ಕನ್ನಡಪ್ರಭ ವಾರ್ತೆ ಕಲಬುರಗಿ
ಶುಕ್ರವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್ ಇಲಾಖೆ ಆಶ್ರಯದಲ್ಲಿ ‘ಸ್ವಂತ ಮತ್ತು ಸಮಾಜಕ್ಕಾಗಿ ಯೋಗ’ ಧ್ಯೇಯವಾಕ್ಯದ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜೀವನಶೈಲಿ ಪದ್ದತಿಯಿಂದ ಹಲವು ರೋಗಕ್ಕೆ ನಾವು ತುತ್ತಾಗುತ್ತಿದ್ದು, ಇದರಿಂದ ಹೊರಬರಬೇಕಾದರೆ ಯೋಗವೇ ಮದ್ದಾಗಿದೆ. ಪ್ರತಿ ದಿನ ಯೋಗದಿಂದಲೆ ದೈನಂದಿನ ಚಟುವಟಿಕೆಗಳು ಆರಂಭವಾಗಬೇಕು ಎಂದ ಅವರು, ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಈ ಮಾಹೆಯ ಅಂತ್ಯ ವರೆಗೆ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿಸಲಾಗುತ್ತಿದ್ದು, ಮಕ್ಕಳು ಸಕ್ರಿಯರಾಗಿ ಭಾವಹಿಸಬೇಕೆಂದು ತಿಳಿಸಿದರು.ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ ಮಾತನಾಡಿ, ಭಾರತದ ಯೋಗ ಪದ್ಧತಿಗೆ ಇಡೀ ವಿಶ್ವವೇ ಮೆಚ್ಚಿದ್ದು, ಇಂದು ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಉತ್ತರ ಗೋಳಾರ್ಧದಲ್ಲಿ ಬರುವ ವರ್ಷದ ಸುದೀರ್ಘ ದಿನವಾಗಿರುವ ಇಂದು ಬೆಳಕಿನ ಮಹತ್ವ ಸಾರುತ್ತಿದೆ. ಸೂರ್ಯನು ದಕ್ಷಿಣಾಯನಕ್ಕೆ ಪಯಣಿಸುವ ಪರಿವರ್ತನೆಯ ಸಂಕೇತ ದಿನವೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ ಎಂದು ದಿನದ ಮಹತ್ವ ತಿಳಿಸಿದ ಅವರು, ಶಾರೀರಿಕ ಮತ್ತು ಮಾನಸಿಕ ನೆಮ್ಮದಿಗೆ ಯೋಗ ಸಹಕಾರಿಯಾಗಿದೆ ಎಂದರು.
ಯೋಗ ಮಾಡಿದ ಡಿ.ಸಿ, ಪೊಲೀಸ್ ಕಮಿಷನರ್:
ಆಯುಷ್ ಇಲಾಖೆಯ ಯೋಗ ತರಬೇತುದಾರರಾದ ಸುದೀಪ ಮಾಳಗಿ ಮತ್ತು ಶಶಿಕಲಾ ಗುತ್ತೇದಾರ ಹಾಗೂ ಭೂಮಿ ಯೋಗಾ ಫೌಂಡೇಷನ್ ಸಂಸ್ಥೆಯ ಯೋಗ ಗುರು ನಾಗರಾಜ ಸಾಳೊಳ್ಳಿ ಅವರು ಸುದೀರ್ಘ 45 ನಿಮಿಷಗಳ ಕಾಲ ಯೋಗಾಭ್ಯಾಸ ಹೇಳಿಕೊಟ್ಟರು.
ಯೋಗ ತರಬೇತಿ ನೀಡಿದ ತರಬೇತುದಾರರಾದ ಸುದೀಪ ಮಾಳಗಿ, ಶಶಿಕಲಾ ಗುತ್ತೇದಾರ ಹಾಗೂ ನಾಗರಾಜ ಸಾಲೊಳ್ಳಿ, ಶಾಲೆಗಳಲ್ಲಿ ಯೋಗ ತರಬೇತಿ ಹೇಳಿಕೊಟ್ಟ ಪತಂಜಲಿ ಯೋಗ ಸಮಿತಿಯ ಸುಮಂಗಲಾ ಚಕ್ರವರ್ತಿ ಹಾಗೂ ಯೋಗ ಪ್ರದರ್ಶನ ನೀಡಿದ ಕಲಬುರಗಿ ನಗರದ ಬ್ರಹ್ಮಪುರ ಪ್ರದೇಶದ ಚೌಧಾಪುರಿ ಹಿರೇಮಠ ಪ್ರೌಢ ಶಾಲೆಯ ಯೋಗ ವಿದ್ಯಾರ್ಥಿ ಅನೀಲಕುಮಾರ ಅವರಿಗೆ ಎಂಎಲ್‌ಸಿ ಶಶೀಲ ನಮೋಶಿ ಅವರು ಸನ್ಮಾನಿಸಿದರು. ಸರ್ಕಾರಿ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಕಾಂತ್ ಫುಲಾರಿ ನಿರೂಪಿಸಿದರು.