ಧಾರವಾಡ:
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿಯ ಉದ್ದೇಶ ಕಟ್ಟಕಡೆಯ ರೈತರ ಜಮೀನಿಗೂ ನೀರು ಒದಗಿಸುವುದಾಗಿತ್ತು. ಆದರೆ, ರೈತರಿಗೆ ಸಮರ್ಪಕವಾಗಿ ನೀರು ಲಭಿಸುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡಿಲ್ಲ. ಅವೈಜ್ಞಾನಿಕ ಕಳಪೆ ಕಾಮಗಾರಿ, ಭ್ರಷ್ಟಾಚಾರ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ರೈತರ ಜಮೀನುಗಳಿಗೆ ಹೋಗಲು ಸರಿಯಾದ ಸರ್ವೀಸ್ ರಸ್ತೆಗಳಿಲ್ಲ. ಈ ಕುರಿತು ಹಲವು ಬಾರಿ ಮನವಿ ನೀಡಿದರೂ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವ್ಯವಹಾರ ಕುರಿತು ಲೋಕಾಯುಕ್ತರಿಗೆ ದಾಖಲೆ ನೀಡಿ ದೂರು ದಾಖಲಿಸಲಾಗಿತ್ತು. ಆದರೆ, ಸಮರ್ಪಕ ತನಿಖೆ ನಡೆದಿಲ್ಲ. ಜ. 29ರಂದು ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಅವರಿಗೆ ಅಗತ್ಯ ದಾಖಲೆ ನೀಡಲಾಗಿದೆ. ಅಲ್ಲದೇ ಬೆಣ್ಣೆಹಳ್ಳ ಕಾಮಗಾರಿ ಉದ್ಘಾಟನೆಗಾಗಿ ಶಿರಗುಪ್ಪಿಗೆ ಸಿಎಂ ಸಿದ್ದರಾಮಯ್ಯ ಬಂದಾಗ ಅವರಿಗೂ ದಾಖಲೆ ನೀಡಿ ತನಿಖೆಗೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು.ಈ ಕುರಿತು ಹೋರಾಟ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹಾಕಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಫೋನ್ ಕರೆ, ಅಗತ್ಯ ಫೋಟೋಗಳನ್ನೊಳಗೊಂಡ ಸಿಡಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಹೋರಾಟ ನಿಲ್ಲಿಸುವಂತೆ ಹಲವರು ಬೆದರಿಕೆ ಒಡ್ಡಿದ್ದಾರೆ. ಭ್ರಷ್ಟ ವ್ಯವಸ್ಥೆಯನ್ನು ಸಿಡಿ ರೂಪದಲ್ಲಿ ಜನರೆದುರು ಬಿಡುಗಡೆ ಮಾಡಲಾಗುವುದು ಎಂದು ಸೊಬರದಮಠ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿ.ಟಿ. ಬಡಿಗೇರ, ಮುತ್ತು ಪಾಟೀಲ, ಮಲ್ಲಣ್ಣ ಆಲೇಕಾರ, ಶಿವು ಬಡಿಗೇರ ಇದ್ದರು.