ಮಲ್ಲೇಂಗಡ ಬೆಳ್ಯಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ

KannadaprabhaNewsNetwork |  
Published : Nov 12, 2023, 01:00 AM IST
ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್  ಸುದ್ದಿಗೋಷ್ಠಿ  | Kannada Prabha

ಸಾರಾಂಶ

ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು 17ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಲ್ಲೇಂಗಡ ಬಬೀನ್ ಬೋಪಣ್ಣ ಉದ್ಘಾಟಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಮಡಿಕೇರಿ ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್ ವತಿಯಿಂದ ‘ಮಲ್ಲೇಂಗಡ ಬೆಳ್ಯಪ್ಪ’ ಸ್ಮರಣಾರ್ಥ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ‘ಕೂರ್ಗ್ ಚಾಂಪಿಯನ್‌ಶಿಪ್ ಕಪ್-2023’ ಪಂದ್ಯಾವಳಿ 17, 18 ಹಾಗೂ 19 ರಂದು ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು 17ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಲ್ಲೇಂಗಡ ಬಬೀನ್ ಬೋಪಣ್ಣ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಅತಿಥಿಗಳಾಗಿ ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ ಚಕ್ರವರ್ತಿ, ಮಡಿಕೇರಿ ಜನನಿ ಆರೋಗ್ಯ ಕೇಂದ್ರದ ಡಾ.ಎನ್.ಎಸ್. ನವೀನ್ ಮತ್ತು ಡಾ.ಬಿ.ಕೆ.ರಾಜೇಶ್ವರಿ, ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಾಂಡ ಎಂ.ಎಸ್. ಜ್ಯೋತಿ ಸೋಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.19 ರಂದು ಸಂಜೆ 6 ಗಂಟೆಗೆ ಪಂದ್ಯಾವಳಿಯ ಸಮಾರೋಪ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಸ್ಮಿತಾ ಐ ಕೇರ್ ಸೆಂಟರ್ ನ ಡಾ.ಪ್ರಶಾಂತ್ ಮತ್ತು ಗಾನ ಪ್ರಶಾಂತ್, ವಕೀಲ ಕೆ.ಎಸ್.ಕವನ್, ಅಮೃತ ಇಎನ್‌ಟಿ ಮತ್ತು ವರ್ಟಿಗೋ ಕ್ಲಿನಿಕ್ ನ ಡಾ.ಮೋಹನ್ ಅಪ್ಪಾಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ಟ್ರೋಫಿ, ಪದಕ ಹಾಗೂ ಪಂದ್ಯಾವಳಿಯಲ್ಲಿ ಜರ್ಸಿ ಮತ್ತು 15 ವರ್ಷ ಒಳಪಟ್ಟ ಬಾಲಕ, ಬಾಲಕಿಯರ ವಿಜೇತರಿಗೆ ಟೇಬಲ್ ಟೆನ್ನಿಸ್ ಬ್ಯಾಟ್ ಮತ್ತು ಬಾಲ್ ನೀಡಲಾಗುವುದು ಎಂದು ರಚನ್ ಮಾಹಿತಿ ನೀಡಿದರು.ಪಂದ್ಯಾವಳಿಯಲ್ಲಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ 15 ವರ್ಷ ವಿಭಾಗ, ಹೈಸ್ಕೂಲ್ ಬಾಲಕ ಹಾಗೂ ಬಾಲಕಿಯರ 18 ವರ್ಷದ ವಿಭಾಗ, ಪದವಿ ಪೂರ್ವ ಹಾಗೂ ಪದವಿ ಕಾಲೇಜು 25 ವರ್ಷದ ವಿಭಾಗ, ಪುರುಷರ ಹಾಗೂ ಮಹಿಳೆಯರ 30 ವರ್ಷ ಮೇಲ್ಪಟ್ಟವರ ವಿಭಾಗ, 50 ವರ್ಷ ಮೇಲ್ಕಟ್ಟ ವಯಸ್ಕರ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.ಪಂದ್ಯಾವಳಿಯಲ್ಲಿ ಭಾಗವಹಿಸುವವರು ಪ್ರವೇಶ ಶುಲ್ಕ 15 ಹಾಗೂ 18 ವರ್ಷ ಬಾಲಕ- ಬಾಲಕಿಯರಿಗೆ ಸಿಂಗಲ್ಸ್ ವಿಭಾಗಕ್ಕೆ 100, 25 ವರ್ಷ ಬಾಲಕ-ಬಾಲಕಿಯರಿಗೆ ರು.200, ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗಕ್ಕೆ ರು. 500, ಡಬಲ್ಸ್ ಗೆ ರು.800, ಮಿಕ್ಸ್ ಡಬಲ್ಸ್ ಗೆ ರು.800, ವಯಸ್ಕರ ಸಿಂಗಲ್ಸ್ ವಿಭಾಗಕ್ಕೆ ರು.500, ಡಬಲ್ಸ್‌ಗೆ ರು.800 ಪಾವತಿಸಿ, ನ.16ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.ಹೆಚ್ಚಿನ ಮಾಹಿತಿಗೆ ಮಲ್ಲೇಂಗಡ ರಚನ್ ಪೊನ್ನಪ್ಪ 9483598761, 9110677030, 9980000438 ಇವರುಗಳನ್ನು ಸಂಪರ್ಕಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ಖಜಾಂಚಿ ಹೆಚ್.ಆರ್ ಪುನೀತ್, ಸದಸ್ಯರಾದ ವಿ.ವೈ.ಚೇತನ್, ಕೆ.ಸಿ.ಪ್ರಜ್ವಲ್ ಹಾಗೂ ಬಿ.ಎ.ಅನನ್ಯ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ