂಜೆ ದೀಪಾವಳಿಯಂತೆ ಐದು ದೀಪಗಳನ್ನು ಮನೆಮುಂದೆ ಬೆಳಗಿಸಬೇಕು ಎಂದು ಕೋರಿದರು.ಸಭೆಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಕುಮಾರ ಯಳ್ಳಿಗುತ್ತಿ, ಸದಾನಂದ ನಾರಾ, ಸುರೇಶ ಕೊಣ್ಣುರ, ರಾಜು ರೇವಣಕರ, ಸಿ.ವಿ.ಕೋಟಿ,ಮಹಾಂತೇಶ ಶೆಟ್ಟರ, ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಟವಲಿ, ಸಂಗಮೇಶ ಗುಡ್ಡದ, ಪ್ರಬು ಸಂಗಪ್ಪ ಸಜ್ಜನ, ಬಸವರಾಜ ನಾಶಿ, ಪ್ರಭು ಹಡಗಲಿ, ಮುತ್ತಣ್ಣ ಬೇಣ್ಣೂರ, ಸಾಗರ ಬಂಡಿ, ಶ್ರೀನಾಥ ಸಜ್ಜನ, ರಮೇಶ ಕೋಟಿ, ರವಿ ಧಾಮಜಿ, ಯಲ್ಲಪ್ಪ ಭಜಂತ್ರಿ, ರಾಮಣ್ಣ ಜುಮನಾಳ, ಬಸವರಾಜ ಅವರಾದಿ, ಭಾಗಿರತಿ ಪಾಟೀಲ, ಅನಿತಾ ಸರೋದೆ, ಜ್ಯೋತಿ ಭಜಂತ್ರಿ, ನಾಗರತ್ನಾ ಹೆಬ್ಬಳಿ, ಶಾಂತಾ ಹನಮಕ್ಕನವರ, ಕವಿತಾ ಲಂಕೆನ್ನವರ, ಸರಸ್ವತಿ ಕುರಬರ, ಸುಜಾತಾ ಶಿಂಧೆ, ಪ್ರೇಮಾ ಅಂಬಿಗೇರ, ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಸಕಲ ಸಮಾಜದ ಮುಖಂಡರು ಇದ್ದರು.