ಹೊಸಕೋಟೆ: ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಸಮೀಕ್ಷೆ ನಡೆಸಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು ಅದನ್ನು ಸರ್ಕಾರ ಸರಿಪಡಿಸಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಒತ್ತಾಯಿಸಿದರು.
ಈಗಾಗಲೇ ಮಾದಿಗ ಸಮುದಾಯದವರು ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಹೆಸರಿನಡಿ ಸಮೀಕ್ಷೆಗೆ ಒಳಪಡದೆ ''''''''ಮಾದಿಗ'''''''' ಎಂದೇ ಬರಸಬೇಕು ಎಂಬ ತೀರ್ಮಾನ ತೆಗೆದುಕೊಂಡಿದ್ದರು. ಆ ಪ್ರಕಾರ ಅವರು ''''''''ಮಾದಿಗೆ'''''''' ಎಂದೇ ಬರೆಸಿಕೊಂಡಿದ್ದಾರೆ. ಆ ಕಾರಣದಿಂದಾಗಿ ಬಲಗೈ ಸಮುದಾಯಗಳು ಮಾತ್ರ ಆದಿ ಅಂದ್ರೆ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಹೆಸರಿನಲ್ಲಿ ಜಾತಿ ಸಮೀಕ್ಷೆ ಸಮಯದಲ್ಲಿ ಜಾತಿ ನೋಂದಾಯಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಪ್ರವರ್ಗ-ಸಿ ಮತ್ತು ಪ್ರವರ್ಗ-ಇಗಳನ್ನು ಬಲಗೈ ಜಾತಿಯ ಗುಂಪೆಂದೇ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಆದಿ ಆಂಧ್ರ ಜಾತಿಯ ಗುಂಪಿನಡಿ ಮಾದಿಗ ಮತ್ತು ಮಾಲ ಸಮುದಾಯಗಳು ಸೇರ್ಪಡೆಯಾಗಿವೆ. ಆದಿ ದ್ರಾವಿಡ ಜಾತಿ ಅಡಿಯಲ್ಲಿ 7 ಜಾತಿಗಳಿವೆ. ಮಾದಿಗ, ಹೊಲೆಯ, ಚಲವಾದಿ, ಮಾಲಾ, ಪರಯ್ಯ, ಪಂಚಮ, ಮೊಗೇರ್, ಆದಿ ಕರ್ನಾಟಕ ಜಾತಿ ಗುಂಪಿನಲ್ಲಿ ಕನ್ನಡ ಮಾತನಾಡುವ ಹೊಲೆಯ, ಮಾದಿಗರು ಹಾಗೂ ತೆಲುಗು ಮೂಲದ ಮಾಲ ಜಾತಿಗಳು ಸೇರ್ಪಡೆಯಾಗಿವೆ. ಈ ಎಲ್ಲಾ ಜಾತಿಗಳನ್ನು ಬೇರ್ಪಡಿಸಿ 89 ಮೂಲ ಜಾತಿಗಳ ಅಡಿಯಲ್ಲಿ ಸಮೀಕ್ಷೆ ನಡೆಸಿ ವರ್ಗೀಕರಣ ಮಾಡಿದರೆ ಮಾತ್ರ ಅದು ಒಳಮೀಸಲು ಆಗಿರುತ್ತದೆ.ಈ ಕಾರಣಕ್ಕಾಗಿಯೇ ಸರ್ಕಾರ ಮತ್ತು ಒಳ ಮೀಸಲಾತಿ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಸರ್ಕಾರ ಅನುಕೂಲ ಸಿಂಧು ರಾಜಕೀಯಕ್ಕಾಗಿ ಮನಸ್ಸಿಗೆ ಬಂದಂತೆ 101 ಜಾತಿಗಳ ಸಮೀಕ್ಷೆ ಮಾಡಿ, ಅದರ ಆಧಾರದ ಮೇಲೆ ಆಯೋಗವು ಒಳ ಮೀಸಲಾಗಿ ವರ್ಗೀಕರಣದ ಶಿಫಾರಸ್ಸು ಮಾಡಿರುತ್ತದೆ. ಆದ್ದರಿಂದ ಉಪ ವರ್ಗೀಕರಣ ಮಾಡುವ ಪ್ರಕ್ರಿಯೆಯನ್ನು ತಡೆ ಹಿಡಿಯಲು ಕೋರಲಾಗಿದೆ. ಆದಿ ಆಂಧ್ರಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳನ್ನು ಕೈ ಬಿಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಲಾಗಿದೆ. ಇಲ್ಲವಾದರೆ ಬಲಗೈ ಸಮುದಾಯ ಉಗ್ರ ಹೋರಾಟ ಮಾಡದೆ ಬೇರೆ ಮಾರ್ಗವಿಲ್ಲ ಎಂದರು.
ಫೋಟೋ: 14 ಹೆಚ್‌ಎಸ್‌ಕೆ 1ದಸಸಂಕ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ.