ಕನ್ನಡಪ್ರಭ ವಾರ್ತೆ ಮೈಸೂರುಜನಚೈತನ್ಯ ಫೌಂಡೇಷನ್ ವತಿಯಿಂದ ನಗರದ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಂಗೀತ ಲೋಕದ ಗಾನ ಕೋಗಿಲೆಗಳಾದ ಆಶಾ ಬೋಸ್ಲೆ ಹಾಗೂ ಲತಾ ಮಂಗೇಶ್ಕರ್ ಅವರ ನೆನಪಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಆರ್. ಲಕ್ಷ್ಮಣ್, ಬಿ.ಎಸ್. ವಿಜಯ್ ಆನಂದ್, ಜಾಯ್ಸ್ ವೈಶಾಖ್, ಡಾ.ಎ.ಎಸ್. ಪೂರ್ಣಿಮಾ, ಅಜರುದ್ದೀನ್, ಆನಂದ್ ಶೆಟ್ಟಿ, ಡಾ.ಸಿ. ಸುಭಾಷ್, ಕವಿತಾ ಕಾಮತ್, ಶಾಂತಕುಮಾರಿ, ಬಸವರಾಜು ಎಸ್. ಬೆಳ್ಳಿಕಟ್ಟಿಗೆ, ಸೌಮ್ಯಾ ಪ್ರಕಾಶ್, ಡಾ.ಎಚ್.ಎಸ್. ಶಿವಕುಮಾರ್, ಶಾಂತಿ ಶಿವಕುಮಾರ್, ಪರಮೇಶ್, ಪಾವನಾ ಪರಮೇಶ್, ಓಂಪ್ರಕಾಶ್, ಬಿ.ಆರ್. ವಿಜಯಶ್ರೀ, ಮೀರಾ ಶಂಭು, ರೇಖಾ ಗೌತಮ್ ಅವರು ಹಿಂದಿ ಹಾಗೂ ಇನ್ನಿತರ ಭಾಷೆಗಳ ಸುಮಾರು 45 ಜನಪ್ರಿಯ ಗೀತೆಗಳನ್ನು ಕರೋಕೆ ಮೂಲಕ ಪ್ರಸ್ತುತಪಡಿಸಿ ಸಭಿಕರಿಗೆ ಹಳೆಯ ಕಾಲದ ಹಾಡುಗಳ ರಸದೌತಣ ಬಡಿಸಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರಿಗೆ ಕನ್ನಡ ಸಂಸ್ಕೃತಿ ಚೈತನ್ಯ ಹಾಗೂ ಪುಷ್ಪಾ ಅವರಿಗೆ ಗಾನಚೈತನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ.ಎ,ಎಸ್. ಪೂರ್ಣಿಮಾ, ರಾಗ ಕ್ರಿಯೇಟರ್ಸ್ ಸಂಸ್ಥಾಪಕ ಅಧ್ಯಕ್ಷ ಆನಂದ್ ಶೆಟ್ಟಿ, ಹಿರಿಯ ಕೀಬೋರ್ಡ್ ವಾದಕ ಟಿ.ಎಸ್. ರವಿಶಂಕರ್, ಲಕ್ಷ್ಮೀನಾರಾಯಣ್ ಮುಖ್ಯ ಅತಿಥಿಗಳಾಗಿದ್ದರು.