ಕನ್ನಡಪ್ರಭವಾರ್ತೆ ಮಧುಗಿರಿ
ಗರ್ಭದಲ್ಲಿ ಹೊತ್ತು ಮಡಿಲಲ್ಲಿ ಬೆಳಸಿ ಅಕ್ಕರೆ ತೋರಿ ಅಕ್ಷರ ಕಲಿಸಿ ವಿದ್ಯಾವಂತರನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಹೆಣ್ಣು ಸಮಾಜದ ಕಣ್ಣು ಬಡತನವಿರಲಿ ಸಿರಿತನವಿರಲಿ ತನ್ನ ಮಕ್ಕಳು ಎಲ್ಲರಂತೆ ಬೆಳೆಯಲಿ ಎಂದು ಪೋಷಿಸಿ ಬೆಳೆಸುವ ಜೀವ ಶಕ್ತಿ ಜಗತ್ತಿನಲ್ಲಿ ಒಬ್ಬಳೇ ತಾಯಿ, ಆಕೆಯ ಮುಪ್ಪಿನಲ್ಲಿ ಋಣ ತೀರಿಸುವ ಜವಾಬ್ದಾರಿ ವಹಿಸಿ ತಾಯಿಗೆ ತಕ್ಕ ಮಕ್ಕಳಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ತಾಯಿ ಕಂಡ ಕನಸು ನನಸು ಮಾಡುವುದು ಮಕ್ಕಳ ಹೊಣೆಗಾರಿಕೆ ಎಂದರು.ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ.ಎನ್.ರಾಜಣ್ಣ ತ್ರಿಕರ್ಣ ಪೂರ್ವಕವಾಗಿ ಶ್ರಮಿಸುತ್ತಿದ್ದು, ಸಿಎಂ ಸಿದ್ದರಾಮಯ್ಯರವರಲ್ಲಿ ಮನವಿ ಮಾಡಿ ಇಡೀ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶೂ ಭಾಗ್ಯ ಕೊಡಿಸಿದ್ದು ಶಾಸಕ ಕೆ.ಎನ್.ರಾಜಣ್ಣ ಎಂದ ಅವರು, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಮ್ಮ ತಾಲೂಕಿನ ಎಲ್ಲ ಅಂಗನವಾಡಿ ಮಕ್ಕಳಿಗೆ ಎರೆಡು ಜೊತೆ ಯೂನಿಫಾರಂ ಮತ್ತು ಒಂದು ಜೊತೆ ಶೂ ಕೊಡಿಸಲು ಸಿಎಂ ಸಿದ್ದರಾಮಯ್ಯರವರಲ್ಲಿ ಚರ್ಚಿಸಿ ಸಿದ್ದತೆ ನಡೆದಿದೆ. ಎಲ್ಲ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬುದು ಸರ್ಕಾರದ ಧ್ಯೇಯ. ಅದರಂತೆ ಸರ್ಕಾರ ಓದುವ ಎಲ್ಲ ಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ದೊರೆಯುವ ಎಲ್ಲ ಸೌಲಭ್ಯಗಳನ್ನು ಮಕ್ಕಳು ಮತ್ತು ಪೋಷಕರು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿದ್ದ ತಾಯಂದಿರಿಗೆ ಸೀರೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಕೆಪಿಸಿಸಿ ಕಾನೂನು ರಾಜ್ಯ ಘಟಕದ ಕಾರ್ಯಧ್ಯಕ್ಷ ಅನಂತನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಕುರುಬರಹಳ್ಳಿ ಯುವ ಮುಖಂಡ ಹರ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ರಂಟವಳಲು ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪಣ್ಣ, ಸದಸ್ಯ ದೇವರಾಜ್,ರೈತ ಸಂಘದ ಸುನೀಲ್, ರಫೀಕ್, ಪಾರ್ವತಿ ಶರ್ಮಾ,ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ರಂಟವಳಲು ಕೃಷ್ಣಪ್ಪ,ವಿಎಸ್‌ಎಸ್ಎನ್ ಮಾಜಿ ಅಧ್ಯಕ್ಷ ಸಣ್ಣರಾಮಯ್ಯ, ಡಿಸಿಸಿ ಹಾಗೂ ಗ್ರಾಮಸ್ಥರು ಇದ್ದರು.