ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಎಂ.ಜಿ ರಸ್ತೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾ ರ್ಥಿಗಳನ್ನು ಉದ್ಧೇಶಿಸಿ ಮಾತನಾಡಿ, ವಿದ್ಯಾರ್ಥಿಗಳೇ ನಾವು ದಿನನಿತ್ಯ ಬಳ ಸುವ ವಸ್ತುಗಳಿಗೆ ಇಂತಿಷ್ಟು ದಿನಗಳಲ್ಲಿ ಮಾತ್ರ ಬಳಸಿ ಎಂದು ಗಡುವು ಇರುತ್ತದೆ. ಮನುಷ್ಯರಾದ ನಾವು ಯಾಕೆ ಸುಂದರವಾದ ಭವಿಷ್ಯ ರೂಪಿಸಿ ಕೊಳ್ಳಲು ಗಡುವು ವಿಧಿಸಿಕೊಳ್ಳಬಾರದು ಎಂದು ಪ್ರಶ್ನಿಸಿದರು.
ಅನುಕರಣೆ ಮಾಡಬೇಡಿಅನುಕರಣೆ ಮತ್ತು ಹೋಲಿಕೆ ತುಂಬಾ ಅಪಾಯಕಾರಿ. ನೀವು ನಟ ರಜನೀಕಾಂತ್ ಅವರಂತೆ ಆಗಲು ಸಾಧ್ಯವೇ ಇಲ್ಲ.ಅವರೇ ಅಲ್ಲ ಯಾರೂ ಕೂಡ ಇನ್ನೊಬ್ಬರಂತೆ ಆಗಲು ಸಾಧ್ಯ ವಿಲ್ಲ. ನಾವು ನಾವೇ ಆಗಬೇಕು.ಇದಾಗಬೇಕಾದರೆ ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳ ಮೇಲೆ ನಮಗೆ ನಂಬಿಕೆಯಿರಬೇಕು. ಏನಾಗಬೇಕು ಎಂಬ ಬಗ್ಗೆ ಸ್ಪಷ್ಟತೆಯಿರಬೇಕು ಎಂದರು.ನೀವೂ ಧೈರ್ಯವಾಗಿರಿ, ಅಪ್ಪ ಅಮ್ಮನಿಗೂ ದೈರ್ಯವಾಗಿರುವಂತೆ ಹೇಳಿ. ಸಣ್ಣಪುಟ್ಟ ಸಾಲ ಮಾಡಿರುವ ನಮ್ಮವರು ಸಾಲಕ್ಕೆ ಹೆದರಿ ಪ್ರಾಣ ಬಿಡುವುದು ತಪ್ಪು. ಸಾಲ ಪಡೆದವರು ಭಯಪಡಬೇಕಿಲ್ಲ, ಸಾಲಕೊಟ್ಟವ ಭಯಪಡಬೇಕು. ಮನೆಯ ಬಳಿ ಬರುವ ಅವರಿಗೆ ಇಂದಲ್ಲ ನಾಳೆ ಸಾಲತೀರಿಸುತ್ತೇನೆ ಎಂದು ಹೇಳಿ ಎಂದರು.ಹುಸಿ ಭ್ರಮೆಯಲ್ಲಿ ಬದುಕಬೇಡಿ ಮರ್ಯಾದೆಗೆ ಅಂಜುವವರಿಗೆ ಒಂದು ಹೇಳುತ್ತೇನೆ. ಅದು ಇಲ್ಲವೇ ಇಲ್ಲ. ಹುಸಿ ಭ್ರಮೆಗಳಲ್ಲಿ ಸುತ್ತುತ್ತಾ ಬದುಕು ಹಾಳು ಮಾಡಿ ಕೊಳ್ಳಬೇಡಿ. ನಾನು ಚುನಾವಣೆಗೆ ನಿಂತಾಗ ನೀನು ಗೆಲ್ಲುವುದಿಲ್ಲ ಎಂದು ಹೇಳಿದವರೇ ಹೆಚ್ಚು.ಆದರೆ ನನ್ನ ಮನಸ್ಸು ಹೇಳುತ್ತಿತ್ತು, ನೀನು ಗೆಲ್ಲುತ್ತೀಯಾ ಮುನ್ನುಗ್ಗು ಎಂದು. ಈಗ ನಾನು ಶಾಸಕನಾಗಿ ಜನಸೇವೆ ಮಾಡುತ್ತಿಲ್ಲವೆ ನೀವೂ ಕೂಡ ಆಶಾವಾದಿಗಳಾಗಿ ಎಂದು ಹೇಳಿದರು.ಈ ವೇಳೆ ಪ್ರಾಂಶುಪಾಲ ಡಾ.ಮುನಿರಾಜು, ಪ್ರಾಧ್ಯಾಪಕರಾದ ಪ್ರೊ.ನಾಗರಾಜ್, ಡಾ.ರಂಗಪ್ಪ, ಮಾಜಿ ಶಾಸಕ ಡಾ.ಎಂ.ಶಿವಾನಂದ್, ವಕೀಲ ಸಂದೀಪ್ ಚಕ್ರವರ್ತಿ, ವೆಂಕಟ್, ಪೆದ್ದನ್ನ, ನಾಗಭೂಷಣ್,ಅರವಿಂದ್, ಮೋಲ್ಡ್ ವೆಂಕಟೇಶ್, ಮತ್ತಿತರರು ಇದ್ದರು.ಸಿಕೆಬಿ- 2 ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದರು.