ಮಲ್ಪೆ ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

KannadaprabhaNewsNetwork | Published : Mar 20, 2024 1:15 AM

ಸಾರಾಂಶ

ದೇವಸ್ಥಾನ ಮುಂಭಾಗ ಸೇರಿದಂತೆ ಮೂರು ಕಡೆ ತೋರಣ ಮುಹೂರ್ತ ನಡೆಸಿ, ಉಗ್ರಾಣ ಮುಹೂರ್ತ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ಅರಣಿ ಮಥನ, ಅಗ್ನಿ ಜನನ, ಬ್ರಹೃಕೂರ್ಚ ಹೋಮ, ಕಂಕಣ ಬಂಧ, ಆದ್ಯ ಗಣಯಾಗ, ಸಂಜೀವಿನಿ ಮೃತ್ಯುಂಜಯ ಹೋಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಲ್ಪೆಇಲ್ಲಿನ ವಡಭಾಂಡೇಶ್ವರದ ಶ್ರೀ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಮಾ.19ರಿಂದ 29ರ ವರೆಗೆ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ದೇಗುಲ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಣ ಮುಹೂರ್ತ ಮೊದಲಾದವರು ಧಾರ್ಮಿಕ ವಿಧಿವಿಧಾನಗಳು ನಡೆಯಿತು.ಬೆಳಗ್ಗೆ 7.30ರ ವೇಳೆ ದೇಗುಲದ ಮುಂಭಾಗದಲ್ಲಿ ದೇವಸ್ಥಾನ ಮತ್ತು ಸಮಿತಿಯ ವತಿಯಿಂದ ಋತ್ವಿಜರನ್ನು ಸ್ವಾಗತಿಸಲಾಯಿತು. ಬಳಿಕ ಋತ್ವಿಗ್ವರಣೆ, ಶಿಲ್ಪಿ ಮರ್ಯಾದೆ, ಗೇಹ ಪ್ರತಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆಯನ್ನು ನಡೆಸಲಾಯಿತು. ದೇವಸ್ಥಾನ ಮುಂಭಾಗ ಸೇರಿದಂತೆ ಮೂರು ಕಡೆ ತೋರಣ ಮುಹೂರ್ತ ನಡೆಸಿ, ಉಗ್ರಾಣ ಮುಹೂರ್ತ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ಅರಣಿ ಮಥನ, ಅಗ್ನಿ ಜನನ, ಬ್ರಹೃಕೂರ್ಚ ಹೋಮ, ಕಂಕಣ ಬಂಧ, ಆದ್ಯ ಗಣಯಾಗ, ಸಂಜೀವಿನಿ ಮೃತ್ಯುಂಜಯ ಹೋಮ, ವೇದತ್ರಯ ಪಾರಾಯಣ, ಭಾಗವತ ಪಾರಾಯಣ ನಡೆಯಿತು.ದೇವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರ್, ಅಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್, ಪವಿತ್ರಪಾಣಿ ಶಂಕರನಾರಾಯಣ ಐತಾಳ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಗುರಿಕಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಜರಾಯಿ ಸಚಿವರಿಗೆ ಬ್ರಹ್ಮಕಲಶೋತ್ಸವ ಆಮಂತ್ರಣ

ರಾಜ್ಯದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಇಲ್ಲಿನ ಶ್ರೀ ವಡಭಾಂಡ ಬಲರಾಮ ದೇವಳದ ಜೀರ್ಣೋದ್ಧಾರ ಸಮಿತಿ ಭೇಟಿಯಾಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ನೀಡಿ, ಮನವಿ ಸಲ್ಲಿಸಲಾಯಿತು.ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಧನಾತ್ಮಕ ಬೆಂಬಲದ ಭರವಸೆ ನೀಡಿದರು. ಈ ಸಂದರ್ಭ ಸಮಿತಿ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರ್, ಶೀರೂರು ಮಠದ ದಿವಾನ ಉದಯ ಸರಳತ್ತಾಯ, ಉದ್ಯಮಿ ರಾಮಚಂದ್ರ ಉಪಾಧ್ಯ, ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದರು.

Share this article