ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರಿಗೆ ಉತ್ಸೇಜನ ನೀಡಬೇಕು, ಪಿಒಪಿ (ಪ್ಲಾಸ್ಟರ್ ಆಪ್ ಪ್ಯಾರೀಸ್) ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಬೇಕೆಂದು ಪಣತೊಟ್ಟ ಮಹಾನಗರ ಪಾಲಿಕೆ ಮಣ್ಣಿನ ಮೂರ್ತಿ ತಯಾರಿಕೆಗೆ ₹ 25000 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿ ಎರಡು ತಿಂಗಳಾದರೂ ಈ ವರೆಗೂ ಬಿಡಿಕಾಸು ನೀಡಿಲ್ಲ.
ನಾಗರಾಜ ಮಾರೇರ
ಹುಬ್ಬಳ್ಳಿ:
ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರಿಗೆ ಉತ್ಸೇಜನ ನೀಡಬೇಕು, ಪಿಒಪಿ (ಪ್ಲಾಸ್ಟರ್ ಆಪ್ ಪ್ಯಾರೀಸ್) ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಬೇಕೆಂದು ಪಣತೊಟ್ಟ ಮಹಾನಗರ ಪಾಲಿಕೆ ಮಣ್ಣಿನ ಮೂರ್ತಿ ತಯಾರಿಕೆಗೆ ₹ 25000 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿ ಎರಡು ತಿಂಗಳಾದರೂ ಈ ವರೆಗೂ ಬಿಡಿಕಾಸು ನೀಡಿಲ್ಲ. ಅತ್ತ ಸಲ್ಲಿಸಿದ ಅರ್ಜಿಗಳು ಯಾವ ಹಂತದಲ್ಲಿವೆ ಎಂದು ಮಾಹಿತಿಯೂ ಲಭ್ಯವಾಗುತ್ತಿಲ್ಲ.
ಗಣೇಶೋತ್ಸವದ ಮೊದಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದರು. ಜತೆಗೆ ಮೂರ್ತಿ ತಯಾರಕರಿಂದ ಅರ್ಜಿಯನ್ನು ಸಹ ಸ್ವೀಕರಿಸಿದ್ದರು.
₹25000 ನೆರವು:
ಪರಿಸರಕ್ಕೆ ಧಕ್ಕೆಯಾಗದಂತೆ ಹಾಗೂ ಪ್ಲಾಸ್ಟರ್ ಆಪ್ ಪ್ಯಾರೀಸ್ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಬೇಕೆಂದು ಮಣ್ಣಿನ ಮೂರ್ತಿ ತಯಾರಕರನ್ನು ಉತ್ಸೇಜಿಸಲು ಶಿಲ್ಪಕಾರರಿಗೆ ₹ 25000 ನೀಡಲಾಗುವುದು ಎಂದು ಅರ್ಜಿ ಆಹ್ವಾನಿಸಿತ್ತು. ಅರ್ಜಿಯೊಂದಿಗೆ ಮಣ್ಣಿನ ಮೂರ್ತಿ ಮಾಡುವ ಸ್ಥಳ, ಶಿಲ್ಪಕಾರರ ಭಾವಚಿತ್ರ, ಗಣೇಶ ಮೂರ್ತಿ ತಯಾರಿಸಿದ ಫೋಟೋ, ಬ್ಯಾಂಕ್ ಖಾತೆಯ ಝೇರಾಕ್ಸ್ ಪ್ರತಿ ಲಗತ್ತಿಸಿ ಆಯಾ ವ್ಯಾಪ್ತಿಯ ವಲಯ ಕಚೇರಿಗಳ ಆಯುಕ್ತರ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅದರಂತೆ ಶಿಲ್ಪಕಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬಳಿಕ ಆ ಅರ್ಜಿಗಳ ಸ್ಥಿತಿಗತಿ ಮಾತ್ರ ಈ ವರೆಗೂ ದೊರೆಯದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಂಕಷ್ಟಕ್ಕೆ ನೆರವಾಗಿ:
ತಲಾಂತರದಿಂದ ಗಣೇಶ ಮೂರ್ತಿ ಮಾಡಿಕೊಂಡು ಬರುತ್ತಿರುವ ನಾವು ಪ್ಲಾಸ್ಟರ್ ಆಪ್ ಪ್ಯಾರೀಸ್ ಗಣೇಶ ಮೂರ್ತಿಗಳ ಅಬ್ಬರದಿಂದ ವೃತ್ತಿ ಕೈಬಿಟ್ಟು ಬೇರೆ ಉದ್ಯೋಗದತ್ತ ಮುಖಮಾಡುತ್ತಿದ್ದೇವೆ. ಆದರೂ ಸಂಪ್ರದಾಯವನ್ನು ಕೈಬಿಡಬಾರದೆಂದು ಮಣ್ಣಿನ ಮೂರ್ತಿ ಮಾಡುತ್ತಿದ್ದೇವೆ. ಆದರೆ, ಮಾಡಿದ ಕೆಲಸಕ್ಕೆ ಕೂಲಿಯೂ ಸಿಗುತ್ತಿಲ್ಲ. ಈ ಬಾರಿ ಪಾಲಿಕೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದರಿಂದ ಆರ್ಥಿಕವಾಗಿ ನೆರವಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ, ಆರಂಭದಲ್ಲಿ ಶೂರತ್ವ ತೋರಿ ಅರ್ಜಿ ಸ್ವೀಕರಿಸಿದ್ದ ಪಾಲಿಕೆ ಆ ಕುರಿತು ಯಾವ ಮಾಹಿತಿಯನ್ನು ನೀಡುತ್ತಿಲ್ಲ ಎನ್ನುತ್ತಾರೆ ಮೂರ್ತಿ ತಯಾಕರ ವೀರಭದ್ರಪ್ಪ ಕಮ್ಮಾರ.
ವಾರದೊಳಗೆ ಕ್ರಮಕೈಗೊಳ್ಳಿ:ತಮ್ಮ ಬದುಕಿನ ಬಂಡಿಯ ಜತೆಗೆ ನೆಲ, ಜಲಮೂಲಗಳ ರಕ್ಷಣೆಗಾಗಿ ಮಣ್ಣಿನ ಮೂರ್ತಿ ತಯಾರಿಸಿ ಬರುವ ಅಲ್ಪ ಹಣದಲ್ಲಿಯೇ ಜೀವನ ಸಾಗಿಸುತ್ತಿರುವ ಮೂರ್ತಿ ತಯಾಕರ ನೆರವಿಗೆ ತಕ್ಷಣ ಮಹಾನಗರ ಪಾಲಿಕೆ ಪ್ರೋತ್ಸಾಹ ಧನ ನೀಡಬೇಕು. ಅಥವಾ ಸ್ವೀಕರಿಸಿದ ಅರ್ಜಿ ಯಾವ ಹಂತದಲ್ಲಿದೆ, ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬ ಮಾಹಿತಿಯನ್ನಾದರೂ ನೀಡಬೇಕು ಎನ್ನುತ್ತಾರೆ ಪರಿಸರವಾದಿ ರವಿ ಪಿ.ರ್ತಿ ತಯಾರಿಕೆ ನಿಲ್ಲಿಸುತ್ತೇವೆವರ್ಷದಿಂದ ವರ್ಷಕ್ಕೆ ಮೂರ್ತಿಗಳ ವೆಚ್ಚ ಹೆಚ್ಚಳವಾಗುತ್ತಿದೆ. ಅದಕ್ಕೆ ತಕ್ಕಂತೆ ದರವೂ ಇಲ್ಲ. ಇತ್ತ ನೆರವಾಗಬೇಕಿದ್ದ ಪಾಲಿಕೆಯೂ ಕೈಚೆಲ್ಲಿದೆ. ಹೀಗಾಗಿ ಮುಂದಿನ ವರ್ಷದಿಂದ ಗಣೇಶ ಮೂರ್ತಿಗಳ ತಯಾರಿಕೆ ನಿಲ್ಲಿಸುತ್ತೇವೆ ಎನ್ನುತ್ತಾರೆ ಅರ್ಜಿ ಸಲ್ಲಿಸಿದ ಮೂರ್ತಿ ತಯಾರಕರು.
ಮಹಾನಗರ ಪಾಲಿಕೆ ಘೋಷಿಸಿದ್ದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಈ ವರೆಗೂ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ಕೊಡುತ್ತಿಲ್ಲ. ಶೀಘ್ರ ಪ್ರೋತ್ಸಾಹಧನ ನೀಡಿದರೆ ನಮಗೂ ಅನುಕೂಲವಾಗಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.