ಮಳವಳ್ಳಿ ಟಿಎಪಿಸಿಎಂಎಸ್ ಚುನಾವಣೆ: ಕಾಂಗ್ರೆಸ್ ಬೆಂಬಲಿತರಿಗೆ ಹೆಚ್ಚಿನ ಸ್ಥಾನ

KannadaprabhaNewsNetwork |  
Published : Sep 30, 2025, 12:00 AM IST
29ಕೆಎಂಎನ್ ಡಿ11 | Kannada Prabha

ಸಾರಾಂಶ

ಮಳವಳ್ಳಿ ಟಿಎಪಿಸಿಎಂಎಸ್‌ನ 14 ಸ್ಥಾನದಲ್ಲಿ ಹಲಗೂರು ಕ್ಷೇತ್ರದಿಂದ ಮಾಲಾಶ್ರೀ ಅವಿರೋಧ ಆಯ್ಕೆಯಾಗಿದ್ದರು. 13 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತರು 6, ಬಿ. ತರಗತಿಗಳಿಗೆ ಎರಡು ಹಾಗೂ ಎನ್‌ಡಿಎ ಮೈತ್ರಿ ಬೆಂಬಲಿತರು ಬಿ. ತರಗತಿಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘದ ಐದು ವರ್ಷದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು 9 ಸ್ಥಾನ ಪಡೆದು ಸ್ವಷ್ಟ ಬಹುಮತ ಪಡೆದಿದೆ.

14 ಸ್ಥಾನದಲ್ಲಿ ಹಲಗೂರು ಕ್ಷೇತ್ರದಿಂದ ಮಾಲಾಶ್ರೀ ಅವಿರೋಧ ಆಯ್ಕೆಯಾಗಿದ್ದರು. 13 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತರು 6, ಬಿ. ತರಗತಿಗಳಿಗೆ ಎರಡು ಹಾಗೂ ಎನ್‌ಡಿಎ ಮೈತ್ರಿ ಬೆಂಬಲಿತರು ಬಿ. ತರಗತಿಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದರು.

ಎ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ಕೆ.ಜೆ.ದೇವರಾಜು, ಕೆ.ಪಿ.ನರೇಂದ್ರ ಕೆ.ಎಂ.ಪುಟ್ಟು, ಎಂ.ಲಿಂಗರಾಜು, ಬಿ.ಪುಟ್ಟಬಸವಯ್ಯ, ವಿ.ಎನ್.ಮನು ಹಾಗೂ ಎನ್.ಸತೀಶ್ ಹಾಗೂ ಬಿ ತರಗತಿಯಲ್ಲಿ ಮಾಲಾಶ್ರೀ, ಎಂ ಮಾದಯ್ಯ(ಮಲ್ಲಣ್ಣ) ದಿಲೀಪ್‌ಕುಮಾರ್ (ವಿಶ್ವ) ಎನ್‌ಡಿಎ ಮೈತ್ರಿ ಬೆಂಬಲಿತ ಎಚ್‌.ವಿ.ಶಿವರುದ್ರಪ್ಪ, ಎನ್.ಶೋಭಾ, ರತ್ನಮ್ಮ, ರಾಮಣ್ಣ, ಶ್ರೀಧರ್ ಆಯ್ಕೆಯಾದರು.

ಚುನಾವಣಾಧಿಕಾರಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರು ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಿಪಿಐ ಎಂ.ರವಿಕುಮಾರ್ ನೇತೃತ್ವದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಬಹುತೇಕ ಚುನಾವಣೆ ಶಾಂತಿಯುತವಾಗಿ ನಡೆಯಿತು.

ನೂತನ ನಿರ್ದೇಶಕ ಕೆ.ಜೆ.ದೇವರಾಜು ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಹಕಾರದೊಂದಿಗೆ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿತರು ಹಿಡಿಯಲಿದ್ದಾರೆ. ಎ ತರಗತಿಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿ.ತರಗತಿಯಲ್ಲಿ ಸ್ವಲ್ಪ ಹಿನ್ನೆಡೆಯಾಗಿದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ಹೆಜ್ಜೆ ಇಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಕಾಂಗ್ರೆಸ್ ಬೆಂಬಲಿತ ಸ್ಪರ್ಧಿಗಳಿಗೆ ಮತ ಹಾಕಿದೆ ಎಲ್ಲಾ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಚುನಾವಣೆಗಳು ಕಾನೂನಾತ್ಮಕವಾಗಿಯೇ ನಡೆಯುತ್ತಿವೆ. ಸಲ್ಲದ ಆರೋಪಗಳಿಗೆ ಮಾನ್ಯತೆ ಇಲ್ಲ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಚುನಾವಣೆಯಲ್ಲಿ ಕಳೆದ ಭಾರಿ ಒಂದು ಸ್ಥಾನದಲ್ಲಿತ್ತು. ಪ್ರಸಕ್ತ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಡ ಐದು ಸ್ಥಾನಗಳಲ್ಲಿ ಗೆಲ್ಲುವು ಸಾಧಿಸುವ ಮೂಲಕ ಆಡಳಿತ ರೂಢ ಕಾಂಗ್ರೆಸ್‌ಗೆ ತಕ್ಕ ಉತ್ತರವನ್ನು ನೀಡಿದೆ ಎಂದರು.

ಜೆಡಿಎಸ್ ಯುವ ಘಟಕ ಅಧ್ಯಕ್ಷ ರವಿ ಕಂಸಾಗರ ಮಾತನಾಡಿ, ವಾಮಮಾರ್ಗದಲ್ಲಿ ಸಹಕಾರ ಸಂಘಗಳ ಅಧಿಕಾರವನ್ನು ಶಾಸಕರು ಹಿಡಿಯುತ್ತಿದ್ದಾರೆ. ಸಹಕಾರ ಸಂಘದಲ್ಲಿ ರಾಜಕೀಯ ಪ್ರವೇಶಿಸಿ ಪ್ರಾಮಾಣಿಕ ಸೇವೆ ಎನ್ನುವುದು ಇಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದರು. ನೂತನ ನಿರ್ದೇಶಕರನ್ನು ಬೆಂಬಲಿತ ಅಭಿನಂದಿಸಿ ಗೌರವಿಸಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ