ಇರುವ ಶೈಕ್ಷಣಿಕ ಸವಲತ್ತುಗಳನ್ನು ಬಳಸಿಕೊಂಡು ಸಾಧನೆ ಮಾಡಿ

KannadaprabhaNewsNetwork |  
Published : Feb 23, 2025, 12:31 AM IST
22ಎಚ್ಎಸ್ಎನ್15 : ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜನೆ ಮಾಡಿದ್ದ ಎಸ್‌ಎಸ್‌ಎಲ್‌ಸಿ ನಿಲಯಾರ್ಥಿಗಳ ಪರೀಕ್ಷಾ ತರಬೇತಿ ಕಾರ್ಯಗಾರವನ್ನು ಬಿಇಒ ಸೋಮಲಿಂಗೇಗೌಡ ಉದ್ಘಾಟಿಸಿದರು.  | Kannada Prabha

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಲಿಕಾ ಪೂರಕ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳು ಇದ್ದು, ಅವರು ದೊರೆತ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ಪೋಷಕರು ಕಂಡ ಕನಸ್ಸನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಕಲಿಕೆಯ ಕಾರ್ಯಸೂಚಿ ರೂಪಿಸಿಕೊಂಡು ಮುನ್ನಡೆಯುವುದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಸಲಹೆ ನೀಡಿದರು. ಓದುವ ಸಮಯದಲ್ಲಿ ನಿಶ್ಚಿಂತೆಯಿಂದ ಓದಿ, ಚೆನ್ನಾಗಿ ಊಟ ಹಾಗೂ ನಿದ್ದೆ ಮಾಡಿ, ಕಲಿಕೆಯನ್ನು ಒತ್ತಡದಲ್ಲಿ ಮಾಡದೇ ಪ್ರೀತಿಯಿಂದ ಕಲಿತಾಗ ಯಶಸ್ಸು ದೊರೆಯುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಲಿಕಾ ಪೂರಕ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳು ಇದ್ದು, ಅವರು ದೊರೆತ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ಪೋಷಕರು ಕಂಡ ಕನಸ್ಸನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಕಲಿಕೆಯ ಕಾರ್ಯಸೂಚಿ ರೂಪಿಸಿಕೊಂಡು ಮುನ್ನಡೆಯುವುದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಎಸ್ಸೆಸ್ಸೆಲ್ಸಿ ನಿಲಯಾರ್ಥಿಗಳ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ಪರೀಕ್ಷಾ ಪೂರ್ವಕವಾಗಿ ಎಫ್ ೧,೨,೩,೪ ಎಂದು ನಾಲ್ಕು ಹಂತದ ಪರೀಕ್ಷೆ ನಡೆಸಲಾಗಿದೆ ಜತೆಗೆ ಜಿಲ್ಲೆ, ತಾಲೂಕು ಹಾಗೂ ಶಾಲೆ ಮಟ್ಟದ ಪರೀಕ್ಷಾ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಪರೀಕ್ಷೆಯಲ್ಲಿ ಗಳಿಸುವ ಅಂಕ ಹಾಗೂ ಜ್ಞಾನ ಮಹತ್ವದ ಕಾರ್ಯ ನಿರ್ವಹಿಸುವ ಕಾರಣದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶ್ರೇಷ್ಠತೆ ಪಡೆದಿದೆ ಎಂದರು. ವಿದ್ಯಾರ್ಥಿನಿಲಯದಲ್ಲಿ ಕಲಿಯುವ ವಿದ್ಯಾರ್ಥಿಗಳು ಅದೃಷ್ಟವಂತರು, ಅವರಿಗೆ ಉತ್ತಮವಾದ ಊಟ, ವಸತಿ ಹಾಗೂ ಕಲಿಕಾ ಪೂರಕ ವಾತಾವರಣದಲ್ಲಿ ಯಾವುದೇ ಒತ್ತಡವಿಲ್ಲದೇ ಕಲಿಯಲು ಅವಕಾಶ ಹೆಚ್ಚಿರುತ್ತೆ. ಆದ್ದರಿಂದ ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ಇನ್ನು ಉಳಿದಿರುವ ೨೪ ದಿನದಲ್ಲಿ ಹೆಚ್ಚಿನ ಸಮಯವನ್ನು ಕಲಿಕೆಗೆ ಮೀಸಲಿಟ್ಟು ಓದಲೇಬೇಕಿದೆ. ಕಲಿಯುವಾಗ ಊಟ ಮಾಡಿದರೆ ನಿದ್ದೆ ಬರುತ್ತೆ ಎಂಬ ಭಯದಲ್ಲಿ ಊಟವಿಲ್ಲದೇ ಒತ್ತಡದಲ್ಲಿ ಓದಬೇಡಿ, ಓದುವ ಸಮಯದಲ್ಲಿ ನಿಶ್ಚಿಂತೆಯಿಂದ ಓದಿ, ಚೆನ್ನಾಗಿ ಊಟ ಹಾಗೂ ನಿದ್ದೆ ಮಾಡಿ, ಕಲಿಕೆಯನ್ನು ಒತ್ತಡದಲ್ಲಿ ಮಾಡದೇ ಪ್ರೀತಿಯಿಂದ ಕಲಿತಾಗ ಯಶಸ್ಸು ದೊರೆಯುತ್ತದೆ.

ಸಹಪಾಠಿಗಳಿಗೂ ಓದಲೂ ತಿಳಿಸಿ, ಸಮಯ ವ್ಯರ್ಥ ಮಾಡುವ ಮನಸ್ಥಿತಿಯ ವಿದ್ಯಾರ್ಥಿಗಳ ಸ್ನೇಹ ಮಾಡದೇ, ಕಲಿಕೆಗೆ ಉತ್ತೇಜಿಸುವ ವಿದ್ಯಾರ್ಥಿಗಳ ಜತೆಗೆ ಕುಳಿತು ಆರೋಗ್ಯಕರ ಪೈಪೋಟಿಯೊಂದಿಗೆ ಕಲಿಯಿರಿ ಎಂದರು. ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷಾ ಪೂರಕ ಪ್ರಶ್ನೆ ಪತ್ರಿಕೆಗಳನ್ನು ದಿನನಿತ್ಯ ಸಂಪೂರ್ಣ ಅಭ್ಯಾಸ ಮಾಡಿದರೆ ಪಾಸಾಗಬಹುದು ಎಂದು ಸಲಹೆ ನೀಡಿ, ಮೊಬೈಲ್‌ನಿಂದ ದೂರು ಇರಿ ಎಂದು ತಿಳಿಸಿ, ಸುದೀರ್ಘವಾಗಿ ಸಲಹೆ ಹಗೂ ಮಾರ್ಗದರ್ಶನ ನೀಡಿದರು.

ನಿಲಯ ಪಾಲಕ ಲೋಕೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಹರೀಶ್ ಸ್ವಾಗತಿಸಿದರು. ಹಾಸನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರದೀಪ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ವ್ಯವಸ್ಥಾಪಕ ಮಂಜುನಾಥ್, ಶಿಕ್ಷಕರಾದ ಬೈರೇಶ್, ದರ್ಶನ್, ಸಿದ್ದಲಿಂಗು, ನಿಲಯ ಪಾಲಕರಾದ ರವಿಶಂಕರ್ ಎಚ್.ಜೆ., ಚಂದ್ರಮ್ಮ ಎನ್.ಕೆ, ಸ್ಪಪ್ನ ಹಾಗೂ ಶೃತಿ ಯು.ಎನ್, ತ್ರಿವೇಣಿ, ಇತರರು ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ