ಎಟಿಎಂನಲ್ಲಿ ವೃದ್ಧೆಗೆ ಏಮಾರಿಸಿದ್ದವನ ಬಂಧನ

KannadaprabhaNewsNetwork |  
Published : Aug 11, 2025, 12:30 AM IST
10ಎಚ್ಎಸ್ಎನ್14 : ಇತ್ತೀಚೆಗೆ ಬೇಲೂರು  ಎಟಿಎಂ ನಲ್ಲಿ ವೃದ್ದ ಮಹಿಳೆಯ ಹಣವನ್ನು ‌ಬಿಡಿಸಿಕೊಂಡು ಪರಾರಿಯಾಗಿದ್ದ ಚಾಲಾಕಿ ಕಳ್ಳನನ್ನು   ಪೊಲೀಸರು     ಬಂದಿಸಿ  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. | Kannada Prabha

ಸಾರಾಂಶ

ಗೋಣಿಬೀಡು ಹೋಬಳಿಯ ಉದಸೆ ಗ್ರಾಮದ ಪವಿತ್ರ ಎಂಬುವವರು ತಮ್ಮ ಮೊಮ್ಮಗನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ನಂತರ ಔಷಧಿಗಾಗಿ ಹತ್ತಿರದಲ್ಲಿದ್ದ ಎಸ್‌ಬಿಐ ಎಟಿಎಂನಲ್ಲಿ ಹಣ ಬಿಡಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಎಟಿಎಂ ಹಣ ಬಾರದ ಹಿನ್ನಲೆ ಶಿರಾ ಗ್ರಾಮದ ಅರುಣ್ ಎನ್ನುವ ವ್ಯಕ್ತಿ ತನ್ನ ಕೈಚಳಕ ತೋರಿ ಹಣ ಬಿಡಿಸಿ ಕೊಳ್ಳುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ ಅವರ ಬಳಿ ಇದ್ದ ಎಟಿಎಂ ಬದಲಿಸಿ ಪಿನ್ ಕೋಡ್ ತಿಳಿದುಕೊಂಡಿದ್ದಾನೆ. ಹಾಸನದ ಕರ್ನಾಟಕದ ಬ್ಯಾಂಕ್ ಎಟಿಎಂನಲ್ಲಿ ಸುಮಾರು ೧೮ ಸಾವಿರ ರು. ಗಳನ್ನು ಬಿಡಿಸಿಕೊಂಡಿದ್ದಾನೆ. ನಂತರ ಪವಿತ್ರ ಮೊಬೈಲಿಗೆ ಹಣ ಡ್ರಾ ಆಗಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಇತ್ತೀಚೆಗೆ ಪಟ್ಟಣದ ಎಸ್‌ಬಿಐ ಎಟಿಎಂನಲ್ಲಿ ವೃದ್ದ ಮಹಿಳೆಯ ಹಣವನ್ನು ‌ಎಗರಿಸಿ ಪರಾರಿಯಾಗಿದ್ದ ಚಾಲಾಕಿ ಕಳ್ಳನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಕಳೆದ ವಾರ ಗೋಣಿಬೀಡು ಹೋಬಳಿಯ ಉದಸೆ ಗ್ರಾಮದ ಪವಿತ್ರ ಎಂಬುವವರು ತಮ್ಮ ಮೊಮ್ಮಗನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ನಂತರ ಔಷಧಿಗಾಗಿ ಹತ್ತಿರದಲ್ಲಿದ್ದ ಎಸ್‌ಬಿಐ ಎಟಿಎಂನಲ್ಲಿ ಹಣ ಬಿಡಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಎಟಿಎಂ ಹಣ ಬಾರದ ಹಿನ್ನಲೆ ಶಿರಾ ಗ್ರಾಮದ ಅರುಣ್ ಎನ್ನುವ ವ್ಯಕ್ತಿ ತನ್ನ ಕೈಚಳಕ ತೋರಿ ಹಣ ಬಿಡಿಸಿ ಕೊಳ್ಳುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ ಅವರ ಬಳಿ ಇದ್ದ ಎಟಿಎಂ ಬದಲಿಸಿ ಪಿನ್ ಕೋಡ್ ತಿಳಿದುಕೊಂಡಿದ್ದಾನೆ. ಹಾಸನದ ಕರ್ನಾಟಕದ ಬ್ಯಾಂಕ್ ಎಟಿಎಂನಲ್ಲಿ ಸುಮಾರು ೧೮ ಸಾವಿರ ರು. ಗಳನ್ನು ಬಿಡಿಸಿಕೊಂಡಿದ್ದಾನೆ. ನಂತರ ಪವಿತ್ರ ಮೊಬೈಲಿಗೆ ಹಣ ಡ್ರಾ ಆಗಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಸಿಪಿಐ ರೇವಣ್ಣ ಹಾಗೂ ಪಿಎಸ್ಐ ಪಾಟೀಲ್ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಿ ಸಿಸಿ ಕ್ಯಾಮರಾ ಹಾಗೂ ಆತನ ಚಲನವಲನ ಬಗ್ಗೆ ಮಾಹಿತಿ ತಿಳಿದುಕೊಂಡು ಬಲೆ ಬೀಸಿದ್ದರು. ಒಂದು ವಾರಕ್ಕೆ ಸರಿಯಾಗಿ ಮತ್ತೆ ಎಟಿಎಂ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇವನನ್ನು ತಕ್ಷಣವೇ ಸ್ಥಳದಲ್ಲಿ ಇದ್ದ ಪಿಎಸ್ಐ ಎಸ್ ಜಿ ಪಾಟೀಲ್ ಹಾಗು ಸಿಬ್ಬಂದಿ ಹಿಡಿದು ತೀವ್ರ ವಿಚಾರಣೆ ಪಡಿಸಿದಾಗ ಎಟಿಎಂ ಕಾರ್ಡ್ ಕದ್ದು ಹಣ ಬಿಡಿಸಿರುವುದು ತಿಳಿದುಬಂದಿದೆ.ಕಾರ್ಯಾಚರಣೆಯಲ್ಲಿ ಸಿಬ್ಬಂದಿಯಾದ ಚೇತನ್, ಉಮೇಶ್, ಅಣ್ಣಪ್ಪ, ರಮೇಶ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!