ಮಳಖೇಡ ಗ್ರಂಥಪಾಲಕಿ ಸಾವು, ಪರಿಹಾರ ನೀಡಲು ಒತ್ತಾಯ

KannadaprabhaNewsNetwork |  
Published : Oct 16, 2025, 02:01 AM IST
14ಎಚ್‌ವಿಆರ್2 | Kannada Prabha

ಸಾರಾಂಶ

ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಂಬಳ ನೀಡದ ಕಾರಣಕ್ಕೆ ಬೇಸತ್ತು ಮಳಖೇಡದ ಗ್ರಂಥಪಾಲಕಿ ಭಾಗ್ಯವತಿ ಅಗ್ಗಿಮಠ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದನ್ನು ಖಂಡಿಸಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಕಾರಿಗಳು ಮಂಗಳವಾರ ಹಾವೇರಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಾವೇರಿ: ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಂಬಳ ನೀಡದ ಕಾರಣಕ್ಕೆ ಬೇಸತ್ತು ಮಳಖೇಡದ ಗ್ರಂಥಪಾಲಕಿ ಭಾಗ್ಯವತಿ ಅಗ್ಗಿಮಠ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದನ್ನು ಖಂಡಿಸಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಕಾರಿಗಳು ಮಂಗಳವಾರ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಚಲವಾದಿ ಮಾತನಾಡಿ, ಮಳಖೇಡದ ಗ್ರಂಥಪಾಲಕಿ ಭಾಗ್ಯವತಿ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಸಕಾಲಕ್ಕೆ ವೇತನ ಪಾವತಿಯಾಗದ ಕಾರಣಕ್ಕೆ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಕಿರುಕುಳ ನೀಡುತ್ತಿದ್ದಾರೆ. ಈ ಹಿನ್ನೆಲೆ ಸಕಾಲಕ್ಕೆ ವೇತನ ಬಟವಡೆ ಮಾಡದ ಕಾರಣ ಕೇಂದ್ರ ಗ್ರಂಥಾಲಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೂಡಲೇ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಗ್ರಂಥಾಲಯ ಮೇಲ್ವಿಚಾರಕರ ಸಂಘದ ತಾಲೂಕಾಧ್ಯಕ್ಷ ರವಿ ಪಾಟೀಲ ಮಾತನಾಡಿ, ಗ್ರಾಮೀಣ ಗ್ರಂಥಾಲಯಗಳು ಗ್ರಂಥಾಲಯ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ವರ್ಗಾವಣೆಗೊಂಡ ನಂತರ ಮಳಖೇಡದ ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಅತ್ಯಂತ ವಿಷಾದಕರ ಸಂಗತಿ. ಕುಟುಂಬಕ್ಕೆ ಆಧಾರವಾಗಿದ್ದ ಭಾಗ್ಯವತಿ ಎರಡು ಮಕ್ಕಳನ್ನು ಅಗಲಿದ್ದಾರೆ. ಆ ಕುಟುಂಬಕ್ಕೆ ಸರ್ಕಾರ ಪರಿಹಾರ ರೂಪದಲ್ಲಿ ₹25 ಲಕ್ಷ ಹಾಗೂ ಸರ್ಕಾರಿ ನೌಕರಿಯನ್ನು ಕುಟುಂಬಸ್ಥರಿಗೆ ನೀಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಪ್ಪ ಬಡಕರಿಯಪ್ಪನವರ, ಅಂದಲಗಿ ಗ್ರಂಥಾಲಯ ಮೇಲ್ವಿಚಾರಕಿ ಶೈಲಾ ಹಿರೇಮಠ ಮಾತನಾಡಿದರು. ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕರಾದ ತಿಪ್ಪಣ್ಣ ಕಾಟೇನಹಳ್ಳಿ, ರೇಖಾ ಉಪಳೆ, ಚಂದ್ರಶೇಖರ ಹಳ್ಳಿಕೊಪ್ಪದಮಠ, ಜಯಮ್ಮ ಸುಣಗಾರ, ಮರಿಯಮ್ಮ ಕಾಟೇನಹಳ್ಳಿ, ಇಬ್ರಾಹಿಂಸಾಬ್ ಬನ್ನಿಕೋಡ, ಕಾಂತೇಶ, ಪುಷ್ಪಾ ಕೇಸರದ, ಕವಿತಾ ಸೋಮಸಾಗರ, ಶಿವಣ್ಣ ಗೌಡಪ್ಪನವರ, ಮಾಲತೇಶ ಹೆಬ್ಬಾರ, ಸಂತೋಷ ದಾಸರ, ಚನ್ನಪ್ಪ ಕರಿಯಮ್ಮನವರ, ಗೌರಮ್ಮ ಚನ್ನಗಿರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

ದೀಪಾವಳಿ; ರಾಜ್ಯದ ವಿವಿಧೆಡೆ ಬಿಎಂಟಿಸಿಯಿಂದ 960 ಬಸ್‌ - ಗೋವಾಗೂ ವಿಶೇಷ ರೈಲು
ಬೆಂಗಳೂರು ನಗರವೊಂದರಲ್ಲೇ 943 ಟನ್‌ ಆಹಾರ ವ್ಯರ್ಥ: ಸಿಎಂ