ಹಾವೇರಿ: ಸದಾಶಿವ ಆಯೋಗದ ವರದಿ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಶಿಷ್ಟರಿಗೆ ಅನ್ಯಾಯವಾಗದ ರೀತಿಯಲ್ಲಿ ಅವರವರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಮತ್ತು ಜೋಶಿ ಅವರಿಗೆ ಮಾದಿಗ ಸಮಾಜ ಬೆಂಬಲ ನೀಡಲಿದೆ ಎಂದು ಲೀಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಹೇಳಿದರು.
ಈ ಹಿನ್ನೆಲೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಆದ ಕಾರಣ ಧಾರವಾಡ, ಹಾವೇರಿ-ಗದಗ ಜಿಲ್ಲೆಯ ಮಾದಿಗ ಸಮಾಜದ ಮತದಾರ ಬಂಧುಗಳು ಬೊಮ್ಮಾಯಿ ಹಾಗೂ ಪ್ರಹ್ಲಾದ ಜೋಶಿ ಅವರಿಗೆ ಮತವನ್ನು ನೀಡುವ ಮೂಲಕ ಅವರ ಋಣ ತೀರಿಸಲು ಸಮಾಜದ ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ. ಈ ಇಬ್ಬರನ್ನೂ ತಲಾ ೨ ಲಕ್ಷ ಲೀಡ್‌ನಿಂದ ಗೆಲ್ಲಿಸುವ ಹೊಣೆ ನಮ್ಮದು ಎಂದು ಹೇಳಿದರು.
ಸುಭಾಷ ಬೆಂಗಳೂರು, ಭೀಮಣ್ಣ ಯಲ್ಲಾಪುರ, ಮಲ್ಲೇಶಪ್ಪ ಕಡಕೋಳ, ಸುನೀಲ ದಂಡೆಮ್ಮನವರ, ರಘು ಮಾಳಗಿ, ವಿ. ಯಲ್ಲಾಪುರ ಇದ್ದರು.