ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಕೇರಳ ಮೂಲದ ಮಲಯಾಳಿ ಬಾಷಿಕರಿಗೆ ಓಣಂ ಹಬ್ಬದ ಸಂಭ್ರಮ. ದೇವರ ‘ನಾಡು’ ಕೇರಳ ರಾಜ್ಯದ ನಾಡ ಹಬ್ಬವನ್ನು ಕೊಡಗಿನ ಸುಂಟಿಕೊಪ್ಪದಲ್ಲೂ ಮಲೆಯಾಳಿ ಭಾಷಿಕರು ಅಷ್ಟೇ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಕೇರಳ ಮೂಲದ ಮಲಯಾಳಿ ಬಾಷಿಕರಿಗೆ ಓಣಂ ಹಬ್ಬದ ಸಂಭ್ರಮ. ದೇವರ ‘ನಾಡು’ ಕೇರಳ ರಾಜ್ಯದ ನಾಡ ಹಬ್ಬವನ್ನು ಕೊಡಗಿನ ಸುಂಟಿಕೊಪ್ಪದಲ್ಲೂ ಮಲೆಯಾಳಿ ಭಾಷಿಕರು ಅಷ್ಟೇ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿದರು. ಓಣಂ ಹಬ್ಬದ ಆಚರಣೆಯ ಹಿನ್ನಲೆಯ ಕುರಿತು ಪುರಾಣದ ಕಡೆಯಲ್ಲಿ ಉಲ್ಲೇಖವಿದೆ. ಹಿಂದೆ ಕೇರಳ ರಾಜ್ಯದಲ್ಲಿ ಬಲಿ ಚಕ್ರರ್ತಿ ಎಂಬ ರಾಜನು ರಾಜ್ಯ ಆಳುತ್ತಿದ್ದನು ಈ ರಾಜನ ಆಳ್ವಿಕೆಯಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿದ್ದು ಪ್ರಜೆಗಳ ರಾಜನ ಅಣತಿಯಂತೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಬಲಿಚಕ್ರವರ್ತಿ ಪರಾಕ್ರಾಮಿಯೂ ಧರ್ಮಿಷ್ಟನೂ ಮಹಾದಾನಿಯೂ ಆಗಿದ್ದು, ಪ್ರಜೆಗಳಿಗೆ ವಾತ್ಸಲ್ಯಮಯಿಯಾಗಿದ್ದನು, ಹೀಗಿರುವಾಗ ಬಲಿ ಚಕ್ರವರ್ತಿ ಇಂದ್ರ ಪದವಿ ಪಡೆಯಲು ಮಹಾಯಾಗ ಮಾಡಲು ಮುಂದಾದಾಗ ದೇವಾನು ದೇವತೆಗಳು ಹೆದರಿದರು. ಮುಂದೇನಾಗಬಹುದೋ ಎಂದು ದೇವತೆಗಳು ಮಹಾವಿಷ್ಣುವಿನ ಮೊರೆ ಹೋಗುತ್ತಾರೆ ಹೇಗಾದರೂ ಮಾಡಿ ಬಲಿ ಚಕ್ರವರ್ತಿ ನಡೆಸುವ ಯಾಗವನ್ನು ನಿಲ್ಲಿಸಬೇಕೆಂದು ಭಿನ್ನವಿಸಿಕೊಳ್ಳುತ್ತಾರೆ. ಆದರಂತೆ ಮಹಾವಿಷ್ಣು ವಾಮನ ರೂಪದಲ್ಲಿ ಬಲಿ ಚಕ್ರವರ್ತಿ ಬಳಿಗೆ ಬಂದು ತನಗೆ ಮೂರು ಹೆಜ್ಜೆ ಜಾಗ ಬೇಕೆಂದು ಕೇಳಿಕೊಳ್ಳುತ್ತಾರೆ. ಆಗ ಬಲಿ ಚಕ್ರವರ್ತಿ ನಾನು ಎಷ್ಟೇಷ್ಟೋ ದಾನ ಮಾಡಿದ್ದೇನೆ ಮೂರು ಹೆಜ್ಜೆ ಜಾಗವನ್ನು ಮಹಾ ಪಡೆದುಕೋ ಎಂದು ಅಜ್ಞಾಪಿಸುತ್ತಾರೆ. ಆಗ ವಾಮನ ರೂಪದಲ್ಲಿದ್ದ ವಿಷ್ಣು ತ್ರಿವಿಕ್ರಮವಾಗಿ ಬೆಳೆದು ಒಂದು ಹೆಜ್ಜೆಯನ್ನು ಭೂಮಿಗೂ ಮತ್ತೊಂದು ಹೆಜ್ಜೆಯನ್ನು ಆಕಾಶಕ್ಕೂಇಟ್ಟು ಅಳೆದು ಮೂರನೇ ಹೆಜ್ಜೆ ಜಾಗ ಎಲ್ಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ಕೊಟ್ಟ ಮಾತಿಗೆ ತಪ್ಪಲಾರದೆ ತನ್ನ ತಲೆ ಮೇಲೆ ಒಡ್ಡುವಂತೆ ಕೇಳಿಕೊಳ್ಳುತ್ತಾರೆ. ವಿಷ್ಣು ಬಲಿಚಕ್ರವರ್ತಿಯ ತಲೆ ಮೇಲೆ ಕಾಲಿಟ್ಟು ಪಾತಾಳಕ್ಕೆ ಅದುಮಲು ಮುಂದಾದಾಗ ಬಲಿ ಚಕ್ರವರ್ತಿ ಪ್ರತಿವರ್ಷ ನನ್ನ ಪ್ರಜೆಗಳನ್ನು ನೋಡಲು ಓಣಂ ಹಬ್ಬದಿಂದ ಬರುತ್ತಾರೆ ಎಂಬ ನಂಬಿಕೆ ಮಲಯಾಳಿ ಭಾಷಿಕರದಾಗಿದೆ.
ಸಿಂಹ ಮಾಸದಲ್ಲಿ ಹಸ್ತ ನಕ್ಷತ್ರದಲ್ಲಿ ಹತ್ತು ದಿನಗಳ ಕಾಲ ಓಣಂ ಆಚರಿಸಲಾಗುತ್ತದೆ. ಮನೆ ಹೆಂಗೆಳೆಯರು ಸಿಂಹ ಮಾಸದಲ್ಲಿ ಓಣಂ ಹಬ್ಬಕ್ಕೆ ಸರಿಯಾಗಿ 10 ದಿನಗಳ ಹಿಂದಿನಿಂದಲೇ ಮನೆಯ ಅಂಗಳವನ್ನು ಶುಚಿಗೊಳಿಸಿ ಸೆಗಣಿಸಾರಿಸಿ ಹೂವಿನ ರಂಗೋಲಿ (ಪೂಕಳಂ) ಸಿದ್ಧಗೊಳಿಸಿ ಆದರ ಮಧ್ಯೆ ಸೆಗಣಿ ಗುಚ್ಛದ ಮೇಲೆ ಮಣ್ಣಿನ ದೀಪದಲ್ಲಿ ದೀಪ ಬೆಳಗಿಸುವುದು ಸಾಂಪ್ರದಾಯಕವಾಗಿ ಬೆಳೆದು ಬಂದಿದೆ. ಓಣಂ ಹಬ್ಬದ ದಿನದಂದು ಹೊಸಬಟ್ಟೆ ಧರಿಸಿ ಮನೆಗೆ ತಳಿರುತೋರಣ ಕಟ್ಟಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮಧ್ಯಾಹ್ನ ಬಂಧು ಮಿತ್ರರೊಂದಿಗೆ ಸೇರಿಕೊಂಡು ಸಸ್ಯಹಾರದಿಂದ ತಯಾರಿಸಿದ ವಿವಿಧ ಬಗೆಯ ಪಲ್ಯ, ಪುಳಿಇಂಜಿ, ಭೋಜನ, ಪಪ್ಪಡ, ಪಾಯಸ, ತರಕಾರಿಗಳಿಂದ ತಯಾರಿಸಿದ (ಓಣಂ ಸಂದ್ಯದೊಂದಿಂಗೆ) ಭಕ್ಷ ಬೋಜನ ಸೇವಿಸಿ ಸಂತುಷ್ಟರಾಗುವುದು ಓಣಂ ಹಬ್ಬದ ವೈಶಿಷ್ಟ್ಯವಾಗಿದೆ. ಜಾತಿ, ಮತ, ಬಡವ ಬಲ್ಲಿದ ಭೇದವಿಲ್ಲದೆ ಓಣಂ ಆಚರಿಸಲಾಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.