ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತಾಲೂಕು ವಿಶ್ವಕರ್ಮ ಸಮಾಜೋದ್ದಾರಕ ಸಂಘದ ವತಿಯಿಂದ ಸೋಮವಾರ ಪಟ್ಟಣದ ಕುರುವಳ್ಳಿ ಬಡಾವಣೆಯಲ್ಲಿರುವ ಸಂಘದ ಸಭಾ ಭವನದಲ್ಲಿ ನಡೆದ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಧಾರ್ಮಿಕ ಶಿಲ್ಪಕಲಾ ಪರಂಪರೆಯನ್ನು ಅನಾದಿ ಕಾಲದಿಂದಲೂ ಮೆರೆಯುತ್ತಿರುವ ವಿಶ್ವಕರ್ಮ ಸಮಾಜ ಬಂಧುಗಳು ಹುಟ್ಟಿನಿಂದಲೇ ಪ್ರತಿಭಾವಂತರಾಗಿದ್ದಾರೆ. ಸಮಾಜದ ಮಕ್ಕಳು ಕೂಡ ಗ್ರಹಿಕೆಯಲ್ಲಿ ಬುದ್ದಿವಂತರಾಗಿದ್ದು ವಿಶೇಷ ಪ್ರತಿಭೆ ಹೊಂದಿದ್ದಾರೆ. ಮಕ್ಕಳ ಭವಿಷ್ಯ ರೂಪುಗೊಳ್ಳಲು ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಿದರು.ತಮ್ಮ ಸ್ವಪ್ರತಿಭೆಯಿಂದ ಶಿಲ್ಪಕಲಾ ಪ್ರಕಾರದ ಘನತೆ ಹೆಚ್ಚಿಸಿರುವ ವಿಶ್ವಕರ್ಮ ಸಮಾಜ ಬಂಧುಗಳು ಹುಟ್ಟಿನಿಂದಲೇ ಎಂಜಿನಿಯರ್ ಆಗಿದ್ದಾರೆ. ಈ ಸಮುದಾಯದ ಪ್ರತಿಭೆ ಗುರುತಿಸಿರುವ ಕೇಂದ್ರ ಸರ್ಕಾರ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ವಿಶ್ವಕರ್ಮ ಸಮಾಜದ ಹೆಸರಿನಲ್ಲಿ ತಂದಿರುವ ಪ್ರದಾನಮಂತ್ರಿ ವಿಶ್ವಕರ್ಮ ಯೋಜನೆಯ ಸೌಲಭ್ಯವನ್ನು ಸಧ್ಬಳಕೆ ಮಾಡಿಕೊಳ್ಳುವಂತೆಯೂ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ತರಗತಿಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗೌರವಿಸಲಾಯಿತು.ಕಟ್ಟೆಹಕ್ಕಲು ರತ್ನಾಕರ್ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದು, ಸಮಾಜದ ಪುರೋಹಿತರಾದ ಸುಧೀರ್ ಆಚಾರ್ಯ, ರಾಘವೇಂದ್ರ ಆಚಾರ್ಯ, ಶಂಕರ ಆಚಾರ್ಯ ಹಾಗೂ ನಾಗಪ್ಪ ಆಚಾರ್ಯ ಇದ್ದರು.