ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಗಳು ಗೌರವ ನೀಡುವ ರೀತಿಯಲ್ಲಿ ಮುಸ್ಲಿಂ ಸಮುದಾಯವು ಹಿಂದು ಸಂಪ್ರದಾಯ ಆಚರಣೆಗಳಿಗೆ ಗೌರವ ನೀಡಬೇಕಿತ್ತು. ಆದರೆ, ಗಣೇಶ ಉತ್ಸವದಲ್ಲಿ ಕಲ್ಲು ತೂರಾಟ ನಡೆಸಿರುವುದು ಖಂಡನೀಯ ಎಂದರು.
ಇಂತಹ ಕೃತ್ಯಗಳನ್ನು ಖಂಡಿಸಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ವತಿಯಿಂದ ಬಂದ್ ಮಾಡಲಾಗುತ್ತಿದೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸಬೇಕು. ವಿವಿಧ ಸಂಘಟನೆಗಳು ಬೆಂಬಲ ನೀಡಬೇಕು. ಜೊತೆಗೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆ ವಸ್ತಗಳನ್ನು ನಾಶ ಪಡಿಸಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಬಿಜೆಪಿ ಹಿರಿಯ ಮುಖಂಡ ಯಮದೂರು ಸಿದ್ದರಾಜು ಮಾತನಾಡಿ, ಹಿಂದುಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಶಾಂತಿಗೆ ಕಾರಣವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಹೆಚ್ಚಿನ ಆರೋಪಿಗಳನ್ನು ಬಂಧಿಸಬೇಕು. ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕು. ಸೆ.11ರಂದು ನಡೆಯಲಿರುವ ಬಂದ್‌ಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವಿ.ಎಂ.ವಿಶ್ವನಾಥ್, ಕೃಷ್ಣ, ಅಪ್ಪಾಜಿಗೌಡ, ಗಂಗಾಧರ್, ಹನುಮಂತು, ಪುಟ್ಟುಬುದ್ದಿ, ದೊಡ್ಡಯ್ಯ, ಸತೀಶ್, ರವಿ, ಕಾಂತರಾಜು, ಸಿದ್ದರಾಜು, ಶಿವಲಿಂಗು ಸೇರಿದಂತೆ ಇತರರು ಇದ್ದರು.