- ೪೮ ಗ್ರಾಮಗಳ ಭಕ್ತರು, ಜಾನಪದ ಕಲಾ ತಂಡಗಳ ಮೆರುಗು
ನೀರಾವರಿ ಇಲಾಖೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಬಳಿಯ ೪೮ ಗ್ರಾಮಗಳ ಭಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪದ ಕಲಾ ತಂಡಗಳು, ತಮಟೆ ಮೇಳ, ಗೊಂಬೆ ಕಲುಣಿತ, ಡೋಳು, ಕಹಳೆಯೊಂದಿಗೆ ೧೫೦೦೦ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸರ್ವರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಯುವ ಮುಖಂಡ ರಾಜು ಮಾತನಾಡಿ, ವಿವಿಧ ಪಕ್ಷಗಳ ಮುಖಂಡರು, ಮುಸಲ್ಮಾನ ಬಾಂಧವರು ತನು, ಮನ, ಧನ ಸಹಕಾರ ನೀಡಿದ್ದಾರೆ. ಮೆರವಣಿಗೆಯನ್ನು ನಿರ್ವಹಿಸಲು ೩೦೦ ಯುವಕರು ಸ್ವಯಂ ಸೇವಕರಾಗಿ ಸೇವೆ ಮಾಡಲಿದ್ದಾರೆ. ಕೇಸರಿ ಬಾವುಟ ಹೊರತುಪಡಿಸಿ, ಬೇರೆ ಯಾವುದೇ ಬಣ್ಣದ ಮತ್ತು ಯಾರೋ ಚಿತ್ರನಟರು, ರಾಜಕಾರಣಿಗಳ ಭಾವಚಿತ್ರ ಹಿಡಿಯದೇ ಮೆರವಣಿಗೆ ಸಾಗಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.ವಿವಿಧ ಸಂಘ ಸಂಸ್ಥೆಯವರು ಮೆರವಣಿಗೆ ಮಾರ್ಗದಲ್ಲಿ ಮಜ್ಜಿಗೆ, ಲಡ್ಡು, ಪಾನಕಗಳನ್ನು ವಿತರಿಸಲಿದ್ದಾರೆ. ಪದಾಧಿಕಾರಿಗಳಾದ ರವಿಕುಮಾರ್, ಕರಿಬಸಪ್ಪ, ಲೋಕೇಶ್, ಸುಬ್ಬಿರಾಜು, ಶ್ರೀನಿವಾಸ್, ರಂಗಣ್ಣ, ವಿಶ್ವನಾಥ್, ಶೇಖರಪ್ಪ, ಗೌಡರ ಶ್ರೀನಿವಾಸ್, ರಂಗಣ್ಣ, ಲಿಂಗರಾಜ್, ಕಾರ್ತಿಕ್, ಮಲ್ಲಿಸ್ವಾಮಿ, ನಾಗರಾಜ್, ಕೇಶವ, ಕರಿಯಪ್ಪ ಮತ್ತಿತರರು ಇದ್ದರು.
- - - -೨೦ಎಂಬಿಆರ್೧:ಸುದ್ದಿಗೋಷ್ಠಿಯಲ್ಲಿ ಹಿಂದು ಮಹಾಗಣಪತಿ ಸಮಿತಿ ಪದಾಧಿಕಾರಿಗಳು ಮಾತನಾಡಿದರು.