ಕನ್ನಡಪ್ರಭ ವಾರ್ತೆ ಕೋಲಾರಕಳೆದ ನಾಲ್ಕು ವರ್ಷದಿಂದ ಸ್ಥಳೀಯ ಸಂಸ್ಥೆಗಳಾದ ಜಿಪಂ ಮತ್ತು ತಾಪಂಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳೇ ನಡೆಸುತ್ತಿದ್ದ ಆಡಳಿತಕ್ಕೆ ಕೊನೆಗೂ ಮುಕ್ತಿ ದೊರೆಯುವ ಕಾಲ ಹತ್ತಿರವಾಗುತ್ತಿದೆ. ಜೂನ್ ಅಥವಾ ಜುಲೈ ಮಾಹೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮೇ ಮಾಹೆಯಲ್ಲಿ ಮೀಸಲಾತಿ ಪ್ರಕಟವಾಗುವ ಸಾಧ್ಯತೆ ಇದೆ.
ಇದರಿಂದಾಗಿ ಪಂಚಾಯಿತಿ ಚುನಾವಣೆಯ ಸ್ಪರ್ಧಿಸುವ ಆಕಾಂಕ್ಷಿಗಳು ಅಖಾಡಕ್ಕೆ ಇಳಿಯಲು ಸಿದ್ಧತೆ ಆರಂಭಿಸಿದ್ದಾರೆ. ಹಲವಾರು ಅಕಾಂಕ್ಷಿಗಳು ಯೋಜನೆಗಳನ್ನು ರೂಪಿಸುತ್ತಿದ್ದು, ಕ್ಷೇತ್ರದಲ್ಲಿನ ಮತದಾರರ ಒಲವು ಯಾರ ಕಡೆ ಇದೆ ಎಂಬ ಸಮೀಕ್ಷೆಗಳ ಚರ್ಚೆಗಳನ್ನು ಪ್ರಾರಂಭಿಸಿದ್ದಾರೆ. ಮೀಸಲು ಸ್ಥಾನ ಹಂಚಿಕೆಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇರುವುದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಖಚಿತವಾಗಿದೆ, ಚುನಾವಣೆ ವಿಳಂಬ ಕುರಿತು ಹೈಕೋರ್ಟ್‌ನಲಿ ಸಲ್ಲಿಸಿರುವ ನ್ಯಾಯಾಂಗ ನಿಂದನೆಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರವು ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಕಳೆದ ೨೦೨೩ರಲ್ಲಿ ೧೨ ವಾರದಲ್ಲಿ ಮೀಸಲಾತಿ ನಿಗದಿಪಡಿಸುವ ಆಶ್ವಾಸನೆ ನೀಡಿತ್ತು, ಆದರೆ ಸರ್ಕಾರವು ಉಚ್ಚ ನ್ಯಾಯಾಲಯಕ್ಕೆ ನೀಡಿದ ಭರವಸೆ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ರಾಜ್ಯ ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿಸಲ್ಲಿಸಿತ್ತು. ರಾಜ್ಯ ಸರ್ಕಾರ ಉಚ್ಚ ನ್ಯಾಯಾಲಯದಲ್ಲಿ ಎರಡನೇ ಭಾರಿ ನೀಡಿರುವ ಭರವಸೆಯ ಪ್ರಕಾರ ಮೇ ಅಂತ್ಯಕ್ಕೆ ಮೀಸಲಾತಿ ಪ್ರಕಟ ಮಾಡಿದರೆ ಜೂನ್ ಅಥವಾ ಜುಲೈನಲ್ಲಿ ಚುನಾವಣೆಯು ಸಾಧ್ಯತೆ ಇದೆ. ಮೀಸಲು ನಿರೀಕ್ಷೆಯಲ್ಲಿ ಆಕಾಂಕ್ಷಿಗಳು
ಈಗಾಗಲೇ ಸಾಕಷ್ಟು ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಮಾನಸಿಕವಾಗಿ ಸಿದ್ದತೆ ಮಾಡಿ ಕೊಂಡಿದ್ದು ಮೀಸಲಾತಿ ಖಾತ್ರಿಯಾದರೆ ತಮ್ಮ ಅಖಾಡವನ್ನು ಸಿದ್ದಪಡಿಸಿಕೊಳ್ಳಲು ಕಳೆದ ಎರಡು ಮೂರು ಚುನಾವಣೆಗಳ ಮೀಸಲಾತಿಯ ಲೆಕ್ಕಚಾರಗಳ ಚರ್ಚೆಗಳು ಗ್ರಾಮೀಣ ಭಾಗದ ರಾಜಕಾರಣದ ಪಡಸಾಲೆಯಲ್ಲಿ ನೆಡೆಯುತ್ತಿರುವುದು ಮುಂದಿನ ದಿನಗಳಲ್ಲಿ ಮಹತ್ವವಾದ ಸ್ಥಾನ ಪಡೆಯಲಿದೆ. ಕಳೆದ ಬಾರಿಯಂತೆ ಈ ಭಾರಿ ಚುನಾವಣೆಯ ನಡೆಯದು. ಈಗಿನ ಚುನಾವಣೆಯಲ್ಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿಗಿಂತ ಈ ಭಾರಿ ಚುನಾವಣೆಯು ಅಷ್ಟು ಸುಲಭವಾಗಿಲ್ಲ ಎಂಬುವುದಂತೂ ಸತ್ಯ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣೆಯನ್ನು ಎದುರಿಸಲು ಪಕ್ಷದ ಮುಖಂಡರನ್ನು ಸಂಘಟಿಸಲಾಗುತ್ತಿದೆ. ಎರಡು ಪಕ್ಷಗಳ ನಡುವೆ ಸೀಟುಗಳ ಹೊಂದಾಣಿಕೆಯು ತಲೆ ನೋವಾಗಿ ಪರಿಣಮಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.ಕಾಂಗ್ರೆಸ್- ಮೈತ್ರಿ ನಡುವೆ ಹೋರಾಟಈ ಹಿಂದೆ ಕೋಲಾರ ಜಿಲ್ಲಾ ಪಂಚಾಯತ್ ಆಡಳಿತ ಚುಕ್ಕಾಣಿ ಜೆ.ಡಿ.ಎಸ್ ಮತ್ತು ಬಿಜೆಪಿ ಹಾಗೂ ವರ್ತೂರು ಪ್ರಕಾಶ್ ಬಣಗಳು ಹಿಡಿದಿದ್ದವು, ಈಗ ಅಧಿಕೃತವಾಗಿ ಜೆ.ಡಿ.ಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಲ್ಲಿ ಹೊಸ ಸಂಚಲನ ಮೂಡಲಿದ್ದು ಕಾಂಗ್ರೆಸ್ ಪಕ್ಷದ ಎದುರು ಜಿದ್ದಾಜಿದ್ದಿನ ಸೆಣಸಾಟ ನಡೆಸಲಿವೆ. ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯುವುದರಿಂದ ಉಭಯ ಪಕ್ಷಗಳ ನಾಯಕರು ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಲಿದ್ದಾರೆ.
ಕಳೆದ ಬಾರಿ ಜಿಲ್ಲಾ ಕೇಂದ್ರದಲ್ಲಿ ಪಿ.ಎಲ್.ಡಿ ಬ್ಯಾಂಕ್ ಬಹುಮತ ಗಳಿಸಿದ್ದರೂ ಸಹ ಓರ್ವ ಸದಸ್ಯರ ಪಕ್ಷಾಂತರದಿಂದ ಅಧಿಕಾರದ ಚುಕ್ಕಾಣಿ ಕಳೆದುಕೊಳ್ಳುವಂತಾಗಿತ್ತು ಎಂಬುವುದನ್ನು ಕೈಗೆ ಬಂದಿದ್ದು ಬಾಯಿಗೆ ಇಲ್ಲವಾಯಿತು ಎಂಬ ಪಾಠವಾಗಿತ್ತು. ಮುಂಬರಲಿರವ ಚುನಾವಣೆ ಜೆ.ಡಿ.ಎಸ್ ಮತ್ತು ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆಯಗಳನ್ನಿಡಲು ನಿರ್ಧರಿಸಿವೆ.ಗ್ಯಾರಂಟಿಯೇ ಕಾಂಗ್ರೆಸ್‌ಗೆ ಬಲ
ಮತ್ತೊಂದು ಕಡೆ ಕಾಂಗ್ರೇಸ್ ಸರ್ಕಾರವು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಓಲೈಸಿ ಕೊಂಡು ಮತಯಾಚಿಸಲಿದೆ. ರಾಜ್ಯದ ವಿಧಾನ ಸಭಾ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಭಿನ್ನಮತಗಳನ್ನು ಬದಿಗೆಸರಿಸಲು ಹೈಕಮಾಂಡ್ ಮುಖಂಡರಿಗೆ ಸೂಚಿಸಿದೆ.