ಕಸಬಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿನಯ್‌ಕುಮಾರ್ ಆಯ್ಕೆ

KannadaprabhaNewsNetwork |  
Published : Feb 21, 2025, 11:46 PM IST
ಕಸಬಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್.ವಿನಯ್‌ಕುಮಾರ್ ಅವಿರೋಧ ಆಯ್ಕೆ | Kannada Prabha

ಸಾರಾಂಶ

ಕೊರಟಗೆರೆ ಕಸಬಾ ವಿಎಸ್ಎಸ್ಎನ್‌ಗೆ ನೂತನ ಅಧ್ಯಕ್ಷರಾಗಿ ಕೆ.ಎಸ್.ವಿನಯ್‌ಕುಮಾರ್ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್.ವಿನಯ್‌ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಿಡಿಒ ಗುರುರಾಜ್ ಘೋಷಣೆ ಮಾಡಿದರು.ಕೊರಟಗೆರೆಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೧೨ ನಿರ್ದೇಶಕರ ಸಂಖ್ಯಾಬಲ ಹೊಂದಿದ್ದು, ಈ ಹಿಂದಿನ ಅಧ್ಯಕ್ಷ ಎಚ್.ಸಿ.ರಾಜಣ್ಣ ರಾಜಿನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು, ಫೆ.೨೧ರಂದು ೧೧ ಗಂಟೆಗೆ ವಿಎಸ್ಎಸ್ಎನ್ ಕಚೇರಿಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕೆ.ಎಸ್.ವಿನಯ್‌ಕುಮಾರ್ ಮಾತ್ರ ಅರ್ಜಿ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಂದೇ ಅರ್ಜಿ ಸಲ್ಲಿಕೆ ಆದ್ದರಿಂದ ಕೆ.ಎಸ್.ವಿನಯ್‌ಕುಮಾರ್‌ರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.ನೂತನ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ, ಕ್ಷೇತ್ರದ ಶಾಸಕರು, ಗೃಹಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಶೀರ್ವಾದದಿಂದ ಎಲ್ಲ ನಿರ್ದೆಶಕರನ್ನು ಒಟ್ಟುಗೂಡಿಸಿಕೊಂಡು ಈ ನಮ್ಮ ಸಹಕಾರ ಸಂಘವನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುತ್ತೇವೆ. ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್ ಮಾತನಾಡಿ, ಈ ಸಹಕಾರ ಸಂಘಕ್ಕೆ ಇಲ್ಲಿಯವರೆಗೂ ೪ ಕೋಟಿ ಕೆಸಿಸಿ ಸಾಲವನ್ನು ೭೦೦ಕ್ಕೂ ಹೆಚ್ಚು ರೈತರಿಗೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಗೃಹ ಸಚಿವರು ಹಾಗೂ ಸಹಕಾರ ಸಚಿವರ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷ ವಿನಯ್‌ಕುಮಾರ್ ಉಳಿದ ರೈತರಿಗೆ ಸಾಲ ನೀಡುವ ಕೆಲಸ ಮಾಡಲಿದ್ದಾರೆ ಎಂದರು.ನಿರ್ದೇಶಕ ಕೆ.ವಿ.ಪುರುಷೋತ್ತಮ್ ಮಾತನಾಡಿ, ತಾಲೂಕಿನಲ್ಲಿಯೇ ಕಸಬಾ ವಿಎಸ್ಎಸ್ಎನ್ ಅತಿ ದೊಡ್ಡ ಸಹಕಾರ ಸಂಘವಾಗಿದೆ. ಕೊರಟಗೆರೆ ಪಟ್ಟಣ, ಹುಲಿಕುಂಟೆ, ಹಂಚಿಹಳ್ಳಿ ಗ್ರಾಪಂಗಳು ಹಾಗೂ ನೀಲಗೊಂಡನಹಳ್ಳಿಯ ಗ್ರಾಪಂ ಕೆಲವು ಗ್ರಾಮಗಳನ್ನು ಸಹಕಾರ ಸಂಘದ ವ್ಯಾಪ್ತಿಗೆ ಹೊಂದಿದೆ, ಕೆಲವು ವರ್ಷಗಳ ಹಿಂದೆ ಸಂಪೂರ್ಣ ಮುಚ್ಚಿಹೋಗಿದ್ದ ಈ ಸಂಘವನ್ನು ಸಹಕಾರ ಸಚಿವ ಕೆ.ಎನ್ ರಾಜಣ್ಣ ಮತ್ತೆ ಮುನ್ನೆಲೆಗೆ ತಂದು ಈ ಭಾಗದ ರೈತರಿಗೆ ನೆರವಾದರು. ಗೃಹ ಸಚಿವ ಡಾ.ಜಿ.ಪರಮೇಶ್ವರರ ಅನುದಾನ ನೇತೃತ್ವದಿಂದ ಹಾಗೂ ಕೆ.ಎನ್.ರಾಜಣ್ಣ ಮಾರ್ಗದರ್ಶನದಿಂದ ನೂತನ ಅಧ್ಯಕ್ಷರು ಈ ಸಹಕಾರ ಸಂಘವನ್ನು ಮತ್ತುಷ್ಟು ಸದೃಢಪಡಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಸುಂದರಮ್ಮ, ನಿರ್ದೇಶಕರಾದ ಎಚ್.ಸಿ.ರಾಜಣ್ಣ, ಕೃಷ್ಣಮೂರ್ತಿ, ಪುಟ್ಟನರಸಯ್ಯ, ಸುರೇಶ್, ರಮೇಶ್, ನೇತ್ರಾವತಿ, ತಿಮ್ಮಪ್ಪ, ದಿವಾಕರ, ಮೇಲ್ವಿಚಾರಕ ತಿಮ್ಮರಾಜು, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಬಿ.ಒ.ಕೃಷ್ಣಮೂರ್ತಿ, ದಿವಾಕರ್, ಮಾರುತಿ ಹಾಜರಿದ್ದರು.

ನೂತನ ಅಧ್ಯಕ್ಷರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್‌ನಾರಾಯಣ್, ಜೆಡಿಎಸ್ ನೂತನ ತಾಲೂಕು ಅಧ್ಯಕ್ಷ ಕಾಮರಾಜು, ಪಪಂ ಸದಸ್ಯ ಓಬಳರಾಜು, ಮಾಜಿ ಉಪಾದ್ಯಕ್ಷ ಮಂಜುನಾಥ್, ಮಾಜಿ ಸದಸ್ಯ ಲಾರಿ ಸಿದ್ದಪ್ಪ, ತುಂಗಾ ಮಂಜುನಾಥ್, ಸಿದ್ದಲಿಂಗಪ್ಪ. ಗಂಗಾಧರಪ್ಪ, ಕಾರ್‌ಮಹೇಶ್, ಶಿವಾನಂದ್, ನಟರಾಜು, ಕಾಕಿಮಲ್ಲಯ್ಯ ಇತರರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌