ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಕಲಬುರಗಿಯಲ್ಲಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿತು. ಇಲ್ಲಿನ ಸರ್ದಾರ್ ಪಟೇಲ್ ವೃತ್ತದಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಖರ್ಗೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಮೋದಿ ವಿರುದ್ಧ ಮಾತನಾಡಿರುವ ನಿಮ್ಮದು ನಾಲಿಗೇನೋ, ಬಚ್ಚಲು ಮನೆಯೋ ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಕಲಬುರಗಿಯಲ್ಲಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿತು. ಇಲ್ಲಿನ ಸರ್ದಾರ್ ಪಟೇಲ್ ವೃತ್ತದಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಖರ್ಗೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಮೋದಿ ವಿರುದ್ಧ ಮಾತನಾಡಿರುವ ನಿಮ್ಮದು ನಾಲಿಗೇನೋ, ಬಚ್ಚಲು ಮನೆಯೋ ಎಂದು ತೀವ್ರ ಆಕ್ರೋಶ ಹೊರಹಾಕಿದರು.ಪ್ರಧಾನಿ ಮೋದಿ ಸಾಧನೆ ಕಾಂಗ್ರೆಸ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಸಹಿಸಿಕೊಳ್ಳೊಕೆ ಆಗ್ತಿಲ್ಲ, ಹಾಗಾಗಿ ಮೋದಿ ಬಗ್ಗೆ ಮಾತ್ರವಲ್ಲದೇ ಅವರ ತಂದೆಯವರ ಬಗ್ಗೆಯೂ ಮಾತಾಡ್ತಿದಾರೆ. ಮಲ್ಲಿಕಾರ್ಜು ಖರ್ಗೆ ಅವರಿಂದ ಮೋದಿಗೂ ಅವಮಾನ, ರಾಜ್ಯಕ್ಕೂ ಅವಮಾನವಾಗಿದೆ. ಕೂಡಲೇ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ಮೋದಿ ಅವರಿಗೆ ಕ್ಷಮ ಕೇಳದಿದ್ದರೆ ದೇಶಾದ್ಯಂತ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಲಾಯಿತು. ಎಂಎಲ್ಸಿ ರವಿಕುಮಾರ್ ಬಿ., ಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಶಾಸಕರು, ಮುಖಂಡರು, ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರಿದ್ದರು.*ಕರ್ನಾಟಕಕ್ಕೆ ಖರ್ಗೆ ಅವಮಾನ?: ಎಂಎಲ್ಸಿಕಲಬುರಗಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಂಎಲ್ಸಿ ರವಿಕುಮಾರ್ ಮಾತನಾಡಿ, ಖರ್ಗೆ ಅವರು ನರೇಂದ್ರ ಮೋದಿ ಅವರ ಬಗ್ಗೆ ಅತ್ಯಂತ ಅವಹೇಳನವಾಗಿ ಮಾತಾಡಿದ್ದಾರೆ. ಅತ್ಯಂತ ಅವಮರ್ಯಾದೆಯಿಂದ ಮಾತಾಡಿದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೋಭೆ ತರೋದಿಲ್ಲ, ಇದು ನಮ್ಮ ರಾಜ್ಯದ ಸಂಸ್ಕೃತಿಗೆ ಅಪಮಾನ ಮಾಡಿದಂತೆ ಎಂದು ತಿವಿದರು.ಕರ್ನಾಟಕದ ಯಾರೇ ವ್ಯಕ್ತಿ ಈ ಥರ ನರೇಂದ್ರ ಮೋದಿ ಅವರ ಬಗ್ಗೆ ಇದುವರೆಗೆ ಮಾತಾಡಿಲ್ಲ. ನರೇಂದ್ರ ಮೋದಿಯವರಿಗೆ ಮತ್ತು ಅವರ ತಂದೆ- ತಾಯಿ ಬಗ್ಗೆ ಈ ತರ ಮಾತಾಡಿದ್ದು ನಮ್ಮ ಕರ್ನಾಟಕಕ್ಕೆ ಮಾಡಿರುವ ಅಪಮಾನ. ಬಸವಣ್ಣನವರ ಸಂಸ್ಕೃತಿಗೆ, ಕನಕದಾಸರ ಸಂಸ್ಕೃತಿಗೆ, ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಮಾಡಿರುವ ಘೋರ ಅಪಮಾನ ಎಂದು ರವಿಕುಮಾರ್ ಕಟುವಾಗಿ ಟೀಕಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರೇ, ನಿಮ್ಮಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವು ಇದನ್ನ ಮೊದಲನೇ ಬಾರಿ ಪ್ರಧಾನಿಯನ್ನು ಈ ರೀತಿ ಅವಹೇಳನ ಮಾಡಿದ್ದಲ್ಲ. ಹಿಂದೊಮ್ಮೆ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಅಂತ ಕರೆದಿದ್ದೀರಿ. ಹತ್ತು ತಲೆಯ ರಾವಣ ಅಂತ ಕರೆದ್ರಿ, ವಿಷಸರ್ಪ ಅಂತ ಕರೆದ್ರಿ. ನಾಚಿಕೆ ಆಗಲ್ವಾ ನಿಮಗೆ? ನೀವು ನಿಮ್ಮ ಮಗ ಮರಿ ಖರ್ಗೆ ಥರ ಮಾತಾಡ್ತಾ ಇದ್ದೀರಾ ಎಂದೂ ರವಿಕುಮಾರ್ ಮಾತಲ್ಲೇ ತಿವಿದರು.ವಿಧಾನಸೌಧದಲ್ಲಿ ಅರ್ಧ ಶತಮಾನ ಕಳೆದಿದ್ದೀರಿ. ಪಾರ್ಲಿಮೆಂಟಿನಲ್ಲಿ ಸ್ವಲ್ಪ ಮರ್ಯಾದೆ ಇಟ್ಕೊಂಡು ಮಾತಾಡಬೇಕು, ಘನತೆ ಗೌರವ ಇಟ್ಕೊಂಡು ವರ್ತಿಸಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದು ಈ ದೇಶದ ಜನರ ಮತದಿಂದ ಕಾಂಗ್ರೆಸಿನ ಭಿಕ್ಷೆ ಅಲ್ಲ ಅದು. ಮಲ್ಲಿಕಾರ್ಜುನ ಖರ್ಗೆ ಅವರೇ ಕೂಡಲೇ ರಾಜೀನಾಮೆ ಕೊಡಿ ಎಂದು ಪ್ರತಿಭಟನೆ ವೇಳೆ ಎನ್. ರವಿಕುಮಾರ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.