ಮಾಲೂರು- ಕೋಲಾರ ರಸ್ತೆ ದುರಸ್ತಿಗೆ ಒತ್ತಾಯ

KannadaprabhaNewsNetwork |  
Published : May 01, 2024, 01:19 AM IST
ಶಿರ್ಷಿಕೆ-೩೦ಕೆ.ಎಂ.ಎಲ್.ಅರ್.೧-ಮಾಲೂರಿನ ಲೋಕೋಪಯೋಗಿ ಇಲಾಖೆ ಅಭಿಯಂತರರನ್ನು ಭೇಟಿ ಮಾಡಿದ ನಮ್ಮ ಕರ್ನಾಟಕ ಸೇನೆ ಕರ‍್ಯಕರ್ತರು ಕೋಲಾರ ರಸ್ತೆಯ ದೂಡ್ಡಕಡತೂರು ಗ್ರಾಮದಿಂದ ಅಗ್ರಹಾರ ಹೊಸಹಳ್ಳಿ ಗ್ರಾಮದವರೆಗಿನ ಹಾಳಾಗಿರುವ ರಸ್ತೆಗೆ ಶೀಘ್ರವಾಗಿ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಬೇಕೆಂದು ಅಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಕೋಲಾದಿಂದ ತಾಲೂಕಿನ ಕಸಬಾ ಹೋಬಳಿಯ ದೊಡ್ಡಕಡತೂರು ಗೇಟ್ ನಿಂದ ಹೊಸಹಳ್ಳಿ ಅಗ್ರಹಾರ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ವಾಹನಗಳ ಸಂಚಾರ ದುಸ್ತರವಾಗಿದೆ

ಕನ್ನಡಪ್ರಭ ವಾರ್ತೆ ಮಾಲೂರು

ಸಂಪೂರ್ಣವಾಗಿ ಹಾಳಾಗಿರುವ ಮಾಲೂರು- ಕೋಲಾರ ರಸ್ತೆಯಲ್ಲಿ ನಿತ್ಯ ಅಪಘಾತ ನಡೆಯುತ್ತಿದ್ದು, ಕೂಡಲೇ ರಸ್ತೆ ದುರಸ್ತಿ ಮಾಡಿಸುವಂತೆ ಆಗ್ರಹಿಸಿ ಇಲ್ಲಿನ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಲೋಕೋಪಯೋಗಿ ಅಭಿಯಂತರರಿಗೆ ಮನವಿ ಸಲ್ಲಿಸಿ ಅಗ್ರಹಿಸಿದರು.ಸಂಘಟನೆಯ ಅಧ್ಯಕ್ಷ ಎಸ್.ಎಂ. ರಾಜು ಮಾತನಾಡಿ, ಕೋಲಾದಿಂದ ತಾಲೂಕಿನ ಕಸಬಾ ಹೋಬಳಿಯ ದೊಡ್ಡಕಡತೂರು ಗೇಟ್ ನಿಂದ ಹೊಸಹಳ್ಳಿ ಅಗ್ರಹಾರ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ವಾಹನಗಳ ಸಂಚಾರ ದುಸ್ತರವಾಗಿದೆ. ಪ್ರತಿ ನಿತ್ಯ ಇಲ್ಲಿಗೆ ಸಮೀಪ ಇರುವ ನರಸಾಪುರ ಕೈಗಾರಿಕಾ ಪ್ರಾಂಗಣಕ್ಕೆ ನೂರಾರು ದ್ವಿಚಕ್ರ ವಾಹನಗಳು, ಖಾಸಗಿ ಬಸ್‌ಗಳು ಸಂಚರಿಸುತ್ತವೆ. ರಸ್ತೆ ದುಸ್ಥಿತಿಯಿಂದಾಗಿ ಪ್ರತಿದಿನ ಅಪಘಾತಗಳು ಸಾಮಾನ್ಯವಾಗಿವೆ ಎಂದು ಆರೋಪಿಸಿದರು.

ದುರಸ್ತಿ ಮಾಡಿಸಲು ಶಾಸಕರಿಗೆ ಒತ್ತಾಯ

ಇದೇ ರೀತಿ ತರ‍್ನಹಳ್ಳಿ ರಸ್ತೆ ಸಹ ಹಾಳಾಗಿದ್ದು, ಪಟ್ಟಣಕ್ಕೆ ಬರುವುದಕ್ಕೆ ಕೈನಲ್ಲಿ ಜೀವ ಹಿಡಿದುಕೊಂಡು ಸಾವರರು ಬರಬೇಕಾಗಿದೆ. ಈಗ ಚುನಾವಣೆ ಮುಗಿದಿದ್ದು, ಶಾಸಕರು ಇಲ್ಲಿನ ಸಮಸ್ಯೆಯನ್ನು ಚುನಾವಣೆ ಆಯೋಗಕ್ಕೆ ತಿಳಿಸಿ ವಿಶೇಷ ಅನುಮತಿ ಪಡೆದು ಈ ಕೊಡಲೇ ಕಾಮಗಾರಿ ಪ್ರಾರಂಭಿಸಲಿ. ಈಗ ತಾಲೂಕಿನ ವಿವಿಧೆಡೆ ಜಾತ್ರೆ, ಕರಗ ಮಹೋತ್ಸವಗಳು ನಡೆಯಲಿದ್ದು, ಹಗಲು–ರಾತ್ರಿ ಜನರ ಸಂಚರಿಸುತ್ತಾರೆ. ವಾಹನ ಸಾವರರ ರಕ್ಷಣೆಗಾಗಿ ಈ ಕೊಡಲೇ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಬೇಕು ಎಂದು ಅಗ್ರಹಿಸಿದರು.

ಈ ಸಂದರ್ಭದಲ್ಲಿ ಸಿ.ಚೆನ್ನಕೃಷ್ಣ, ಚಾಕನಹಳ್ಳಿ ನಾಗರಾಜ್,ರಾಜ್ಯ ಆಟೋ ಘಟಕದ ಉಪಾಧ್ಯಕ್ಷ ಆಟೋ ಶ್ರೀನಿವಾಸ್,ಜಿಲ್ಲಾ ಯುವ ಘಟಕ ಅಧ್ಯಕ್ಷ ಅಂಜಿ, ರಾಜು ಉಪಾಧ್ಯಕ್ಷ, ಮಂಗಾಪುರ ಸ್ವಾಮಿ, ಡಿ.ಎನ್.ಗೋಪಾಲ್, ಚೆನ್ನಕೇಶವ, ಕೆ.ಎನ್.ಜಗದೀಶ್, ಮಾದನಹಟ್ಟಿ ಆಶೋಕ್, ಕೊಡೂರು ಮಂಜು ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ