ಕನ್ನಡಪ್ರಭವಾರ್ತೆ ತಿಪಟೂರು
ನಗರದ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಪೊಲೀಸ್ ಇಲಾಖೆ ಏರ್ಪಡಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದೇಶದಿಂದ ವಿಮಾನಗಳಲ್ಲಿ ಡ್ರಗ್ಸ್ ತಂದು ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಮಾರಾಟ ಮಾಡುವ ಜಾಲ ಇದ್ದು ಡ್ರಗ್ಸ್ ಮಾರಾಟ ಜಾಲ ದೇಶದ ವ್ಯಾಪ್ತಿಯನ್ನೂ ಮೀರಿದೆ. ರಾಜ್ಯದ ಬಹಳಷ್ಟು ಶಾಲಾಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ತಡೆಯದಿದ್ದರೆ ಯುವ ಜನತೆಗೆ ಬಹಳ ಕಷ್ಟವಾಗುತ್ತದೆ. ಆದ್ದರಿಂದಲೇ ಸರಕಾರ ಮಾದಕವಸ್ತು ತಡೆಗೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ ದೊಡ್ಡ ಕಾಲೇಜುಗಳಲ್ಲಿ, ಹಾಸ್ಟೆಲ್ ಗಳಲ್ಲಿ ಕೆಲವು ಡ್ರಗ್ಸ್ ವ್ಯಸನಿಗಳು ತಾವು ಡ್ರಗ್ಸ್ ತೆಗೆದುಕೊಂಡು ಹಾಳಾಗುವುದಲ್ಲದೇ ಇತರರನ್ನೂ ಪ್ರರೇಪಿಸುತ್ತಾರೆ. ನಮಗೂ ಕೂಡ ಅನೇಕ ವಿದ್ಯಾರ್ತಿ ನಿಲಯಗಳಲ್ಲಿ ಕೆಲವು ಮಾದಕವಸ್ತು ಸೇವನೆಯ ಬಗ್ಗೆ ದೂರುಗಳು ಬಂದಿದ್ದು ಕೂಡಲೇ ಅಲ್ಲಿಗೆ ಭೇಟಿ ನೀಡಿ ಅದರ ನಿವಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಚನ್ನಕೇಶವ ಮಾತನಾಡಿ ಹದಿನೈದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳು ಡ್ರಗ್ಸ್ ಚಟಕ್ಕೆ ಆಕರ್ಷಿತರಾಗುವುದು ಹೆಚ್ಚು. ಈ ವಯಸ್ಸಿನಲ್ಲಿ ದೇಹಸ್ಥಿತಿ ವೇಗವಾಗಿ ಬೆಳೆಯುತ್ತದೆ. ಇಂತಹ ಸಮಯದಲ್ಲಿ ದೈಹಿಕ ಚಟುವಡಿಕೆಗಳನ್ನು ಮಾಡಿ ಪೌಷ್ಠಿಕ ಆಹಾರ ತೆಗೆದುಕೊಳ್ಳಬೇಕು. ಕೆಟ್ಟವರ ಸಹವಾಸ ಮಾಡಬೇಡಿ. ಒಮ್ಮೆ ಚಟ ಹತ್ತಿಸಿಕೊಂಡರೆ ಜೀವನವೇ ನರಕವಾಗುತ್ತದೆ. ಡ್ರಗ್ಸ್ ದೇಹದ ನರಮಂಡಳವನ್ನು ಮತ್ತು ಮೆದುಳನ್ನು ನಿಶ್ಕಿçಯಗೊಳಿಸುತ್ತದೆ. ಇದರಿಂದ ಯಾವಾಗಲೂ ದೂರವಿರಿ ಎಂದರು. ಸಹಾಯಕ ಪೊಲೀಸ್ ಅಧೀಕ್ಷಕ ಉಮೇಶ್‌ಕುಮಾರ್ ಮಾತನಾಡಿ ಈಗಿರುವ ಮಾಹಿತಿಯಂತೆ ದೇಶದಲ್ಲಿ ಪ್ರತಿದಿನ ೧೦ಜನ ಮಾದಕ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಇಬ್ಬರು ೧೬ವಯಸ್ಸಿಗಿಂತ ಕಿರಿಯರು. ದೇಶಕ್ಕೆ ಪ್ರತಿದಿನ ೬ಕೆಜಿಯಷ್ಟು ಹೆರಾಯಿನ್ ಸರಬರಾಜಾಗುತ್ತಿದೆ. ಹಳ್ಳಿಗಳಲ್ಲಿ ಗಾಂಜಾ ಬೆಳೆ ಸುಲಭವಾಗಿ ಸಿಗುತ್ತಿದೆ. ಶಿಕ್ಷಕರು ಅನುಮಾನ ಬಂದ ವಿದ್ಯಾರ್ಥಿಗಳನ್ನು ಗಮನಿಸಿ ಮಾತನಾಡಿ ಪೋಷಕರಿಗೆ ಮಾಹಿತಿ ನೀಡಿ. ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಮದು ಪ್ರಮಾಣ ಮಾಡೋಣ ಎಂದರು. ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ಪಿಎಸ್‌ಐ ವೆಂಕಟೇಶ್, ಪೊಲೀಸ್ ಇನ್ಸಪೆಕ್ಟರ್ ರವಿಕುಮಾರ್ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.