ಯುಗಾದಿ ಪೂರ್ವ ಬಿರುಗಾಳಿಗೆ ತೆಂಗಿನ ಮರ ಬಿದ್ದು ವ್ಯಕ್ತಿ ಬಲಿ

KannadaprabhaNewsNetwork |  
Published : Mar 22, 2026, 01:30 AM IST
ದೇವರಗುಡ್ಡ ಸಾವು | Kannada Prabha

ಸಾರಾಂಶ

ಯುಗಾದಿ ಹಿಂದಿನ ದಿನ ಬುಧವಾರದಂದು ಜಮೀನಿನಲ್ಲಿ ಕೆಲಸಕ್ಕೆ ಹೋಗಿ ಮರಳುವಾಗಿ ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರ ಬಿದ್ದು ರೈತರೊಬ್ಬರು ಮೃತಪಟ್ಟಿರುವ ದಾರುಣ ಘಟನೆಯು ಚಾಮರಾಜನಗರ ತಾಲೂಕಿನ ಅರಳೀಪುರ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯುಗಾದಿ ಹಿಂದಿನ ದಿನ ಬುಧವಾರದಂದು ಜಮೀನಿನಲ್ಲಿ ಕೆಲಸಕ್ಕೆ ಹೋಗಿ ಮರಳುವಾಗಿ ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರ ಬಿದ್ದು ರೈತರೊಬ್ಬರು ಮೃತಪಟ್ಟಿರುವ ದಾರುಣ ಘಟನೆಯು ಚಾಮರಾಜನಗರ ತಾಲೂಕಿನ ಅರಳೀಪುರ ಗ್ರಾಮದಲ್ಲಿ ನಡೆದಿದೆ.

ದೇವರಗುಡ್ಡ (ರೇವಣ್ಣ )(55) ಮೃತ ದುರ್ದೈವಿ. ಬುಧವಾರ ಸಂಜೆ ಹೊತ್ತು ಜಮೀನಿಗೆ ಕೆಲಸ ಮಾಡಲು ತೆರಳಿದ್ದಾರೆ. ಕೆಲಸ ಮುಗಿಸಿ ಮರಳುವಾಗ ಜೋರು ಬಿರುಗಾಳಿ ಸಹಿತ ಮಳೆ ಆವರಿಸಿದೆ. ಮಳೆ ಬಂದ ಕಾರಣ ರೇವಣ್ಣ ಅವರು ಮನೆಗೆ ಹಿಂದಿರುಗುವ ವೇಳೆ ತೆಂಗಿನ ಮರ ಬುಡಮೇಲಾಗಿದೆ. ರೇವಣ್ಣ ಅವರ ಮೇಲೆ ಬಿದ್ದಿದೆ. ಜಮೀನಿಗೆ ಹೋಗಿ ಎಷ್ಟು ಹೊತ್ತು ಕಳೆದರೂ ಹಿಂದಿರುಗದ ಕಾರಣ ಆತಂಕಕ್ಕೀಡಾದ ಮನೆಯವರು ರೇವಣ್ಣ ಅವರನ್ನು ಅರಸುತ್ತ ಜಮೀನಿನ ಬಳಿ ಬಂದಿದ್ದಾರೆ. ಈ ವೇಳೆ ತೆಂಗಿನ ಮರ ಬಿದ್ದು, ತೀವ್ರ ರಕ್ತಸ್ರಾವವಾಗಿ ರೇವಣ್ಣ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಸ್ವಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಕಲ್ಯಾಣಕ್ಕಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಜೀವನದ ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ಶ್ರೀ