ವಾರ್ಷಿಕೋತ್ಸವ । ಶಾರದಾ ಸ್ಕೂಲ್‌ನ ವೈಭವ, ದಶಮಾನೋತ್ಸವ ಸಂಭ್ರಮ
ಇಂದಿನ ದಿನಗಳಲ್ಲಿ ಮನುಷ್ಯನಿಗೆ ಅಕ್ಷರ ಜ್ಞಾನ ಇರಲೇಬೇಕು. ಇದ್ದರೆ ಮನುಷ್ಯನಿಗೆ ಪ್ರಪಂಚದಲ್ಲಿ ಜೀವನ ನಡೆಸಲು ಸಾಧ್ಯ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.
ಹಳೇಬೀಡಿನ ಶಾರದಾ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಂಧರ್ಭದಲ್ಲಿ ಮಾತನಾಡಿ, ಇಂದು ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳನ್ನು ನಡೆಸಲು ಎಷ್ಟು ಕಷ್ಟಕರವಾಗಿರುತ್ತದೆ, ಇಲ್ಲಿಯ ಜನರು ರೈತಾಪಿ ಕುಟುಂಬ ವರ್ಗದವರು ಹೆಚ್ಚಾಗಿದ್ದಾರೆ. ಅವರಿಗೆ ತಮ್ಮ ಮಕ್ಕಳನ್ನು ಓದಿಸಲು ಕಷ್ಟಕರವಾಗಿರುತ್ತದೆ. ಅದರಲ್ಲೂ ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಂಡು ನನಗೆ ಸಂತೋಷವಾಗಿದೆ. ಇದರ ಹಿಂದೆ ಈ ಶಾಲೆಯ ಮುಖ್ಯಶಿಕ್ಷಕಿ ನಂದಿನಿ ಮತ್ತು ಅಧ್ಯಕ್ಷ ಯತೀಶ್ ರವರ ಎಷ್ಟು ಶ್ರಮ ಇದೆ ಎಂಬುದು ಅರ್ಥವಾಗುತ್ತದೆ. ಯಾವುದೇ ಶಾಲೆ ನಡೆಸಲು ಮೂಲ ಫೌಂಡೇಶನ್ ಅಂದರೆ ಶಿಕ್ಷಕ ವರ್ಗದವರು ಎಂದು ಹೇಳಿದರು.ಡಾ.ಹನುಮಂತ ಶೆಟ್ಟಿ ಅವರಿಗೆ ಶಾಲೆಯ ಪರವಾಗಿ ಸನ್ಮಾನವನ್ನು ಮಾಡಿದರು. ಅವರು ಮಾತನಾಡಿ, ‘ನಾನು ಈ ಊರಿನಲ್ಲಿ ೫೦ ವರ್ಷಗಳ ಕಾಲ ವೈದ್ಯ ವೃತಿಯನ್ನು ಸಲ್ಲಿಸಿದ್ದೇನೆ. ಇಂದಿನ ದಿನಗಳಲ್ಲಿ ರೋಗಗಳು ಹೆಚ್ಚಿನ ರೀತಿಯಲ್ಲಿ ಬರುತ್ತಿವೆ. ಮಕ್ಕಳು ತಮ್ಮ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮನೆಯಲ್ಲಿ ಬಿಸಿ ನೀರನ್ನು ಕುಡಿಯಬೇಕು, ಮಾಸ್ಕ್‌ನ್ನು ಉಪಯೋಗಿಸಿ. ಮಕ್ಕಳಿಗೆ ಜ್ವರ, ಶೀತ ಬಂದರೆ ಎರಡು ದಿನ ಶಾಲೆಗೆ ಮಕ್ಕಳನ್ನು ಕಳುಹಿಸಲೇಬೇಡಿ. ಏಕೆಂದರೆ ಒಂದು ಮಕ್ಕಳಿಂದ ಇನ್ನೊಂದು ಮಕ್ಕಳಿಗೆ ಹಾರಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ’ ಎಂದು ತಿಳಿಸಿದರು.
ಶಾರದಾ ವಿದ್ಯಾ ಸಂಸ್ಥೆ ಅಧ್ಯಕ್ಷ ಯತೀಶ್, ‘ನಮ್ಮ ಶಾಲೆಯಲ್ಲಿ ಶಿಕ್ಷಕ ವರ್ಗದವರು ನಮ್ಮ ವೇತನಕ್ಕೆ ಕೆಲಸ ಮಾಡದೆ ಅವರ ಮನಸ್ಸಿನ ಅಂತರಾಳದ ಕೆಲಸವನ್ನು ಮಾಡುತ್ತಿದ್ದಾರೆ. ಏಕೆಂದರೆ ಅವರು ಸಹ ಗ್ರಾಮಾಂತರ ಪ್ರದೇಶದಲ್ಲಿ ಕಷ-ಪಟ್ಟು ಓದಿ ಬಂದಿರುವುದು ಇಲ್ಲಿಯ ಮಕ್ಕಳು ಒಳ್ಳೆಯ ಸ್ಥಾನಕ್ಕೆ ಹೋಗಬೇಕೆಂಬ ಉದ್ದೇಶದಿಂದ ಅವರು ಗುಣಮಟ್ಟದ ಪಾಠವನ್ನು ನೀಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಶಾಲೆಯಲ್ಲಿ ವಿದ್ಯಾಭ್ಯಾಸ ಜೊತೆಗೆ ಕ್ರೀಡಾಕೂಟದಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗಿಯಾಗಿ ನಮ್ಮ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ’ ಎಂದರು.