ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಹಾವೇರಿ ಜಿಲ್ಲೆಯ ಹಂದಿಗನೂರ ದೇಶಗತಿ ಮನೆತನದ ದಿ. ಆರ್.ಬಿ. ಮಾಮಲೇದೇಸಾಯಿ ದತ್ತಿಯಲ್ಲಿ ಡಾ. ಮಲ್ಲಿಕಾರ್ಜುನ ಪಾಟೀಲ ಬರೆದ ಆರ್.ಬಿ. ಮಾಮಲೇದೇಸಾಯಿ ಜೀವನ ಸಾಧನೆ ಕೃತಿ ಲೋಕಾರ್ಪಣೆ ಮಾಡಿದ ಅವರು, ಅವರ ಜೊತೆ ಭಾವನಾತ್ಮಕ ಸಂಬಂಧವಿತ್ತು. ಅವರು ರೈತರ ಬಗ್ಗೆ ಅಪಾರ ಕಳಕಳಿಯುಳ್ಳವರು. ಅಂದಿನ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರು ಮಧ್ಯವರ್ತಿಗಳ ಹಾವಳಿಯಿಂದಲ್ಲದೇ ವಿವಿಧ ರೀತಿಯಲ್ಲಿ ಶೋಷಣೆಗೆ ಒಳಪಡುವುದನ್ನು ನಿಯಂತ್ರಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭಿಸಲು ಶ್ರಮವಹಿಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದರು.
ಸರ್ಕಾರ ರೈತರ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಲು ಸಿಪಿಸಿ ಕಾನೂನು ಮೂಲಕ ತಿದ್ದುಪಡಿ ತಂದಿದೆ. ಆದರೆ, ರೈತರ ಕೂಗು ಇಂದು ವಿಧಾನಸಭೆಗೆ ಮುಟ್ಟದಿರುವುದು ವಿಪರ್ಯಾಸ ಎಂದು ಹೇಳಿದರು.ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಮಾಮಲೇದೇಸಾಯಿ ಅವರ 14 ಜನ ಮೊಮಕ್ಕಳಲ್ಲಿ ನಾನೂ ಒಬ್ಬ. ಅಜ್ಜನವರೇ ಸರಳ ಬದುಕಿನ ಪಾಠ ಹೇಳಿ ನಮಗೆಲ್ಲ ಸಂಸ್ಕಾರದ ನೀಡಿದ್ದರೆಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ಬಿ. ದೇಸಾಯಿ, ಕ್ಷೇತ್ರ ಯಾವುದಾದರೂ ಇರಲಿ ಮೊದಲು ಅಲ್ಲಿ ಪ್ರಮಾಣಿಕತೆ, ಕರ್ತವ್ಯ ನಿಷ್ಠೆ ಮುಖ್ಯ. ನಮ್ಮ ಮನೆತನದ ಹಿರಿಯರು ತತ್ವ ನಿಷ್ಠ ಕಾರ್ಯತತ್ಪರ, ನ್ಯಾಯ ನಿಷ್ಠುರಿಗಳಾಗಿದ್ದರು. ಸತ್ಯ ಶುದ್ಧ ಕಾಯಕ ಜೀವಿಗಳಾಗಿದ್ದರು ಎಂದರು.ಮಹೇಶ ಮಾಮಲೇದೇಸಾಯಿ ದತ್ತಿ ಆಶಯ ಕುರಿತು ಮಾತನಾಡಿದರು. ಹಂದಿಗನೂರ ದೇಶಗತಿ ಅರವಿಂದ ಮಾಮಲೇದೇಸಾಯಿ, ಯಶೋಧಾಬಾಯಿ ದೇಸಾಯಿ, ಜಿ.ಕೆ. ವೆಂಕಟೇಶ, ಡಾ. ತೇಜಸ್ವಿ ಕಟ್ಟಿಮನಿ, ಶಂಕರ ಹಲಗತ್ತಿ, ಡಾ. ಮಲ್ಲಿಕಾರ್ಜುನ ಪಾಟೀಲ ಇದ್ದರು. ಶಶಿಧರ ತೋಡಕರ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾನತಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.