ಮನಗಳ್ಳನ ಬಂಧನ: ₹17ಲಕ್ಷ ಮೌಲ್ಯದ ಚಿನ್ನಾಭರಣ ವಶ

KannadaprabhaNewsNetwork |  
Published : Aug 15, 2025, 01:00 AM IST
₹17,50,000 ರು. ಮೌಲ್ಯದತೂಕದ ಚಿನ್ನಾಭರಣ ವಶ | Kannada Prabha

ಸಾರಾಂಶ

ಕಡೂರು, ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿ ಆತನಿಂದ ಸುಮಾರು ₹17,50,000 ರು. ಮೌಲ್ಯದ 195.9 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 195.9 ಗ್ರಾಂ ತೂಕದ ಆಭರಣ । ಶೀಘ್ರ ಪತ್ತೆ ಹಚ್ಚಿದ ತಂಡಕ್ಕೆ ಬಹುಮಾನ

ಕನ್ನಡಪ್ರಭ ವಾರ್ತೆ, ಕಡೂರು

ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿ ಆತನಿಂದ ಸುಮಾರು ₹17,50,000 ರು. ಮೌಲ್ಯದ 195.9 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಡೂರಿನ ತ್ಯಾಗರಾಜನಗರದ ಕಾರ್ ಪೆಂಟರ್ ವಿರೂಪಾಕ್ಷ ಕೆ.ಎನ್ ಬಿನ್ ನಾಗರಾಜಾಚಾರ್ ಬಂಧಿತ ಆರೋಪಿ.

ಆ.10 ರಂದು ಪಟ್ಟಣದ ಲಕ್ಷ್ಮೀಶ ನಗರದ ನಿವಾಸಿ ಪ್ರಮತೇಶ್ ಮನೆಯಲ್ಲಿ ಚಿನ್ನಾಭರಣಗಳನ್ನು ಕಳ್ಳತನ ನಡೆದಿರುವ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೇಧಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಿಕ್ರಂ ಅಮಟೆ, ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ.ರಫೀಕ್ ನೇತೃತ್ವದಲ್ಲಿ ರಚಿಸಿದ ತಂಡ ತಾಂತ್ರಿಕ ಹಾಗೂ ವಿವಿಧ ಆಯಾಮಾಗಳಿಂದ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ಈತನ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಯಿಂದ ಪ್ರಕರಣಕ್ಕೆ ಸಂಭಂದಿಸಿದಂತೆ ಒಟ್ಟು 195.9 ಗ್ರಾಂ ತೂಕವುಳ್ಳ ಅಂದಾಜು ₹17,50,000 ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿ ಕರ್ತವ್ಯ ನಿರ್ವಹಿಸಿದ ಅಪರಾಧ ಪತ್ತೆ ಕಾರ್ಯ ತಂಡದಲ್ಲಿದ್ದ ತಂಡದಲ್ಲಿ ಪಿಎಸ್ಐಗಳಾದ ಸರ್ಜಿತ್ ಕುಮಾರ್ ಜಿ.ಆರ್, ಧನಂಜಯ ಡಿ.ಎಚ್. ಲೀಲಾವತಿ, ಸಿಬ್ಬಂದಿ ಮಧುಕುಮಾರ್, ಹರೀಶ್ ಬಿ.ಸಿ, ಸ್ವಾಮಿ ಎಓ, ಮಹಮ್ಮದ್ ರಿಯಾಜ್, ಧನಪಾಲನಾಯ್ಕ, ಪರಮೇಶ್ವರನಾಯ್ಕ ಜಿ.ಎಸ್., ವಸಂತ್, ರಾಜು ಜಿ.ಕೆ. ನಜೀರ್, ಸಿದ್ದಾನಾಯ್ಕ್, ಈಶ್ವರಪ್ಪ, ಅನೂಪ್ , ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಅಬ್ದುಲ್ ರಬ್ಬಾನಿ, ನಯಾಜ್ ಅಂಜುಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.

14ಕೆಕೆಡಿಯು1, 1ಎ.

ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕಡೂರು ಪೋಲೀಸರು ಬಂಧಿಸಿರುವುದು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ