ಸಂಸದರಾಗಿ ತಂದೆ ಕನಸನ್ನು ಈಡೇರಿಸಿದ ಮಲ್ಲೇಶ್ ಬಾಬು: ಮಾಜಿ ಶಾಸಕ ಎಂ.ನಾರಾಯಣಸ್ವಾಮಿ

KannadaprabhaNewsNetwork |  
Published : Jun 07, 2024, 12:15 AM IST
6ಕೆಬಿಪಿಟಿ.1.ಕೋಲಾರ ಸಂಸದರಾಗಿ ಆಯ್ಕೆಯಾಗಿರುವ ಮಲ್ಲೇಶಬಾಬುರನ್ನು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಅವರ ಬೆಂಬಲಿಗರು ಸನ್ಮಾನಿಸಿದರು. | Kannada Prabha

ಸಾರಾಂಶ

ಮಲ್ಲೇಶಬಾಬುಗೆ ಸಂಸದರಾಗುವ ಯೋಗವಿತ್ತು, ಹೀಗಾಗಿ ಶಾಸಕರಾಗಬೇಕೆಂದು ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದರೂ ಫಲ ಸಿಗಲಿಲ್ಲ, ಮಲ್ಲೇಶಬಾಬು ರವರ ಒಳ್ಳೆತನಕ್ಕೆ ಕೋಲಾರ ಲೋಕಸಭೆ ಕ್ಷೇತ್ರದ ಮತದಾರರು ಬೆಂಬಲ ನೀಡಿ ರಾಜಕೀಯವಾಗಿ ಮೇಲೆತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಲ್ಲೇಶಬಾಬು ಸಂಸದರಾಗಿ ಆಯ್ಕೆಯಾಗುವ ಮೂಲಕ ಅವರ ತಂದೆ ದಿ.ಐಎಎಸ್ ಅಧಿಕಾರಿ ಸಿ.ಮುನಿಸ್ವಾಮಿ ಆಸೆಯನ್ನು ಈಡೇರಿಸಿದ್ದಾರೆಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹೇಳಿದರು.

ಕೋಲಾರ ಸಂಸದರಾಗಿ ಆಯ್ಕೆಯಾಗಿರುವ ಎಂ.ಮಲ್ಲೇಶಬಾಬುರನ್ನು ಅವರ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ತೆರಳಿ ಸತ್ಕರಿಸಿ, ಮಾತನಾಡಿದ ಅವರು, ಮಲ್ಲೇಶಬಾಬು ಅವರ ತಂದೆ ಮುನಿಸ್ವಾಮಿ ಕೋಲಾರ ಸಂಸದರಾಗಬೇಕೆಂದು ಕನಸು ಕಂಡಿದ್ದರು. ಆದರೆ ಅದು ಸಾಧ್ಯವಾಗದೇ ಅವರು ಅಕಾಲಿಕ ನಿಧರಾಗಿದ್ದರು. ಬಳಿಕ ಅವರ ಪತ್ನಿ ಮಂಗಮ್ಮ ಸ್ಪರ್ಧಿಸಿದ್ದರೂ ಫಲ ಸಿಗಲಿಲ್ಲ. ಈಗ ಮುನಿಸ್ವಾಮಿ ಮಗ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದೊಂದಿಗೆ ಗೆಲ್ಲುವ ಮೂಲಕ ತಂದೆ ಕನಸನ್ನು ಈಡೇರಿಸಿದ್ದಾರೆ.

ಮಲ್ಲೇಶಬಾಬುಗೆ ಸಂಸದರಾಗುವ ಯೋಗವಿತ್ತು, ಹೀಗಾಗಿ ಶಾಸಕರಾಗಬೇಕೆಂದು ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದರೂ ಫಲ ಸಿಗಲಿಲ್ಲ, ಮಲ್ಲೇಶಬಾಬು ರವರ ಒಳ್ಳೆತನಕ್ಕೆ ಕೋಲಾರ ಲೋಕಸಭೆ ಕ್ಷೇತ್ರದ ಮತದಾರರು ಬೆಂಬಲ ನೀಡಿ ರಾಜಕೀಯವಾಗಿ ಮೇಲೆತ್ತಿದ್ದಾರೆ. ಮತ ಎಣಿಕೆಯ ವೇಳೆ ೭೦ ಸಾವಿರ ಲೀಡ್‌ನಲ್ಲಿದ್ದ ಬಾಬು ಒಮ್ಮೆಲೆ ೨ ಸಾವಿರ ಅಂತರಕ್ಕೆ ಕುಸಿದಾಗ ಕಾರ್ಯಕರ್ತರಿಗೆ ಆತಂಕ ಉಂಟಾಯಿತು. ನಂತರ ಅಂತರ ಚೇರಿಕೆ ಕಂಡಾಗ ಮತ್ತೆ ಹೋದ ಜೀವ ಮರಳಿ ಬಂದಿತು. ಕಾಂಗ್ರೆಸ್ ವಶದಲ್ಲಿದ್ದ ಕೋಲಾರ ಎಂಪಿ ಕ್ಷೇತ್ರವನ್ನು ಕಳೆದ ಬಾರಿ ಬಿಜೆಪಿ ವಶ ಮಾಡಿಕೊಂಡು ಕಾಂಗ್ರೆಸ್ ಕೋಟೆಯನ್ನು ಛಿದ್ರ ಮಾಡಲಾಯಿತು.

ಈಗ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಮತ್ತೊಮ್ಮೆ ಕಾಂಗ್ರೆಸ್ ಪಾಲಾಗದಂತೆ ನೋಡಿಕೊಂಡಿದ್ದಾರೆ. ಇದರಿಂದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಲ್ಲೇಶಬಾಬು ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿಯಾಡಿದ್ದಾರೆ. ತಮ್ಮನ್ನು ಬೆಂಬಲಿಸಿದ ಮುಖಂಡರಾಗಲಿ, ಕಾರ್ಯಕರ್ತರನ್ನಾಗಲಿ ಕಡೆಗಣಿಸದೆ ಅವರನ್ನು ಜೊತೆ ಜೊತೆಗೆ ಕರೆದುಕೊಂಡು ಹೋಗುವ ಮೂಲಕ ಕ್ಷೇತ್ರವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೇ, ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಿ ಮಾದರಿ ಸಂಸದರಾಗಿ ಹೊರ ಹೊಮ್ಮಬೇಕೆಂದು ಹೇಳಿದರು.

ಜುಂಜನಹಳ್ಳಿ ನಾರಾಯಣಸ್ವಾಮಿ, ಡೈರಿ ವೆಂಕಟೇಶ್, ತಂಬಳ್ಳಿ ಮುನಿಯಪ್ಪ, ವೆಂಕಟೇಶಗೌಡ, ಹೊಳಲಿ ಪ್ರಕಾಶ್, ಮಧುಸೂದನ್ ಇದ್ದರು.

PREV

Recommended Stories

2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ
ದಸರಾಗೆ ಬಾನು : ಸುಪ್ರೀಂನಲ್ಲಿ ಮೇಲ್ಮನವಿ ವಜಾ