ಸರ್ಕಾರದ ಸೌಲಭ್ಯ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡುವೆ

KannadaprabhaNewsNetwork |  
Published : Dec 12, 2025, 02:15 AM IST
ನಗರದ ಮಹಾದೇವಪ್ಪನವರಿಗೆ ಕೃಷಿ ಭವನದಲ್ಲಿ ಅಭಿನಂದಿಸಲಾಯಿತು | Kannada Prabha

ಸಾರಾಂಶ

ನಿಷ್ಠೆಯಿಂದ ಜನಸೇವೆ ಕೈಗೊಂಡಲ್ಲಿ ಅವಕಾಶ ಹುಡುಕಿ ಬರುತ್ತದೆ. ಈ ದೆಸೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ರೈತನಿಗೂ ತಲುಪಿಸುವ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ರಾಜ್ಯ ಕೃಷಿಕ ಸಮಾಜದ ನೂತನ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.

ಶಿಕಾರಿಪುರ: ನಿಷ್ಠೆಯಿಂದ ಜನಸೇವೆ ಕೈಗೊಂಡಲ್ಲಿ ಅವಕಾಶ ಹುಡುಕಿ ಬರುತ್ತದೆ. ಈ ದೆಸೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ರೈತನಿಗೂ ತಲುಪಿಸುವ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ರಾಜ್ಯ ಕೃಷಿಕ ಸಮಾಜದ ನೂತನ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.ಬುಧವಾರ ಸಂಜೆ ಪಟ್ಟಣಕ್ಕೆ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಎಪಿಎಂಸಿ ಪ್ರಾಂಗಣದಲ್ಲಿನ ಕೃಷಿ ಭವನದಲ್ಲಿ ತಾ.ಕೃಷಿಕ ಸಮಾಜ ಸಹಿತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರೈತ ಪರವಾದ ಧೋರಣೆ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ನಿಷ್ಠೆಯಿಂದ ಕೈಗೊಂಡ ಜನಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಆಯ್ಕೆಗೊಳಿಸಿದ್ದು, ಈ ದೆಸೆಯಲ್ಲಿ ಆಭಾರಿಯಾಗಿದ್ದೇನೆ ಎಂದ ಅವರು, ಜನಪರ ಕಾಳಜಿ ನಿಷ್ಠೆಯಿಂದ ಜನಸೇವೆ ಕೈಗೊಂಡಲ್ಲಿ ಅವಕಾಶ ನಿಶ್ಚಿತವಾಗಿ ಹುಡುಕಿ ಬರಲಿದೆ ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷನಾಗಿ ಹಲವು ವರ್ಷ ಸೇವೆ ಸಲ್ಲಿಸಲು ಸಹಕರಿಸಿ, ಇದೀಗ ರಾಜ್ಯಕೃಷಿಕ ಸಮಾಜದ ಅಧ್ಯಕ್ಷನಾಗುವವರೆಗೂ ಜೊತೆಗಿದ್ದು, ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು ಸರ್ಕಾರವು ಹಲವು ಯೋಜನೆಗಳನ್ನು ರೈತರಿಗೆ ನೀಡುತ್ತಿದೆ, ರೈತರು ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಮಟ್ಟದಲ್ಲಿ ಕೃಷಿ ಕೈಗೊಂಡಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ, ದೇಶದ ಬೆನ್ನೆಲುಬು ರೈತ ಎನ್ನುವುದಕ್ಕೆ ಅರ್ಥ ಬರುತ್ತದೆ ಎಂದರು.ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ನಗರದ ಮಹದೇವಪ್ಪನವರು ತಾಲೂಕು ಜಿಲ್ಲಾ ಅಭಿವೃದ್ಧಿಗೆ ನೀಡಿದ ಹಲವು ಸಲಹೆ ಸೂಚನೆಗಳು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪೂರಕವಾಗಿದ್ದವು ಎಂದರು.ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ ಮಾತನಾಡಿ, ನಗರದ ಮಹದೇವಪ್ಪನವರು ಅಜಾತಶತ್ರುವಾಗಿದ್ದು ರಾಜಕಾರಣವನ್ನು ಹೊರತುಪಡಿಸಿ ತಾಲೂಕಿನ ಏಳ್ಗೆಗೆ ರೈತ ಪರ ಹೋರಾಟಗಳು ಸದಾಕಾಲ ಮಾದರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ನಗರದ ಮಹದೇವಪ್ಪ ನವರು ಸಜ್ಜನ ರಾಜಕಾರಣಿಯಾಗಿದ್ದು, ಅನುಭವ ಮತ್ತು ಹೋರಾಟದ ತುಡಿತ 77ರ ವಯಸ್ಸಿನಲ್ಲೂ 27ರ ಹರೆಯದಂತೆ ಯುವಕರನ್ನು ನಾಚಿಸುವಂತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ನಾಗರಾಜಪ್ಪ, ತಾ.ಉಪಾಧ್ಯಕ್ಷ ಮುನಿಯಪ್ಪ ರೈತ ಮುಖಂಡ ಡಿ.ಎಸ್.ಈಶ್ವರಪ್ಪ, ಮುಗುಳಗೆರೆ ಬೂದೆಪ್ಪ, ಕೆಂಪಳ್ಳಿ ಗಂಗಾಧರಪ್ಪ, ಕೆ.ಪಿ.ರುದ್ರಪ್ಪ, ಕವಲಿ ರಾಮನಗೌಡ, ಬಿ.ಸಿ.ವೇಣುಗೋಪಾಲ್, ಪಚ್ಚಿಗಿಡ್ಡಪ್ಪ, ಚನ್ನವೀರ ಶೆಟ್ಟರು, ಬಸವರಾಜ್ ಪಾಟೀಲ್, ಮಲ್ಲೇಶಪ್ಪ, ಅಂಬಾರಗೊಪ್ಪದ ರಾಜಪ್ಪ, ಕಿರಣ್ ಕಾಂತ್, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಸಹಿತ ಹಲವರು ಪಾಲ್ಗೊಂಡಿದ್ದರು.

ನಂತರದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್‍ಯಾಲಿಯ ಮೂಲಕ ಅದ್ಧೂರಿ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ